More

    ಬೆಂಗಳೂರಿನಲ್ಲೇ ಚಿತ್ರನಗರಿ … ಮುಖ್ಯಮಂತ್ರಿ ಯಡಿಯೂರಪ್ಪ ಆಶ್ವಾಸನೆ

    ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕನ್ನಡ ಚಿತ್ರರಂಗದ ನಿಯೋಗವು ಕಳೆದ ತಿಂಗಳೇ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಬೇಕಿತ್ತು. ಈ ಕುರಿತು ಭೇಟಿ ಸಹ ನಿಗದಿಯಾಗಿತ್ತು. ಅಷ್ಟರಲ್ಲಿ, ಮುಖ್ಯಮಂತ್ರಿಗಳಿಗೆ ಕರೊನಾ ಪಾಸಿಟಿವ್​ ಆದ ಹಿನ್ನೆಲೆಯಲ್ಲಿ, ಈ ಭೇಟಿ ಸಾಧ್ಯ ಆಗಿರಲಿಲ್ಲ.

    ಇದನ್ನೂ ಓದಿ: ನಾಳೆ ಸರ್​ಪ್ರೈಸ್​ನೊಂದಿಗೆ ಭೇಟಿಯಾಗ್ತಾರಂತೆ ರಿಷಭ್​ …

    ಬುಧವಾರ ಬೆಳಿಗ್ಗೆ ಈ ಭೇಟಿ ಕೊನೆಗೂ ಸಾಧ್ಯವಾಗಿದೆ. ಶಿವರಾಜಕುಮಾರ್​ ನೇತೃತ್ವದ ಕನ್ನಡ ಚಿತ್ರರಂಗದ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಕಿರುತೆರೆ ಮತ್ತು ಚಿತ್ರರಂಗವನ್ನು ಅವಲಂಬಿಸಿರುವ ಚಿತ್ರನಗರಿ ನಿರ್ಮಾಣ, ಕಾರ್ಮಿಕರಿಗೆ ಪ್ಯಾಕೇಜ್, ಚಿತ್ರಮಂದಿರ ಪ್ರಾರಂಭ, ದರ ನಿಗದಿ, ತೆರಿಗೆ ವಿನಾಯಿತಿ ಮತ್ತು ಚಿತ್ರರಂಗದ ಪುನಶ್ಚೇತನದ ಕುರಿತಾಗಿ ಮನವಿ ಸಲ್ಲಿಸಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಮಹತ್ವಾಕಾಂಕ್ಷೆಯ ಚಿತ್ರನಗರಿಯನ್ನು ಬೆಂಗಳೂರಿನಲ್ಲಿ ನಿರ್ಮಿಸಲು ನಿರ್ಧರಿಸಿದ್ದು, ಆದಷ್ಟು ಬೇಗ ಜಾಗ ಗುರುತಿಸಲಾಗವುದು ಎಂದು ಹೇಳಿದ್ದಾರೆ. ಜತೆಗೆ, ಚಿತ್ರನಗರಿಗಾಗಿ ಬಜೆಟ್ ನಲ್ಲಿ 500 ಕೋಟಿ ರೂ ಕಾದಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಯಾವುದೇ ಅತಿಕ್ರಮಣ ನಿರ್ಮಾಣ ಮಾಡಿಲ್ಲ ಎಂದ ಕಂಗನಾ

    ಈ ಸಂದರ್ಭದಲ್ಲಿ ಶಿವರಾಜಕುಮಾರ್​ ಅವರ ಜತೆಗೆ ಯಶ್​, ತಾರಾ, ‘ದುನಿಯಾ’ ವಿಜಯ್​, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್​, ಮಾಜಿ ಅಧ್ಯಕ್ಷ ಸಾ,ರಾ. ಗೋವಿಂದು ಸೇರಿದಂತೆ ಹಲವರು ಭಾಗವಹಿಸಿದ್ದಾರೆ.

    ನಿಮ್ಮ ದೇಹ ನಿಮ್ಮದಲ್ಲ, ನಿಮ್ಮ ಅಪ್ಪ-ಅಮ್ಮ ಕೊಟ್ಟಿರುವ ಭಿಕ್ಷೆ… ಹೀಗಂತ ನಟ ಯಶ್​ ಹೇಳಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts