More

    ರೈತರ ಓಲೈಕೆಗೆ ಹರಸಾಹಸ; ಇಂದು 2ನೇ ಸುತ್ತಿನ ಮಾತುಕತೆ

    ನವದೆಹಲಿ: ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವಿನ ಮೊದಲ ಹಂತದ ಮಾತುಕತೆ ವಿಫಲಗೊಂಡ ಹಿನ್ನೆಲೆಯಲ್ಲಿ ಗುರುವಾರ ನಡೆಯಲಿರುವ ಎರಡನೇ ಹಂತದ ಮಾತುಕತೆ ಬಗ್ಗೆ ವ್ಯಾಪಕ ಕುತೂಹಲ ಮೂಡಿದೆ. ಈ ಮಧ್ಯೆ, ದೆಹಲಿ-ಹರ್ಯಾಣದ ಟಿಕ್ರಿ ಮತ್ತು ಸಿಂಘು ಗಡಿಭಾಗಗಳಲ್ಲಿ ಸಾವಿರಾರು ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ.

    ಕೃಷಿ ಕಾನೂನಿನಲ್ಲಿ ಅಡಕಗೊಂಡಿರುವ ಮೂರೂ ಪ್ರಮುಖ ಅಂಶಗಳನ್ನು ಕೈಬಿಟ್ಟು, ಕನಿಷ್ಠ ಬೆಂಬಲ ಬೆಲೆ ಕುರಿತ ಖಚಿತತೆಯನ್ನು ಮರುಸ್ಥಾಪಿಸಬೇಕು ಎನ್ನುತ್ತಿರುವ ರೈತರು, ಪಟ್ಟು ಸಡಿಲಿಸಲು ಸಾಧ್ಯವೇ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಒಂದುವೇಳೆ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ದೆಹಲಿ ಸಂರ್ಪಸುವ ಇತರೆ ಗಡಿ ಭಾಗಗಳಲ್ಲೂ ಪ್ರತಿಭಟನೆ ನಡೆಸಿ, ರಸ್ತೆಗಳನ್ನು ಬ್ಲಾಕ್ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ 2ನೇ ಸುತ್ತಿನ ಮಾತುಕತೆ ಯಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸಡಿಲಗೊಳಿಸಿ ರೈತರ ಮನವೊಲಿಸುವುದೇ ಎಂಬುದು ಸದ್ಯದ ಪ್ರಶ್ನೆ. ಕೇಂದ್ರ ತನ್ನ ಹಠಮಾರಿ ಧೋರಣೆ ಮುಂದುವರಿಸಿದಲ್ಲಿ ನಾವು ನಮ್ಮ ದಾರಿ ನೋಡಿಕೊಳ್ಳ ಬೇಕಾಗುತ್ತದೆ ಎಂದು ರೈತ ಸಂಘಟನೆಗಳ ಮುಖಂಡ ಗುರ್ನಾಮ್ ಸಿಂಗ್ ಚಡೋಣಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಮೂರೂ ಕೃಷಿ ಕಾನೂನನ್ನು ರದ್ದುಗೊಳಿಸಬೇಕು ಎಂದು ಇನ್ನೋರ್ವ ರೈತ ಮುಖಂಡ ದರ್ಶನ್ ಪಾಲ್ ಹೇಳಿದ್ದಾರೆ.

    ಏತನ್ಮಧ್ಯೆ, ಗುರುವಾರದ ಮಾತುಕತೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ, ಕೃಷಿ ನರೇಂದ್ರ ಸಿಂಗ್ ತೋಮರ್, ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಮತ್ತೊಮ್ಮೆ ಸಭೆ ಸೇರಿದ್ದು, ರೈತರೊಂದಿಗೆ ಯಾವೆಲ್ಲಾ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂಬ ಬಗ್ಗೆ ರ್ಚಚಿಸಿದ್ದಾರೆ. ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆ ಹೊಂದಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯದಲ್ಲೂ ಹೆಚ್ಚಾಗುತ್ತಿದ್ದು, ಮಿತ್ರಪಕ್ಷಗಳೂ ಹೋರಾಟದಲ್ಲಿ ರೈತ ಪರ ದನಿ ಎತ್ತುತ್ತಿವೆ. ಇದು ದೇಶವ್ಯಾಪಿ ಬಿಜೆಪಿ ವಿರೋಧಿ ಭಾವನೆ ಬಲಗೊಳ್ಳಲೂ ಕಾರಣವಾಗಬಹುದು ಎಂಬ ಆತಂಕವೂ ಬಿಜೆಪಿ ನಾಯಕರನ್ನು ಕಾಡುತ್ತಿದೆ.

    ಸಚಿವ ರಾಜನಾಥ್ ಸಿಂಗ್ ಮುನ್ನೆಲೆಗೆ

    ರೈತರ ಓಲೈಕೆಗೆ ಹರಸಾಹಸ; ಇಂದು 2ನೇ ಸುತ್ತಿನ ಮಾತುಕತೆ

    ರೈತ ಸಂಘಟನೆಗಳನ್ನು ಆದ್ಯತೆಗೆ ತೆಗೆದುಕೊಂಡು ಸಮಾಧಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೆರೆಮರೆಯಲ್ಲೇ ತಂತ್ರಗಳನ್ನು ರೂಪಿಸುತ್ತಿರುವುದು ಗಮನಸೆಳೆದಿದೆ. ಹಿಂದೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ರಾಜನಾಥ್ ಸಿಂಗ್ ಮೊದಲಿನಿಂದಲೂ ಕೃಷಿ ಸಂಘಟನೆಗಳೊಂದಿಗೆ ಉತ್ತಮ ಸಂಪರ್ಕ ಸಾಧಿಸಿದ್ದಾರೆ. ಖುದ್ದು ಕೃಷಿಕನ ಮಗನಾಗಿರುವ ಅವರಿಗೆ ಕೃಷಿಕರ ಮನದಾಳ ಸುಲಭದಲ್ಲಿ ಅರ್ಥವಾಗಿಬಿಡುತ್ತದೆ. ಹೀಗಾಗಿಯೇ, ರೈತ ಪ್ರತಿಭಟನೆಗಳನ್ನು ತಗ್ಗಿಸುವ ವಿಚಾರದಲ್ಲಿ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸುವ ಜವಾಬ್ದಾರಿಯನ್ನು ಅವರ ಹೆಗಲಿಗೇರಿಸಲಾಗಿದೆ. ಕೃಷಿ ಕಾನೂನು ಜಾರಿ ವೇಳೆಯೂ ಹಾಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರಾಜನಾಥ್ ನಿವಾಸಕ್ಕೆ ತೆರಳಿ ಹಲವು ಸುತ್ತಿನ ಮಾತುಕತೆ, ಸಮಾಲೋಚನೆ ನಡೆಸಿದ್ದರು. ಕೇಂದ್ರ ಸರ್ಕಾರದಲ್ಲಿ ನಂಬರ್ 2 ಅಮಿತ್ ಷಾ ಆಗಿದ್ದರೂ, ಅರುಣ್ ಜೇಟ್ಲಿ ನಂತರದ ಟ್ರಬಲ್ ಶೂಟರ್ ಸ್ಥಾನ ರಾಜನಾಥ್ ಬೆನ್ನಿಗೇರಿದೆ. ರೈತರ ಮುಂದೆ ಯಾವುದೇ ಷರತ್ತು ಗಳನ್ನಿಡದೆ ಅವರ ಮಾತುಗಳನ್ನು ಆಲಿಸಬೇಕು ಎಂದು ರಾಜ್​ನಾಥ್ ಅವರೇ ಕೇಂದ್ರದ ಇತರೆ ಸಚಿವರಿಗೆ ಸಲಹೆ ನೀಡಿದ್ದರು.

    ರೈತರ ಓಲೈಕೆಗೆ ಹರಸಾಹಸ; ಇಂದು 2ನೇ ಸುತ್ತಿನ ಮಾತುಕತೆ

    ರೈತರ ಆದಾಯ ದ್ವಿಗುಣಗೊಳಿಸಲಿದ್ದೇವೆ ಎಂದ ಕೇಂದ್ರ ಸರ್ಕಾರ ಅವರ ಆದಾಯವನ್ನು ಅರ್ಧಕ್ಕಿಳಿಸಿಬಿಟ್ಟಿದೆ. ಸೂಟ್​ಬೂಟ್ ಸರ್ಕಾರದ ಸ್ನೇಹಿತರ ಆದಾಯ ನಾಲ್ಕು ಪಟ್ಟು ಹೆಚ್ಚಿದೆ. ರೈತ ವಿರೋಧಿ ಕೃಷಿ ಕಾನೂನನ್ನು ಕೇಂದ್ರ ಸರ್ಕಾರ ತಕ್ಷಣವೇ ರದ್ದುಗೊಳಿಸಬೇಕು ಮತ್ತು ವಾಕ್ಚಾತುರ್ಯಗಳಿಂದ ರೈತರನ್ನು ವಂಚಿಸುವುದು ಇನ್ನಾದರೂ ನಿಲ್ಲಬೇಕು.

    | ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ

    ಹೋರಾಟ ತೀವ್ರ

    • ಉತ್ತರ ಭಾರತ ರೈತರನ್ನು ಬೆಂಬಲಿಸಿ ಗುರುವಾರ ದಿಂದ ರಾಜ್ಯಾದ್ಯಾಂತ ಪ್ರತಿಭಟನೆ ನಡೆಸಲು ಮಹಾರಾಷ್ಟ್ರ ರೈತರ ಒಕ್ಕೂಟ ತೀರ್ಮಾನ
    • ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ತಮ್ಮ ಕ್ರೀಡಾ ಸಾಧನೆಯ ಪದಕಗಳನ್ನು ಕೇಂದ್ರಕ್ಕೆ ವಾಪಸ್ ಮಾಡುವುದಾಗಿ ಹೇಳಿದೆ ಪಂಜಾಬ್​ನ ಕ್ರೀಡಾಳುಗಳ ಗುಂಪು
    • ದಿಲ್ಲಿ-ಉತ್ತರ ಪ್ರದೇಶದ ನೋಯ್ಡಾ ಸಂರ್ಪಸುವ ಚಿಲ್ಲಾ ಗಡಿ ರಸ್ತೆ ಬಂದ್, ವಾಹನ ಸಂಚಾರ ಸ್ಥಗಿತ
    • ರೈತರ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಉತ್ತರ ಭಾರತದ ದೆಹಲ್ಲಿ, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ರಾಜಸ್ತಾನಕ್ಕೆ ಡಿಸೆಂಬರ್ 8ರಿಂದ ಸಾಮಗ್ರಿ ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸುವುದಾಗಿ ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ ಅಧ್ಯಕ್ಷ ಬಾಲ್ ಮಲ್ಕಿತ್ ಸಿಂಗ್ ಎಚ್ಚರಿಕೆ

    ತರಕಾರಿ ಬೆಲೆ ಹೆಚ್ಚಳ

    ರೈತರು ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ತರಕಾರಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ, ಅಂಗಡಿ ಮಾಲೀಕರು, ತಳ್ಳುವ ಗಾಡಿ ತರಕಾರಿ ಮಾರಾಟಗಾರರು ತರಕಾರಿಗಳ ಬೆಲೆ ಏರಿಸಿದ್ದು, ಪ್ರತಿಭಟನೆಯ ಬಿಸಿ ಬಡ, ಮಧ್ಯಮ ವರ್ಗಕ್ಕೆ ವ್ಯಾಪಕವಾಗಿ ತಟ್ಟಿದೆ.

    ಕರ್ನಾಟಕದಲ್ಲೂ ಪ್ರತಿಭಟನೆ

    ರೈತರ ಓಲೈಕೆಗೆ ಹರಸಾಹಸ; ಇಂದು 2ನೇ ಸುತ್ತಿನ ಮಾತುಕತೆ
    ಹಾವೇರಿಯಲ್ಲಿ ಹೆದ್ದಾರಿ ತಡೆ ನಡೆಸಿದ ರೈತರ ಬಂಧನ

    ಬೆಂಗಳೂರು: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಧಾರವಾಡ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ ಯಲ್ಲಿ ರೈತರಿಂದ ಪ್ರತಿಭಟನೆ ನಡೆಯಿತು. ಧಾರವಾಡದಲ್ಲಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹೆದ್ದಾರಿ ತಡೆ ನಡೆಸಲಾಯಿತು. ಹುಬ್ಬಳ್ಳಿಯಲ್ಲಿ ಕಳಸಾ-ಬಂಡೂರಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಸಹ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts