More

    ಶಕುನ ರಂಗನಾಥಸ್ವಾಮಿ ಅದ್ದೂರಿ ರಥೋತ್ಸವ

    ಕಡೂರು: ತಾಲೂಕಿನ ಸಖರಾಯಪಟ್ಟಣದ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೋವಿಂದನ ನಾಮಸ್ಮರಣೆಯೊಂದಿಗೆ ಬುಧವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
    ಮೂರು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಮೊಲ ಬಿಡುವ ಸೇವೆ ಮತ್ತು ಧಾರ್ಮಿಕ ಉತ್ಸವಗಳು ನೆರವೇರಿದವು. ಬುಧವಾರ ಬೆಳಗ್ಗೆಯಿಂದಲೇ ಭಕ್ತರು ದೇವಾಲಯದಲ್ಲಿ ಸ್ವಾಮಿಯ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದರು.
    ಮಧ್ಯಾಹ್ನ ರಥೋತ್ಸವಕ್ಕಾಗಿ ಶ್ರೀದೇವಿ ಭೂದೇವಿಯರನ್ನು ಬಿಡದಿ ಮನೆಯವರೆಗೆ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಸಂಪ್ರಾದಾಯಿಕವಾಗಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಶ್ರೀದೇವಿ ಮತ್ತು ರಂಗನಾಥಸ್ವಾಮಿ ನಡುವೆ ನಡೆದ ಕಲ್ಯಾಣೋತ್ಸವ ಭಕ್ತರ ಗಮನಸೆಳೆದವು.
    ಉತ್ಸವದಲ್ಲಿ ಬಿಡದಿ ಮನೆಗೆ ತೆರಳಿದ ನಂತರ ವಿಗ್ರಹಗಳಿಗೆ ಪೂಜೆ ಸಲ್ಲಿಸಲಾಯಿತು. ಅಲಂಕೃತ ಮಹಾರಥದಲ್ಲಿ ಶ್ರೀ ರಂಗನಾಥಸ್ವಾಮಿ ಮತ್ತು ಶ್ರೀದೇವಿ ಹಾಗೂ ಭೂದೇವಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಥಕ್ಕೆ ಬಲಿಪ್ರಧಾನ ಪೂಜೆ ನೆರವೇರಿಸಿದ ನಂತರ ನೆರದಿದ್ದ ಭಕ್ತರು ಸಂತಸದಿಂದ ರಥವನ್ನು ಎಳೆದರು. ಸಖರಾಯಪಟ್ಟಣ ಗ್ರಾಪಂ ಆಡಳಿತ ಮಂಡಳಿ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts