More

    ಫಾಸ್ಟ್ಯಾಗ್ ಶುಲ್ಕ ಸಂಗ್ರಹ ಹೆಚ್ಚಳ

    ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳ ಟೋಲ್​ಪ್ಲಾಜಾಗಳಲ್ಲಿ ಜ.15ರಿಂದ ಕಡ್ಡಾಯ ಮಾಡಲಾಗಿರುವ ಫಾಸ್ಟಾ್ಯಗ್ ವ್ಯವಸ್ಥೆಯಿಂದಾಗಿ ದೇಶಾದ್ಯಂತ ಜನವರಿಯಲ್ಲಿ 365 ಕೋಟಿ ರೂ. ಹೆಚ್ಚುವರಿ ಟೋಲ್ ಶುಲ್ಕ ಸಂಗ್ರಹವಾಗಿದೆ. ಟೋಲ್​ನಲ್ಲಿ ವಾಹನಗಳ ಕಾಯುವಿಕೆ ಸಮಯ ತಗ್ಗಿಸಲು ಮತ್ತು ಇಂಧನ ಉಳಿಸುವ ಸಲುವಾಗಿ ಫಾಸ್ಟಾ್ಯಗ್ ಜಾರಿಗೆ ತರಲಾಗಿದೆ. ಪರಿಣಾಮ ಟೋಲ್​ಶುಲ್ಕ ವಸೂಲಿ ಪ್ರಮಾಣದಲ್ಲೂ ಏರಿಕೆಯಾಗಿದ್ದು, 2019ರ ನವೆಂಬರ್​ಗೆ ಹೋಲಿಸಿದರೆ ಜನವರಿಯಲ್ಲಿ ಶೇ.120 ಅಧಿಕ ಟೋಲ್ ಮೊತ್ತ ಸಂಗ್ರಹವಾಗಿದೆ.

    ದೇಶಾದ್ಯಂತ ರಾ.ಹೆ. ಟೋಲ್​ಪ್ಲಾಜಾಗಳಲ್ಲಿ 2019ರ ನವೆಂಬರ್​ಗೆ ಫಾಸ್ಟಾ್ಯಗ್ ಮೂಲಕ 773.95 ಕೋಟಿ ರೂ., ಡಿಸೆಂಬರ್​ನಲ್ಲಿ 1,256.84 ಕೋಟಿ ರೂ. ಶುಲ್ಕ ವಸೂಲಿಯಾಗಿತ್ತು. ಜನವರಿಯಲ್ಲಿ ಶುಲ್ಕ ಸಂಗ್ರಹ 1,622.68 ಕೋಟಿ ರೂ. ತಲುಪಿದೆ. ಆ ಮೂಲಕ ಡಿಸೆಂಬರ್​ಗಿಂತ 365.85 ಕೋಟಿ ರೂ. ಹೆಚ್ಚುವರಿಯಾಗಿ ಸಂಗ್ರಹವಾದಂತಾಗಿದೆ.

    ಸ್ಕಾ್ಯನರ್​ಗಳ ಪರಿಶೀಲನೆ: ಫಾಸ್ಟಾ್ಯಗ್ ಸ್ಕಾ್ಯನ್ ಮಾಡಿ ಟೋಲ್​ಶುಲ್ಕ ವಸೂಲಿ ಮಾಡುವ ವ್ಯವಸ್ಥೆಯಲ್ಲಿನ ದೋಷ ಸರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮುಂದಾಗಿದ್ದಾರೆ. ಅದಕ್ಕಾಗಿ ಟೋಲ್​ಪ್ಲಾಜಾಗಳಲ್ಲಿನ ಸ್ಕಾ್ಯನರ್​ಗಳು, ಕ್ಯಾಮರಾಗಳ ಪರಿಶೀಲನೆ ನಡೆಯುತ್ತಿದೆ. ಕೆಲವೊಂದು ಟೋಲ್​ಗಳಲ್ಲಿ ಸಮಸ್ಯೆ ಕಂಡುಬಂದಿದ್ದು, ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಉಳಿದಂತೆ ಯಾವುದೇ ಅಡೆತಡೆಯಿಲ್ಲದೆ ಫಾಸ್ಟಾ್ಯಗ್ ಮೂಲಕ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಎನ್​ಎಚ್​ಎಐ ಪ್ರಧಾನ ವ್ಯವಸ್ಥಾಪಕ ಶ್ರೀಧರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts