More

    ರೈತರ ಹಿತ ಕಾಯಲು ಪ್ರಾಮಾಣಿಕ ಪ್ರಯತ್ನ

    ಮುನವಳ್ಳಿ: ಪಟ್ಟಣದ ಮಹಾಲಕ್ಷ್ಮೀ ಮಹಿಳಾ ಕೋ.ಆಪ್. ಬ್ಯಾಂಕ್ ಹಾಗೂ ಪಂಚನಗೌಡರ ಅಭಿಮಾನಿ ಬಳಗದಿಂದ ಬಿಡಿಸಿಸಿ ಬ್ಯಾಂಕ್‌ಗೆ ಸತತ ನಾಲ್ಕನೇ ಬಾರಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಸವದತ್ತಿ ತಾಲೂಕಿನ ಕಾಂಗ್ರೆಸ್ ಮುಖಂಡ, ಸಹಕಾರಿ ಧುರೀಣ ಪಂಚನಗೌಡ ದ್ಯಾಮನಗೌಡರ ಅವರನ್ನು ಶನಿವಾರ ಸನ್ಮಾನಿಸಲಾಯಿತು.

    ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಎಲ್ಲರ ಸಹಾಯ, ಸಹಕಾರ ಹಾಗೂ ಹಿರಿಯರ ಪ್ರೋತ್ಸಾಹದಿಂದ ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತಿದೆ. ರೈತರ ಹಿತ ಕಾಪಾಡುವುದಕ್ಕಾಗಿ ಹಾಗೂ ಸಹಕಾರಿ ರಂಗವನ್ನು ಬೆಳೆಸುವುದಕ್ಕಾಗಿ ಸತತ ಹೋರಾಟ ನಡೆಸಲಾಗುವುದು ಎಂದರು.

    ಮುಕ್ತಾನಂದ ಶ್ರೀ ಮಾತನಾಡಿ, ದ್ಯಾಮನಗೌಡರ ಅವರ ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯಪ್ರಶಸ್ತಿ ವಿಭೂಷಿತ ನಿವತ್ತ ಶಿಕ್ಷಕ ಹ.ಬ.ಅಸೂಟಿ ಮಾತನಾಡಿ, ದೇವರು ಹಾಗೂ ದೈವದ ಕೃಪೆ ಇದ್ದರೆ ಎಲ್ಲವೂ ದೊರೆಯುತ್ತದೆ. ದೊರೆತ ಸೇವೆಯ ಭಾಗ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

    ಮಲ್ಲಿಕಾರ್ಜುನ ಪಿಕೆಪಿಎಸ್, ಸವ್ಯಸಾಚಿ ಗೆಳೆಯರ ಬಳಗ, ಕಳಸಾ ಬಂಡೂರಿ ಹೋರಾಟ ಸಮಿತಿ, ಪಂಚನಗೌಡ ದ್ಯಾಮನಗೌಡರ ಅಭಿಮಾನ ಬಳಗ, ಜಗಜ್ಯೋತಿ ಬಸವೇಶ್ವರ ಶಿಕ್ಷಣ ಸಂಸ್ಥೆ, ಗೊಂದಿ, ದ್ಯಾಮನಗೌಡರ ಅವರನ್ನು ಸನ್ಮಾನಿಸಿದರು.

    ಪುರಸಭೆ ಅಧ್ಯಕ್ಷ ವಿಜಯ ಅಮಠೆ, ಶಿಕ್ಷಕ ಗುರುನಾಥ ಪತ್ತಾರ, ಪ್ರತಿಭಾವಂತ ವಿದ್ಯಾರ್ಥಿಗಳಾದ ಸ್ನೇಹಾ ಕಟಿಗೆಣ್ಣವರ, ಪ್ರಭಾ ಪಾಶ್ಚಾಪುರ, ಹೇಮಾ ಬಸಲಿಗುಂದಿ, ನಾಗರಾಜ ಗುಂಡ್ಲೂರ ಅವರನ್ನು ಗೌರವಿಸಲಾಯಿತು. ಮಹಾಲಕ್ಷ್ಮೀ ಮಹಿಳಾ ಬ್ಯಾಂಕ್ ಅಧ್ಯಕ್ಷೆ ಶಾರದಾ ಪಂ. ದ್ಯಾಮನಗೌಡರ, ವೇ.ಮೂ. ಚಂದ್ರಯ್ಯ ಸ್ವಾಮೀಜಿ ವಿರಕ್ತಮಠ, ಬಸನಗೌಡ ದ್ಯಾಮನಗೌಡರ, ಕಸ್ತೂರಿ ನಲವಡೆ, ಸುನೀತಾ ದ್ಯಾಮನಗೌಡರ, ಬಾಳಪ್ಪ ಹೂಲಿ, ಈರಣ್ಣ ಕಮ್ಮಾರ, ಮಲ್ಲನಗೌಡ ದ್ಯಾಮನಗೌಡರ, ಚನ್ನಪ್ಪಗೌಡ ದ್ಯಾಮನಗೌಡರ, ಪಂಚಪ್ಪ ಹನಸಿ, ಎಂ.ಕೆ.ಹಿರೇಮಠ, ಕಲ್ಲಪ್ಪ ನಲವಡೆ, ಮಂಜುಳಾ ಮುರನಾಳ, ಪಂಚು ಗುಂಡ್ಲೂರ, ಸುವರ್ಣ ಅಂಕಲಗಿ, ನಾಗಪ್ಪ ಕಾಮಣ್ಣವರ, ಅಂದಾನೆಪ್ಪ ಗೋಮಾಡಿ, ನಿಂಗಪ್ಪ ನಲವಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts