More

    2025ರವರೆಗೆ ಆರ್ಥಿಕ ಸಂಕಷ್ಟ – ಆಕ್ಸ್​ಫರ್ಡ್ ಇಕನಾಮಿಕ್ಸ್ ವರದಿಯಲ್ಲಿ ಉಲ್ಲೇಖ

    ನವದೆಹಲಿ: ಕರೊನಾ ಮಹಾಮಾರಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ದೇಶದ ಆರ್ಥಿಕ ಪರಿಸ್ಥಿತಿ 2025ರ ವರೆಗೂ ಹೀಗೇ ಮುಂದುವರಿಯಲಿದೆ ಎಂದು ಆಕ್ಸ್​ಫರ್ಡ್ ಇಕನಾಮಿಕ್ಸ್ ಅಭಿಪ್ರಾಯಪಟ್ಟಿದೆ. ಕರೊನಾ ಸಾಂಕ್ರಾಮಿಕತೆಗೂ ಮುಂಚೆಯೇ ಇಳಿಮುಖವಾಗಿದ್ದ ಆರ್ಥಿಕ ಪರಿಸ್ಥಿತಿ ಇನ್ನೂ ಹದಗೆಡುವ ಸಂಭವವಿದೆ ಎಂದು ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ಆರ್ಥಿಕತೆ ಕುರಿತ ಮುಖ್ಯಸ್ಥೆ ಪ್ರಿಯಾಂಕಾ ಕಿಶೋರ್ ವರದಿಯೊಂದರಲ್ಲಿ ಹೇಳಿದ್ದಾರೆ. ಮಹಾಮಾರಿ ಕೊನೆಗೊಂಡ ನಂತರವೂ ಭಾರತ ಸಹಿತ ಅನೇಕ ದೇಶಗಳು ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸಲಿವೆ. ದೇಶದ ಉತ್ಪನ್ನ ಕರೊನಾ ವೈರಸ್​ಪೂರ್ವಕ್ಕಿಂತ ಶೇ. 12ರಷ್ಟು ಕಡಿಮೆಯಾಗಿರಲಿದೆ ಎಂದು ಅವರು ಹೇಳಿದ್ದಾರೆ.

    ಕಾರ್ಪೆರೇಟ್ ಕಂಪನಿಗಳ ಸಮಸ್ಯೆ, ಬ್ಯಾಂಕ್​ಗಳ ಮರಳಿ ಬಾರದ ಸಾಲಗಳ (ಎನ್​ಪಿಎ) ಹೆಚ್ಚಳ, ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಬಿಕ್ಕಟ್ಟು ಮತ್ತು ಕಾರ್ವಿುಕ ಮಾರುಕಟ್ಟೆಯ ದೌರ್ಬಲ್ಯ ಆರ್ಥಿಕ ಬೆಳವಣಿಗೆಗೆ ತೀವ್ರ ಅಡ್ಡಿಯಾಗಿದೆ. ಆದರೆ, ದೇಶದ ಸದ್ಯದ ಆರ್ಥಿಕ ಪರಿಸ್ಥಿತಿಯಿಂದ ಪ್ರಧಾನಿಯವರ ಐದು ಟ್ರಿಲಿಯನ್ ಆರ್ಥಿಕತೆಯ ಕನಸಿಗೆ ಯಾವುದೇ ಭಂಗ ಬಂದಿಲ್ಲ. ಅದರ ಸಾಕಾರಕ್ಕಾಗಿ ಹಲವು ಕ್ರಮಗಳನ್ನೂ ಸರ್ಕಾರ ಘೋಷಿಸುತ್ತಿದೆ.

    ಇದನ್ನೂ ಓದಿ: ಪಿನ್​ಪಾಯಿಂಟ್ ಸ್ಟ್ರೈಕ್ ಫೇಕ್​ – ಡಿಜಿಎಂಒ ಸ್ಪಷ್ಟೀಕರಣ

    ಮೋದಿ ಸರ್ಕಾರ ಹಠಾತ್ ಲಾಕ್​ಡೌನ್ ಘೋಷಿಸಿದ್ದರಿಂದ ಚಟುವಟಿಕೆಗಳು ಸ್ಥಗಿತಗೊಂಡು ದೇಶದ ಜಿಡಿಪಿ 2021 ಮಾರ್ಚ್ ಹೊತ್ತಿಗೆ ಶೇಕಡ 10.3 ಕುಸಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭವಿಷ್ಯ ನುಡಿದಿದೆ. ಚೇತರಿಕೆಯ ಹಲವು ಚಟುವಟಿಕೆ, ಲಕ್ಷಣಗಳು ಕಾಣುತ್ತಿದ್ದರೂ ಕಳವಳದ ಹಲವು ಅಂಶಗಳು ಹಾಗೇ ಉಳಿದುಕೊಂಡಿವೆ ಎಂಬುದು ಆಕ್ಸ್​ಫರ್ಡ್ ಇಕನಾಮಿಕ್ಸ್​ನ ವಿಶ್ಲೇಷಣೆಯಾಗಿದೆ. 2021ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇಕಡ ಮೈನಸ್ 10.6 ಆಗಲಿದೆ ಎಂದು ಮೂಡೀಸ್ ಗುರುವಾರ ಹೇಳಿದೆ. ಈ ಹಿಂದೆ ಅದು ಶೇಕಡ ಮೈನಸ್ 11.5 ಆಗಲಿದೆ ಎಂದು ಹೇಳಿತ್ತು.

    ಶಿವಸೇನಾ ಕಾರ್ಯಕರ್ತ ‘ಕರಾಚಿ’ ಸ್ವೀಟ್ಸ್ ಹೆಸರು ಬದಲಿಸಿ ಅಂದ: ಆ ಬೇಡಿಕೆ ಪಕ್ಷದ್ದಲ್ಲ ಎಂದ ಶಿವಸೇನೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts