More

    ಗುಣಮಟ್ಟದ ತೊಗರಿ ತನ್ನಿ

    ಬೀಳಗಿ: ಸರ್ಕಾರ ತೊಗರಿಗೆ 6100 ರೂ. ಬೆಂಬಲ ಬೆಲೆ ನೀಡುತ್ತಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ಭೀಮಪ್ಪ ಆಜೂರ ಹೇಳಿದರು.

    ಪಟ್ಟಣದ ಹೊರವಲಯದಲ್ಲಿರುವ ಎಪಿಎಂಸಿ ಆವರಣದಲ್ಲಿ ಶನಿವಾರ ಕೃಷಿ ಮಾರುಕಟ್ಟೆ ಸಮಿತಿ ಹಾಗೂ ಟಿಎಪಿಸಿಎಂಎಸ್ ಬೀಳಗಿ ಸಹಯೋಗದಲ್ಲಿ 2019-20ನೇ ಸಾಲಿನ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ಪ್ರತಿ ರೈತನಿಂದ 10 ಕ್ವಿಂಟಾಲ್ ಮಾತ್ರ ಖರೀದಿ ಮಾಡಲು ಆದೇಶವಿದೆ. ಎಲ್ಲ ರೈತರು ಗುಣಮಟ್ಟದ ತೊಗರಿಯನ್ನು ಫೆ.25 ರೊಳಗೆ ಖರೀದಿ ಕೇಂದ್ರಕ್ಕೆ ನೀಡಿ ಸಹಕರಿಸಬೇಕು ಎಂದರು.

    ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಯ್ಯ ಕಂಬಿ ಮಾತನಾಡಿ, ಸರ್ಕಾರ ಪ್ರತಿ ರೈತನಿಂದ 20 ಕ್ವಿಂಟಾಲ್ ತೊಗರಿ ಖರೀದಿ ಮಾಡುವ ಜತೆಗೆ ಸಮಯಕ್ಕೆ ಸರಿಯಾಗಿ ಹಣ ನೀಡಬೇಕು ಎಂದು ಒತ್ತಾಯಿಸಿದರು.

    ಎಪಿಎಂಸಿ ಅಧ್ಯಕ್ಷ ಗುರಪ್ಪ ಜಾಲಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಂಕರ ತಳವಾರ, ಎಪಿಎಂಸಿ ನಿರ್ದೇಶಕ ಸಂಗಪ್ಪ ಕಂದಗಲ್ಲ, ರಾಮಣ್ಣಗೌಡ ಬೂಸರಡ್ಡಿ, ಈರಣ್ಣ ಗಿಡ್ಡಪ್ಪಗೋಳ, ರಾಮಣ್ಣ ಕಾಳಪ್ಪಗೋಳ, ಕಾರ್ಯದರ್ಶಿ ಆನಂದ ರತ್ನಾಕರ, ಎಸ್.ಆರ್. ಬಟಕುರ್ಕಿ, ಗೋಪಾಲ ಟಂಕಸಾಲಿ, ಶಿವು ಕೋಟಿ ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts