More

    ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಲಿರುವ ನಟ ಸಲ್ಮಾನ್​ಖಾನ್​ ಭೇಟಿಯಾಗಲು ಈ ಅಭಿಮಾನಿ ಮಾಡಿದ್ದೇನು ಗೊತ್ತಾ?

    ಗುವಾಹಟಿ: ಸಿನಿಮಾ ನಟ ನಟಿಯರ ಬಗ್ಗೆ ಅಭಿಮಾನಿಗಳು ಏನಾದರೂ ಮಾಡುತ್ತಿರುತ್ತಾರೆ. ಇದು ಕೂಡ ಅಂತಹದ್ದೇ ಸುದ್ದಿ!

    ಅಸ್ಸಾಂನ 52 ವರ್ಷದ ವ್ಯಕ್ತಿಯೊಬ್ಬ ನಟ ಸಲ್ಮಾನ್​ ಖಾನ್​ ಅವರನ್ನು ಕಾಣಲು ಬರೋಬ್ಬರಿ 600 ಕಿ.ಮೀ. ಸೈಕಲ್​ ತುಳಿದಿದ್ದಾನೆ. ಆಸ್ಸಾಂನ ಟಿನ್ಸುಕಿಯಾ ನಿವಾಸಿ ಭೂಪೆನ್​ ಲಿಕ್ಸನ್​, ಫೆಬ್ರವರಿ 8ರಂದು ಸೈಕಲ್​ ಸವಾರಿ ಆರಂಭಿಸಿದ್ದು ನಿನ್ನೆ (ಗುರುವಾರ ಫೆ.13) ಗುವಾಹಟಿಗೆ ತಲುಪಿದ್ದಾನೆ.

    ಫೆಬ್ರವರಿ ಗುವಾಹಟಿಯಲ್ಲಿ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು ಅದರಲ್ಲಿ ಭಾಗವಹಿಸಲು ಸಲ್ಮಾನ್​ ಖಾನ್​ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭೂಪೆನ್​ ನಗರಕ್ಕೆ ಆಗಮಿಸಿದ್ದಾನೆ.

    ಫೆಬ್ರವರಿ 8ರಂದು ನಮ್ಮೂರು ಟಿನ್ಸುಕಿಯಾದಿಂದ ಪ್ರಯಾಣ ಆರಂಭಿಸಿದೆ. ಗುವಾಹಟಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಲ್ಮಾನ್​ ಆಗಮಿಸುತ್ತಿದ್ದಾರೆ ಎಂದು ತಿಳಿಯಿತು. ಆದರಿಂದ ಇಲ್ಲಿಗೆ ಬಂದೆ ಎಂದು ಭೂಪೆನ್​ ಹೇಳಿದರು.

    ಭೂಪೆನ್​ ಲಿಕ್ಸನ್​ ಮೂಲತಃ ಸೈಕಿಲಿಸ್ಟ್​ ಆಗಿದ್ದು 60 ನಿಮಿಷದಲ್ಲಿ 48 ಕಿ.ಮೀ. ಹ್ಯಾಂಡಲ್​ ಮುಟ್ಟದೆ ಸೈಕಲ್​ ಓಡಿಸಿದ ಸಾಧನೆ ಬಗ್ಗೆ ಇಂಡಿಯಾ ಬುಕ್​ ಆಪ್​ ರೆಕಾರ್ಡ್​ನಲ್ಲಿ ದಾಖಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts