More

    ಶಿರಾಳಕೊಪ್ಪದಲ್ಲಿ ಹಬ್ಬದ ವಾತಾವರಣ

    ಶಿರಾಳಕೊಪ್ಪ: ಪಟ್ಟಣದ ಹಲವು ದೇವಸ್ಥಾನಗಳಲ್ಲಿ ವಿವಿಧ ಪೂಜೆ, ವಿಶೇಷ ಅಲಂಕಾರದೊAದಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
    ಪಟ್ಟಣದ ಸಂತೆ ಮೈದಾನದ ರಾಮದೇವರ ಬೀದಿಯಲ್ಲಿನ ರಾಮಮಂದಿರದಲ್ಲಿ ದೇವರಿಗೆ ವಿಶೇಷ ಅಲಂಕಾರದೊAದಿಗೆ ಪೂಜೆ ನಡೆಯಿತು. ಬೆಳಗ್ಗೆ ಹೊಂಡದ ಆಂಜನೇಯ ಸ್ವಾಮಿ ದೇವಾಲದ ಬಳಿ ರಾಮ ಭಕ್ತರು ಕೇಸರಿ ಬಣ್ಣದ ಸೀರೆ, ಶಾಲು ಧರಿಸಿ, ಮಹಿಳೆಯರು ಕುಂಭ, ಆರತಿ ತಟ್ಟೆ ಹಿಡಿದು ಉತ್ಸವ ಮೂರ್ತಿಯೊಂದಿಗೆ ಜೈ ಶ್ರೀ ರಾಮ್ ಘೋಷಣೆ ಕೂಗುತ್ತ ಮೆರವಣಿಗೆ ಸಾಗಿದರು. ಪುಟ್ಟ ಮಕ್ಕಳು ರಾಮ, ಸೀತೆ, ಲಕ್ಷ÷್ಮಣ, ಆಂಜನೇಯ ವೇಷ ಧರಿಸಿ ಮೆರವಣಿಗೆಯಲ್ಲಿ ವಿಶೇಷ ಮೆರುಗು ತಂದರು.
    ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಆಕಳು ಕರುವೊಂದು ಭಜನೆ, ಪೂಜೆ ಮಾಡುವವರೆಗೂ ಜತೆಯಲ್ಲಿದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿತು. ಪಟ್ಟಣದ ಕೆಳಗಿನ ಕೇರಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ರುದ್ರಾಭಿಷೇಕ, ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಹತ್ತಿರದ ಆಂಜನೇಯ ಸ್ವಾಮಿಗೆ ವಿಶೇಷ ಕುಂಕುಮ ಪೂಜೆ, ಅಲಂಕಾರ ಮಾಡಿ ಪ್ರಸಾದ ವಿತರಿಸಲಾಯಿತು.
    ಪಟ್ಟಣದಲ್ಲಿ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿಮುAಗಟ್ಟುಗಳನ್ನು ಮುಚ್ಚಿ ಬಂದ್ ಮಾಡಿದ್ದರು. ಬಸ್ ನಿಲ್ದಾಣದ ವೃತ್ತದ ಬಳಿ ಪೂಜೆ ಸಲ್ಲಿಸಿ ರಾಮೋತ್ಸವ ಆಚರಿಸಿದರು. ನೇತೃತ್ವವನ್ನು ಆದಿತ್ಯ ಗ್ಯಾಸ್ ಮಾಲಿಕ ಅಗಡಿ ಅಶೋಕ, ಚೆನ್ನವೀರಶೆಟ್ಟಿ, ಪವನ್ ಕಲಾಲ್ ಪಂಪ್‌ಹೌಸ್ ಮಂಜು, ಮಲ್ಲಿಕ್ ಕಲಾಲ್, ಚಂದ್ರಶೇಖರ ಮಂಚಾಲಿ, ಅಗಡಿ ಆದಿತ್ಯ, ಸುಧಾ ಹೋಟೆಲ್ ನಾಗೇಂದ್ರ, ಗೌರಮ್ಮ ಅಗಡಿ, ನಿವೇದಿತಾ ರಾಜು, ಆಶಾಮಂಜುನಾಥ, ವಸಂತಮ್ಮ ಜೋಗ ಭಂಡಾರಿ ಸೇರಿ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts