More

    ಚರ್ಮೋತ್ಪನ್ನ ಉತ್ಪಾದಿಸಿ ಆರ್ಥಿಕ ಸ್ವಾವಲಂಬಿಗಳಾಗಿ

    ಚಿತ್ರದುರ್ಗ: ತರಬೇತಿಯೊಂದಿಗೆ ಚರ್ಮೋತ್ಪನ್ನಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಸಲಹೆ ನೀಡಿದರು.

    ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಮತ್ತು ಚೆನ್ನೈನ ಸೆಂಟ್ರಲ್ ಫುಟ್‌ವೇರ್ ಟ್ರೈನಿಂಗ್ ಇನ್ಸ್‌ಟಿಟ್ಯೂ ಟ್ ಸಹಯೋಗದಲ್ಲಿ ಸೋಮವಾರ ನಗರದ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಶಿವಶರಣ ಮಾದಾರ ಚನ್ನಯ್ಯ ಚರ್ಮ ಕೈಗಾರಿಕಾ ಮತ್ತು ವಿವಿಧೋದ್ದೇಶ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

    ಚರ್ಮ ಕುಶಲಕರ್ಮಿ ಸಮುದಾಯದ, ಚರ್ಮೋತ್ಪನ್ನಗಳ ಉದ್ಯೋಗ ಅತ್ಯುನ್ನತ ಹಾಗೂ ಶ್ರೇಷ್ಠವಾದದ್ದು. ಕುಶಲಕರ್ಮಿಗಳು ತರ ಬೇತಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕೆಂದರು.

    ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಚರ್ಮ ಕೈಗಾರಿಕಾ ಕ್ಷೇತ್ರದಲ್ಲಿ ತರಬೇತಿ ಪ್ರಾರಂಭಿಸುತ್ತಿರುವುದು ಸ್ವಾಗತಾರ್ಹವಾಗಿದೆ. ಚರ್ಮ ಕುಶಲಕರ್ಮಿಗಳು ಸರ್ಕಾರ ಸವಲತ್ತುಗಳ ಸದ್ಬಳಕೆ ಮೂಲಕ ತಮ್ಮ ಜೀವನ ಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕೆಂದರು. ಕಾರ‌್ಯಕ್ರಮದಲ್ಲಿ ಕೆಜಿಎಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ನಟರಾಜ್, ಚೆನ್ನೈನ ಸಿಎಫ್‌ಟಿಐ ನಿರ್ದೇಶಕ ಕೆ.ಮುರಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts