ನಟ ಚಿಕ್ಕಣ ನಾಯಕನಾಗಿ ನಟಿಸಿದ ‘ಉಪಾಧ್ಯಕ್ಷ’ 26ಕ್ಕೆ ತೆರೆಗೆ

blank

ಹುಬ್ಬಳ್ಳಿ : ಹಳ್ಳಿ ಸೊಗಡಿನ ಕಥೆ ಹೊಂದಿರುವ ಉಪಾಧ್ಯಕ್ಷ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದು, ರಾಜ್ಯಾದ್ಯಂತ ಜ. 26ರಂದು ತೆರೆಕಾಣಲಿದೆ ಎಂದು ಚಲನಚಿತ್ರ ನಟ ಚಿಕ್ಕಣ್ಣ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12 ವರ್ಷಗಳ ಹಿಂದೆ ಹಾಸ್ಯ ನಟ ಶರಣ ನಾಯಕ ನಟನಾಗಿ ಅಭಿನಯಿಸಿದ ಅಧ್ಯಕ್ಷ ಚಲನಚಿತ್ರದ ಮುಂದುವರೆದ ಚಿತ್ರ ಇದಾಗಿದೆ ಎಂದರು.

ಈವರೆಗೆ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೆನೆ. ಚಿತ್ರದಲ್ಲಿ ಉತ್ತಮ ಪ್ರೇಮಕಥೆಯೂ ಇದೆ. ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಜನರ ಮನ ಗೆದ್ದಿವೆ ಎಂದು ಹೇಳಿದರು.

ಚಲನಚಿತ್ರದ ನಿರ್ದೇಶಕ ಅನಿಲಕುಮಾರ ಮಾತನಾಡಿ, ಅಧ್ಯಕ್ಷ ಚಲನಚಿತ್ರದ ಕಥೆ ಮುಗಿದ ನಂತರದ ಕಥಾವಸ್ತು ಉಪಾಧ್ಯಕ್ಷ ಚಲನಚಿತ್ರ ಇದೆ ಎಂದರು.

ಡಿ.ಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿಗೌಡ ಈ ಚಿತ್ರ ನಿರ್ವಿುಸಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರು, ಕುದರೆಮುಖ ಸೇರಿದಂತೆ ರಾಜ್ಯದ ವಿವಿಧೆಡೆ ಚಿತ್ರೀಕರಣ ನಡೆಸಲಾಗಿದೆ. ಸಂಗೀತ ನಿರ್ದೇಶಕ ಅರ್ಜುನ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಶೇಖರಚಂದ್ರ ಛಾಯಾಗ್ರಹಣ, ರಾಜಶೇಖರ ಅವರ ಸಂಭಾಷಣೆ, ಕೆ.ಎಂ. ಪ್ರಕಾಶ ಅವರ ಸಂಕಲನ, ಮೋಹನ ಕೆರೆ ಅವರ ಕಲಾ ನಿರ್ದೇಶನವಿದೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ ಎಂದು ವಿವರಿಸಿದರು. ಸಾಧುಕೋಕಿಲ, ಧರ್ಮಣ್ಣ ಸೇರಿದಂತೆ ಪ್ರಮುಖ ನಟರು ನಟಿಸಿದ್ದಾರೆ ಎಂದು ಹೇಳಿದರು.

ಚಿತ್ರದ ನಾಯಕ ನಟಿ ಮಲೈಕ ಮಾತನಾಡಿದರು. ನಟ ಧರ್ಮಣ್ಣ, ನಾಗರಾಜ, ಶಿವಾನಂದ ಮುತ್ತಣ್ಣವರ ಸುದ್ದಿಗೋಷ್ಠಿಯಲ್ಲಿ ಇದ್ದರು.

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…