More

    ಚೇಂಬರ್ನಿಂದ ಹರಿವ ನೀರು, ರೈತರ ಗೋಳು

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ತಾಲೂಕಿನ ಮುದೇನೂರ ಗ್ರಾಮದ ಬಳಿಯ ತುಂಗಭದ್ರಾ ನದಿಯಿಂದ ಬ್ಯಾಡಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲೆಂದು ನಿರ್ವಿುಸಿದ ಚೇಂಬರ್ (ಪೈಪ್ ಜೋಡಿಸುವ ಸ್ಥಳದಲ್ಲಿ ನಿರ್ವಿುಸಿದ ಚೌಕಾಕಾರದ ಕಟ್ಟೆ) ಗಳಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಇದರಿಂದ ಅಕ್ಕಪಕ್ಕದ ನೂರಾರು ಎಕರೆ ಜಮೀನುಗಳಿಗೆ ನೀರು ನುಗ್ಗಿ ರೈತರು ಅಪಾರ ಪ್ರಮಾಣದ ಹಾನಿ ಅನುಭವಿಸುವಂತಾಗಿದೆ.

    ಇಲ್ಲಿನ ರೈತರು ಒಣ ಬೇಸಾಯ ಆಶ್ರಯಿಸಿ ವರ್ಷಕ್ಕೊಂದು ಬೆಳೆ ತೆಗೆಯುತ್ತಿದ್ದರು. ಆದರೆ, ಬ್ಯಾಡಗಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯಂದಾಗಿ ವರ್ಷಕ್ಕೊಮ್ಮೆ ಬರುತ್ತಿದ್ದ ಬೆಳೆ ನಿಂತು ಹೋಗಿದೆ. ಫಲವತ್ತಾದ ಜಮೀನುಗಳು ಜೌಗು ಹಿಡಿಯುತ್ತಿವೆ. ಜಮೀನಿನಲ್ಲಿ ನೀರು ನಿಂತು ಕಾಲಿಡಲಾಗದ ಸ್ಥಿತಿ ನಿರ್ವಣವಾಗಿದೆ.

    ಬ್ಯಾಡಗಿ ಪಟ್ಟಣಕ್ಕೆ ತಾಲೂಕಿನ ಮುದೇನೂರ ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ ಇಟಗಿ, ಮಾಗೋಡ, ಎನ್​ಎಚ್-4ರ ರಸ್ತೆ ಗುಂಟ ಪೈಪ್​ಲೈನ್ ಅಳವಡಿಸಿದ್ದು, ಅಲ್ಲಲ್ಲಿ ಚೇಂಬರ್ ಗಳನ್ನು ನಿರ್ವಿುಸಲಾಗಿದೆ. ಆದರೆ, ಈ ಪೈಪ್ ಜೋಡಿಸಿದ ಸ್ಥಳದಿಂದ ನಿತ್ಯವೂ ಅಪಾರ ಪ್ರಮಾಣ ನೀರು ಪೋಲಾಗುತ್ತಿದೆ.

    ಕೊಚ್ಚಿ ಹೋದ ರಸ್ತೆ: ಕಳೆದ ವರ್ಷ ರಾಣೆಬೆನ್ನೂರ-ಹಳೇ ಅಂತರವಳ್ಳಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿತ್ತು. ಆದರೀಗ ಚೇಂಬರ್ ನಿಂದ ಹೊರಬರುವ ನೀರು ಇದೇ ರಸ್ತೆ ಮಾರ್ಗವಾಗಿ ಹರಿಯುತ್ತಿದ್ದು, ಸಂಪೂರ್ಣ ರಸ್ತೆ ಕಿತ್ತು ಹೋಗಿದೆ. ರೈತರು ಕೃಷಿ ಉತ್ಪನ್ನ ಕೊಂಡೊಯ್ಯಲು ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ವಿುಸಿದ ರಸ್ತೆ ಇದೀಗ ನೀರು ಪಾಲಾಗಿದೆ. ರೈತರ ಎತ್ತಿನ ಗಾಡಿ ಸಹ ರಸ್ತೆಯಲ್ಲಿ ಓಡಾಡಲು ಬಾರದಂತಾಗಿದೆ.

    ಪೈಪ್​ಲೈನ್​ಗೆ ಅಲ್ಲಲ್ಲಿ ಅಳವಡಿಸಿದ ಚೇಂಬರ್ ​ಗಳ ಮುಚ್ಚಳ ಕಿತ್ತು ಹೋಗಿವೆ. ಹೀಗಾಗಿ, ಕಪ್ಪೆ, ಹಾವು, ಹಲ್ಲಿಗಳು ವಾಸ ಮಾಡುತ್ತಿವೆ. ಇದೇ ನೀರನ್ನು ಜನತೆಗೆ ಪೂರೈಸಲಾಗುತ್ತಿದೆ. ಚೇಂಬರ್ ನೀರು ಹರಿದು ರೈತರಿಗೆ ತೊಂದರೆ ಆಗಿರುವ ಕುರಿತು ಬ್ಯಾಡಗಿ ಪುರಸಭೆ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ, ಯಾರೂ ಈ ಕುರಿತು ಗಮನ ಹರಿಸುತ್ತಿಲ್ಲ. ಮುಂದಿನ ದಿನದಲ್ಲಿ ಅಧಿಕಾರಿಗಳು ಸ್ಪಂದಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.

    ಪೈಪ್​ಲೈನ್ ಆರಂಭಗೊಂಡಾಗಿನಿಂದಲೂ ಚನಲ್​ಗಳಿಂದ ನೀರು ಹರಿಯುತ್ತಿದೆ. ಜಮೀನಿನಲ್ಲಿ ಒಡ್ಡು ಹಾಕಿದರೂ ತಡೆಯುತ್ತಿಲ್ಲ. ವರ್ಷಕ್ಕೆ ಒಡ್ಡು ಹಾಕುವುದಕ್ಕಾಗಿಯೇ 20ರಿಂದ 30 ಸಾವಿರ ರೂ. ಖರ್ಚು ಮಾಡುತ್ತಿದ್ದೇವೆ. ಬ್ಯಾಡಗಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಶಾಸಕರಾದರೂ ಈ ಬಗ್ಗೆ ಗಮನ ಹರಿಸಬೇಕು.

    | ಮಹೇಶಪ್ಪ ಕೊಪ್ಪದ, ಚೇಂಬರ್ ನೀರಿನಿಂದ ತೊಂದರೆಗೊಳಗಾದ ರೈತ

    ಚೇಂಬರ್ ಗಳನ್ನು ಕೆಲವರು ಒಡೆದುಕೊಳ್ಳುತ್ತಿರುವ ಕಾರಣ ನೀರು ಹರಿಯುತ್ತಿರಬಹುದು. ನಮ್ಮ ಸಿಬ್ಬಂದಿ ಪರಿಶೀಲಿಸಿ ಸಮಸ್ಯೆಯಾಗಿರುವ ಜಾಗದಲ್ಲಿ ಸರಿಪಡಿಸಲಾಗುವುದು.

    | ವಿ.ಎಂ. ಪೂಜಾರ, ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts