More

    ನೀತಿಸಂಹಿತೆ ಉಲ್ಲಂಘನೆ 22 ಪ್ರಕರಣ ದಾಖಲು

    ಕೋಲಾರ: ಚುನಾವಣಾ ವೆಚ್ಚಗಳಿಗೆ ಸಂಬಂಧಿಸಿದಂತೆ ಒಟ್ಟು 4 ಮತ್ತು ಅಬಕಾರಿ ಉಲ್ಲಂಘನೆಯಡಿ ಒಟ್ಟು 18 ಎಫ್​ಐಆರ್​ ಸೇರಿದಂತೆ ಒಟ್ಟು 22 ಪ್ರಕರಣಗಳು ದಾಖಲಾಗಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಕ್ರಂಪಾಷಾ ಮಾಹಿತಿ ನೀಡಿದ್ದಾರೆ.

    ಲೋಕಸಭೆ ಚುನಾವಣೆಯ ಅಧಿಸೂಚನೆ ಪ್ರಕಟಗೊಂಡ 24 ತಾಸಿನದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 1,237 ಕಡೆ ಗೋಡೆ ಬರಹ, ್ಲೆಕ್ಸ್​, ಬ್ಯಾನರ್​ಗಳನ್ನು ತೆರವುಗೊಳಿಸಲಾಗಿದೆ. ಒಟ್ಟು 40 ತಂಡಗಳು ಕಾರ್ಯಾಚರಣೆ ನಡೆಸಿ ಸರ್ಕಾರಿ ಜಾಗದಲ್ಲಿ ಆನಧಿಕೃತವಾಗಿ ಅಳವಡಿಸಲಾಗಿದ್ದ 239 ಗೋಡೆ ಬರಹಗಳು, 393 ಪೋಸ್ಟರ್​, 424 ಬ್ಯಾನರ್​, ಇತರೆ 181 ಅದೇ ರೀತಿ 48 ತಾಸಿನಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 48 ಗಂಟೆಯೊಳಗೆ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 44 ತಂಡಗಳು ಕಾರ್ಯಾಚರಣೆಗೊಳಿಸಿ ಗೋಡೆ ಬರಹಗಳು 78, ಪೋಸ್ಟರ್​- 221, ಬ್ಯಾನರ್​ 214, ಇತರ -94 ಸೇರಿದಂತೆ ಒಟ್ಟು 608 ಪ್ರಕರಣ ನಿಯಮಾನುಸಾರವಾಗಿ ತೆರವುಗೊಳಿಸಿ 1 ದೂರನ್ನು ದಾಖಲಾಗಿದೆ.
    72 ತಾಸಿನಲ್ಲಿ ಖಾಸಗಿ ಸ್ಥಳಗಳಲ್ಲಿ ಒಟ್ಟು 39 ತಂಡಗಳು ಕಾರ್ಯಾಚರಣೆಗೊಳಿಸಿ ಗೋಡೆ ಬರಹ 68, ಪೋಸ್ಟರ್​- 244, ಬ್ಯಾನರ್​ 171, ಇತರ 124 ಸೇರಿದಂತೆ ಒಟ್ಟು 605 ಕಡೆ ತೆರವುಗೊಳಿಸಲಾಗಿದೆ.

    ಬಂಗಾರಪೇಟೆ ಪೊಲೀಸ್​ ಠಾಣೆ ವ್ಯಾಪ್ತಿಯ ದಿಂಬ ಚೆಕ್​ಪೋಸ್ಟ್​ನಲ್ಲಿ ಸೋಮವಾರ ರಾತ್ರಿ ಅನುಮತಿಯಿಲ್ಲದೆ ಹಾಗೂ ದಾಖಲೆಗಳು ಇಲ್ಲದೆ ಟೆಂಪೋ ವಾಹನದಲ್ಲಿ ಅಂದಾಜು 60 ಸಾವಿರ ರೂ. ಬೆಲೆಯ 50 ಕೆಜಿ ತೂಕದ 40 ಅಕ್ಕಿ ಮೂಟೆಗಳು ಮತ್ತು ಮತ್ತೊಂದು ಈಚರ್​ ವಾಹನದಲ್ಲಿ ಅಂದಾಜು 3 ಲಕ್ಷ ರೂ ಮೌಲ್ಯದ 50 ಕೆ.ಜಿ ತೂಕದ 240 ಮೂಟೆಗಳನ್ನು ಸೇರಿದಂತೆ ಒಟ್ಟಾರೆ 4,20,000 ಮೌಲ್ಯದ 280 ಅಕ್ಕಿ ಮೂಟೆಗಳು ವಶಕ್ಕೆ ಪಡೆದು ಎಫ್​ಐಆರ್​ ದಾಖಲಿಸಲಾಗಿದೆ.

    ಕೋಲಾರ ತಾಲೂಕಿನ ವೇಮಗಲ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ದಾಖಲೆಗಳು ಇಲ್ಲದೆ ಸಾಗಿಸುತ್ತಿದ್ದ 1.90 ಲಕ್ಷ ರೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖಾ ತಂಡಗಳು ವಿವಿಧೆಡೆ ತಪಾಸಣೆ ನಡೆಸಿ ದಾಖಲೆಗಳು ಇಲ್ಲದೆ ಸಾಗಿಸುತ್ತಿದ್ದ 2.78 ಲಕ್ಷ ರೂ. ನಗದನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡು 12 ಮಂದಿಯನ್ನು ಬಂಧಿಸಿದ್ದಾರೆ. ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು 48,06,769 ರೂ. ಬೆಲೆಬಾಳುವ 17,986 ಲೀಟರ್​ ಅನಧಿಕೃತ ಮದ್ಯವನ್ನು ವಶಕ್ಕೆ ಪಡೆದು 18 ಪ್ರಕರಣ ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts