More

    ಆರ್ಥಿಕ ಕ್ಷೇತ್ರದಲ್ಲಿ ಜೊಲ್ಲೆ ಪರಿವಾರ ಸಾಧನೆ

    ಬೆಳಗಾವಿ: ಸಮಾಜದ ಅಭಿವೃದ್ಧಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತ ಬರುತ್ತಿರುವ ಜೊಲ್ಲೆ ಪರಿವಾರ ಆರ್ಥಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಸಾಧನೆ ಮಾಡಿದೆ ಎಂದು ಭೂತರಾಮನಹಟ್ಟಿ ಮುಕ್ತಿಮಠದ ಶಿವಸಿದ್ಧಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

    ತಾಲೂಕಿನ ಕಾಕತಿ ಗ್ರಾಮದಲ್ಲಿ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಲಿ. 38ನೇ ಶಾಖೆ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಜೊಲ್ಲೆ ಪರಿವಾರವು ರಾಜಕೀ ಯೇತ ರವಾಗಿ ಸಮಾಜ ಸೇವೆ ಮಾಡಿಕೊಂಡು ಬರುತ್ತಿದೆ. ಇದೀಗ ರಾಣಿ ಚನ್ನಮ್ಮಳ ತವರೂರು ಕಾಕತಿ ಗ್ರಾಮದಲ್ಲಿ ಜ್ಯೋತಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಶಾಖೆ ಆರಂಭಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಪ್ರತಿಯೊಬ್ಬರೂ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಜವಾಬ್ದಾರಿಯಿಂದ ಸಕಾಲಕ್ಕೆ ಮರುಪಾವತಿಸಬೇಕು. ಇದರಿಂದ ಆರ್ಥಿಕ ಕ್ಷೇತ್ರ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗಲಿದೆ. ಜೊಲ್ಲೆ ಪರಿವಾರದ ಕುಡಿಗಳು ಮನೆತನದ ಗೌರವ ಬೆಳೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ವಿಶೇಷ ಸ್ಥಾನಮಾನ: ಕಾಕತಿ ಶಿವಪೂಜಿ ಮಠದ ರಾಚಯ್ಯ ಸ್ವಾಮೀಜಿ ಮಾತನಾಡಿ, ಜೊಲ್ಲೆ ಪರಿವಾರವು ಧರ್ಮದಿಂದ ಕೂಡಿರುವುದರಿಂದಲೇ ಸಮಾಜದಲ್ಲಿ ವಿಶೇಷ ಸ್ಥಾನಮಾನ ಪಡೆದಿದೆ. ಈ ಸಹಕಾರಿಯಲ್ಲಿ ಎಲ್ಲರೂ ನಿರ್ಭಯವಾಗಿ ವ್ಯವಹಾರ ಮಾಡಬೇಕು ಎಂದು ಸಲಹೆ ನೀಡಿದರು.

    ಯಕ್ಸಂಬಾದ ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಬಸವ ಜ್ಯೋತಿ ಯೂಥ್ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಸಂಜಯ ಪಾಟೀಲ, ಡಾ.ರಾಜೇಶ ನೇರ್ಲಿ, ಮಾರುತಿ ಅಷ್ಟಗಿ, ರವಿ ಹಂಚಿ, ಶ್ರೀಶೈಲ ಯಮಕನಮರಡಿ, ಬಸವರಾಜ ಗಾಣಿಗೇರ ಹಾಗೂ ಕಾಕತಿ ಗ್ರಾಮಸ್ಥರು ಇದ್ದರು.

    ಸಮಾಜ ಸೇವೆ ಅತ್ಯಂತ ಶ್ರೇಷ್ಠ

    ಜೊಲ್ಲೆ ಪರಿವಾರವು ಸಮಾಜ ಸೇವೆ ಶ್ರೇಷ್ಠ ಸೇವೆ ಎಂಬ ಸಂಕಲ್ಪದೊಂದಿಗೆ ಹಲವು ದಶಕಗಳಿಂದ ಸಮಾಜ ಸೇವೆ ಮಾಡಿಕೊಂಡು ಬರುತ್ತಿದೆ. 30 ವರ್ಷಗಳ ಹಿಂದೆ ಯಕ್ಸಂಬಾದಲ್ಲಿ ಆರಂಭವಾದ ಬೀರೇಶ್ವರ ಕೋ-ಆಪರೇಟಿವ್ ಸೊಸೈಟಿ ಇದೀಗ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ 150 ಶಾಖೆ ಹೊಂದಿದೆ. ಕಳೆದ ವರ್ಷ ಆರಂಭವಾದ ಜ್ಯೋತಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಸ್ಥೆ ಇದೀಗ 38 ಶಾಖೆ ಆರಂಭಿಸಿದೆ. ಅಲ್ಲದೆ, ಒಂದೇ ವರ್ಷದಲ್ಲಿ 78 ಕೋಟಿ ರೂ. ಠೇವಣಿ ಹೊಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆದು ಜನರಿಗೆ ಹತ್ತಿರವಾಗಲಿದೆ ಎಂದು ಬಸವ ಜ್ಯೋತಿ ಯೂಥ್ ಫೌಂಡೇಷನ್ ಅಧ್ಯಕ್ಷ ಹಾಗೂ ಯುವ ನಾಯಕ ಬಸವಪ್ರಸಾದ ಜೊಲ್ಲೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts