More

    ಕಾಳಗಿ; ಕೊರಬಾ ಸಾವು ಕೋಲಿ ಸಮಾಜ ಪ್ರತಿಭಟನೆ

    ಕಾಳಗಿ: ಕಲಗುರ್ತಿ ಗ್ರಾಮದ ದೇವಾನಂದ ಕೊರಬಾ ಆತ್ಮಹತ್ಯೆಗೆ ಕಾರಣರಾದವರನ್ನು ಶೀಘ್ರ ಬಂಧಿಸುವAತೆ ಒತ್ತಾಯಿಸಿ ಡಾ.ಅಂಬೇಡ್ಕರ್ ವೃತ್ತದಲ್ಲಿ ಕೋಲಿ ಸಮಾಜದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.

    ಕೃಷ್ಣ ಕಾಡಾ ಮಾಜಿ ಅಧ್ಯP್ಷÀ ಶರಣಪ್ಪ ತಳವಾರ ಮಾತನಾಡಿ, ಪೊಲೀಸರ ಕಿರುಕುಳದಿಂದ ದೇವಾನಂದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಾಡಬೂಳ ಠಾಣೆಯಲ್ಲಿ ಕೇಸ್ ದಾಖಲಿಸಿ ಮೂರು ತಿಂಗಳಾದರೂ ಆರೋಪಿಗಳನ್ನು ಬಂಧಿಸಿಲ್ಲ. ಸಾವಿಗೆ ಕಾರಣರಾದವರು ಜಿಲ್ಲೆಯಲ್ಲಿಯೇ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಈ ಪ್ರಕರಣವನ್ನು ಸರ್ಕಾರ, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥ ರಾಜಕೀಯ ಮುಖಂಡರು ಹಾಗೂ ಆರಕ್ಷಕರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

    ಕೋಲಿ ಸಮಾಜದ ಯುವ ಘಟಕ ತಾಲೂಕು ಅಧ್ಯಕ್ಷ ಹಾಗೂ ಗೋಟೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ ಕಮಕನೂರ ಮಾತನಾಡಿ, ಜಿಲ್ಲೆಯಲ್ಲಿ ಕೋಲಿ ಸಮಾಜದ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಎರಡು ತಿಂಗಳಿAದ ಅಪ್ರಾಪ್ತ ಯುವತಿ ನಾಪತ್ತೆಯಾಗಿದ್ದು, ಪತ್ತೆ ಹಚ್ಚುವ ಕೆಲಸವಾಗಿಲ್ಲ. ಪೊಲೀಸ್ ಇಲಾಖೆ ನಿಷ್ಕ್ಟೀಯವಾಗಿದೆ ಎಂದು ದೂರಿದರು.

    ಅಂಬಿಗರ ಚೌಡಯ್ಯ ದೇವಸ್ಥಾನದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಇದರಿಂದಾಗಿ ಕೆಲ ಸಮಯ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

    ತಹಸೀಲ್ದಾರ್ ಘಮಾವತಿ ರಾಠೋಡ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಕೋಲಿ, ಕಬ್ಬಲಿಗ ಸಮನ್ವಯ ಸಮಿತಿ ಸಂಚಾಲಕ ಅವ್ವಣ್ಣ ಮ್ಯಾಕೇರಿ, ಕೋಲಿ ಸಮಾಜದ ತಾಲೂಕು ಅಧ್ಯP್ಷÀ ರೇವಣಸಿದ್ದಪ್ಪ ಮುಕರಂಬಾ, ಪ್ರಮುಖರಾದ ಶಿವಶರಣಪ್ಪ ಗುತ್ತೇದಾರ್, ಸಿದ್ದು ಕೇಶ್ವಾರ, ಕಾಶೀನಾಥ ತೆಲಗುಣಿ, ಮಾರುತಿ ನಾಯ್ಕೋಡಿ, ಮಾಲ್ಲಿಕಾರ್ಜುನ ಮರಗುತ್ತಿ, ಭೀಮರಾಯ ಮಲಘಾಣ, ಪ್ರವೀಣ್ ನಾಮದಾರ, ಜಗನ್ನಾಥ ಚಂದನಕೇರಿ, ಮಲ್ಲಪ್ಪ ದಿಗ್ಗಾಂವ್, ಭೀಮರಾಯ ದಂಡೋತಿ, ಪ್ರಭಾಕಾರ ರಟಕಲï, ನೀಲೇಶ ತೀರ್ಥ, ಚನ್ನಪ್ಪ ಹಲಚೇರಿ, ಶರಣು ಬಂಕಲಗಿ, ವಿಕ್ರಮ್ ನಾಮದಾರ, ನಾಗಣ್ಣ ತಳವಾರ, ಬಸವರಾಜ ಗುಂಪಾ, ಪೀರಪ್ಪ ನಾಟೀಕಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts