More

    ಸ್ವಯಂ ಉದ್ಯೋಗದಿಂದ ಆರ್ಥಿಕವಾಗಿ ಸದೃಢ

    ಕಲಘಟಗಿ: ಮಹಿಳೆಯರು ಆರ್ಥಿಕವಾಗಿ ಸದೃಢರಾಗಿ ಜೀವನ ಕಟ್ಟಿಕೊಳ್ಳುವಲ್ಲಿ ಸ್ವಯಂ ಉದ್ಯೋಗದಿಂದ ಮಾತ್ರ ಸಾಧ್ಯ. ಉದ್ಯೋಗ ನಿರ್ವಿುಸುವಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕಾರ್ಯ ಶ್ಲಾಘನೀಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಹೇಳಿದರು.

    ಪಟ್ಟಣದ ಹನ್ನೆರಡು ಮಠದ ಸಭಾಭವನದಲ್ಲಿ ಗುರುವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಸ್ತಾವನೆ ಮೇರೆಗೆ ಹಮ್ಮಿಕೊಂಡಿದ್ದ ಉಚಿತ ಹೊಲಿಗೆಯಂತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ದೇಶದಲ್ಲಿ ಉಜ್ವಲ ಯೋಜನೆ ನೀಡುವುದರೊಂದಿಗೆ ಎಲ್ಲ ಮಹಿಳೆಯರನ್ನು ಹೊಗೆ ಮುಕ್ತ ಅಡುಗೆ ಮಾಡಲು ಶ್ರಮಿಸಿದ ಏಕೈಕ ಪಕ್ಷ ಬಿಜೆಪಿ. ಇದರ ಜತೆಗೆ ಮೋದಿ ಹಾಗೂ ಪ್ರಲ್ಹಾದ ಜೋಶಿ ಅವರಂತ ಮುತ್ಸದ್ಧಿ ನಾಯಕರು ಇರುವವರೆಗೂ ನಮ್ಮ ದೇಶದ ಮಹಿಳೆಯರು ಸದೃಢ ಬದುಕು ಕಟ್ಟಿಕೊಳ್ಳಲು ಅನೇಕ ಯೋಜನೆ ನೀಡುತ್ತ ಬಂದಿದ್ದಾರೆ ಎಂದರು.

    ಇಂದು ಜಿಲ್ಲೆಯ ಅನೇಕ ಗ್ರಾಮಗಳ ಮಹಿಳೆಯರಿಗೆ ಉಚಿತವಾಗಿ ಹೊಲಿಗೆಯಂತ್ರ ನೀಡುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ನಿರತರಾಗುತ್ತಿದ್ದಾರೆ ಎಂದರು.

    ಬಿಜೆಪಿ ಮುಖಂಡ ಶಶಿಧರ ನಿಂಬಣ್ಣವರ ಮಾತನಾಡಿ, ರಾಜ್ಯ ಸರ್ಕಾರ ನೀಡುತ್ತಿರುವುದು ಶಾಶ್ವತ ಯೋಜನೆಗಳಲ್ಲ. ಆದರೆ, ಬಿಜೆಪಿ ಆಡಳಿತ ಇದ್ದರೂ,ಇರದಿದ್ದರೂ ನಿಮ್ಮ ಮನೆಯ ಸದಸ್ಯರು ಅಜರಾಮರವಾಗಿ ಶಾಶ್ವತ ಜೀವನ ಕಟ್ಟಿಕೊಳ್ಳಲು ಹೊಸ ಹೊಸ ಯೋಜನೆಗಳನ್ನು ನೀಡುತ್ತದೆ ಎಂದರು.

    ಹನ್ನೆರಡು ಮಠದ ಷ.ಬ್ರ. ಶ್ರೀ ರೇವಣಸಿದ್ಧ ಶಿವಾಚಾರ್ಯರು ಸಾನ್ನಿದ್ಯ ವಹಿಸಿದ್ದರು.

    ನಿಂಗಪ್ಪ ಸುತಗಟ್ಟಿ, ಸಿ.ಬಿ. ಹೊನ್ನಿಹಳ್ಳಿ, ಬಸವರಾಜ ಕರಡಿಕೊಪ್ಪ, ಐ.ಸಿ. ಗೋಕುಲ್, ಗಂಗಾಧರ ಗೌಳಿ, ಬಸವರಾಜ ಹೊನ್ನಿಹಳ್ಳಿ, ಸಚಿನ ಆಲತಗಿ, ಅಪರ್ಣಾ ದೊರಗಲ್, ಶಿವಲಿಂಗಪ್ಪ ಏಲಿವಾಳ, ಅಣ್ಣಪ್ಪ ಓಲೇಕಾರ, ಆಕಾಶ ಮೂಗಣ್ಣವರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts