More

    ಕೊಬ್ಬರಿ ಬೆಲೆ ಹೆಚ್ಚಿಸುವಂತೆ ರೈತರ ಪಟ್ಟು; ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರ ಪ್ರತಿಭಟನೆ

    ತುಮಕೂರು: ಕೊಬ್ಬರಿ ಕನಿಷ್ಠ ಬೆಂಬಲ ಹೆಚ್ಚಿಸಬೇಕು, ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಮಾರಾಟ ತಡೆಯಲು ನಫೆಡ್ ಮೂಲಕವೇ ಎಲ್ಲ ಕೊಬ್ಬರಿ ಖರೀದಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಡಿಜಿಜಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ಸರ್ಕಾರವೇ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನಗಳನ್ನು ಖರೀದಿಸುವುದು ಕಾನೂನಿನ ಪ್ರಕಾರ ತಪ್ಪು. ಆದರೆ, ರಾಜ್ಯದಲ್ಲಿ ಸರ್ಕಾರವೇ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಕೊಬ್ಬರಿ ಕೊಂಡುಕೊಳ್ಳಲಾಗುತ್ತಿದೆ ಎಂದರು.

    ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮಾತನಾಡಿ, 2015ರಲ್ಲಿ ರೈತರು ಕೊಬ್ಬರಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಪಾದಯಾತ್ರೆ ನಡೆಸಿದಾಗ ಕ್ವಿಂಟಲ್ ಕೊಬ್ಬರಿಗೆ 16750ರೂ. ಪಡೆಯುವಂತಾಯಿತು. ಆದರೆ, ಪ್ರಸ್ತುತ ಕೊಬ್ಬರಿ ಬೆಲೆ ಬೆಂಬಲ ಬೆಲೆಗಿಂತ ಕೆಳ ಮಟ್ಟಕ್ಕೆ ಕುಸಿದಿದೆ ಸರ್ಕಾರ ತಿರುಗಿ ನೋಡಿಲ್ಲ ಎಂದರು. ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದು ಪಡಿಸುವುರ ಜತೆಗೆ ಹೊರದೇಶಗಳಿಂದ ಬರುತ್ತಿರುವ ಕೊಬ್ಬರಿಗೆ ಹೆಚ್ಚಿನ ಅಮದು ಸುಂಕ ವಿಧಿಸಿ, ಅಮದು ಪ್ರಮಾಣ ಗಣನೀಯವಾಗಿ ಕುಸಿಯುವಂತೆ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

    ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತುಮಕೂರು ಉಪವಿಭಾಗಾಧಿಕಾರಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ತಾಲೂಕು ಅಧ್ಯಕ್ಷರಾದ ಅನಿಲ್, ನಾಗೇಂದ್ರ, ಬಸ್ತಿಹಳ್ಳಿ ರಾಜಣ್ಣ, ಬಂಡಿಮನೆ ಲೋಕಣ್ಣ, ಸಿದ್ದರಾಜು, ಸಣ್ಣದ್ಯಾಮೇಗೌಡ ಇದ್ದರು.

    ಜಿಲ್ಲೆಯಲ್ಲಿ ತೆಂಗಿನಕಾಯಿ ಹಾಗೂ ಕೊಬ್ಬರಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೊರ ಜಿಲ್ಲೆಗಳಿಂದ ಹೆಚ್ಚು ಬೆಲೆಗೆ ತೆಂಗಿನಕಾಯಿ ಕೊಂಡು ತಂದಿರುವ ರೈತ ಕುಟುಂಬಗಳು ಬೀದಿಗೆ ಬಿದ್ದಿವೆ, ಸಣ್ಣ ಹಾಗೂ ಅತೀ ಸಣ್ಣ ರೈತ ಕುಟುಂಬಗಳ ಆರ್ಥಿಕ ಪರಿಸ್ಥಿತಿಯೇ ಅಯೋಮಯವಾಗಿದೆ, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ತೆಂಗು ಬೆಳೆಗಾರರನ್ನು ಉಳಿಸಬೇಕು.
    ಕೆಂಕೆರೆ ಸತೀಶ್ ರಾಜ್ಯ ಉಪಾಧ್ಯಕ್ಷ, ರೈತ ಸಂಘ ಮತ್ತು ಹಸಿರು ಸೇನೆ

    ಧರಣಿನಿರತರನ್ನು ಭೇಟಿ ಮಾಡದ ಶಾಸಕ

    ಕೊಬ್ಬರಿ ಬೆಲೆ ಹೆಚ್ಚಿಸುವಂತೆ ರೈತರ ಪಟ್ಟು; ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರ ಪ್ರತಿಭಟನೆ
    ತಿಪಟೂರಿನ ಎಸಿ ಕಚೇರಿ ಎದುರು ಗುರುವಾರ ಧರಣಿಯಲ್ಲಿ ಮಾಜಿ ಶಾಸಕ ಕೆ.ಷಡಕ್ಷರಿ ಪಾಲ್ಗೊಂಡಿದ್ದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಕಾತರಾಜು, ನಗರಾಧ್ಯಕ್ಷ ಟಿ.ಎನ್. ಪ್ರಕಾಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್.ಎಂ.ಸುರೇಶ್, ಕೆ.ವಿ.ಎಸ್ ಕಾರ್ಯದರ್ಶಿ ಎಚ್. ಜಿ.ಸುಧಾಕರ್, ಹೊಸಳ್ಳಿ ಬಸವರಾಜು ಮೊದಲಾದವರು ಇದ್ದರು.

    ತಿಪಟೂರು: ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ರೈತರು ನಡೆಸುತ್ತಿರುವ ಧರಣಿ 11 ದಿನ ಪೂರೈಸಿದರೂ ಸ್ಥಳೀಯ ಶಾಸಕರು ರೈತರನ್ನು ಭೇಟಿ ಮಾಡದಿರುವುದು ನೋವುಂಟು ಮಾಡಿದೆ,

    ರೈತಪರ ಕಾಳಜಿ ಇಲ್ಲದವರು ಸರ್ಕಾರದಲ್ಲಿ ಇರಬಾರದು ಎಂದು ಮಾಜಿ ಶಾಸಕ ಕೆ. ಷಡಕ್ಷರಿ ಅಸಮಾಧಾನ ಹೊರಹಾಕಿದರು. ನಗರದ ಎಸಿ ಕಚೇರಿ ಎದುರು ಗುರುವಾರ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿಗಳು ನಗರದಲ್ಲಿ ನಡೆದ ಸಿದ್ದರಾಮ ಜಯಂತಿಗೆ ಬಂದಿದ್ದಾಗ, ರಾಜ್ಯ ಸರ್ಕಾರದಿಂದ ಕನಿಷ್ಠ 2 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಲು ಮನವಿ ಮಾಡಿದ್ದೆ.

    ಆದರೆ ಈ ವಿಚಾರ ಅಧಿವೇಶನದಲ್ಲೂ ಚರ್ಚೆಯಾಗಲಿಲ್ಲ. ಬಜೆಟ್‌ನಲ್ಲೂ ಮಂಡನೆಯಾಗಲಿಲ್ಲ. ಡಬಲ್ ಇಂಜಿನ್ ಸರ್ಕಾರ ರೈತಪರ ಕಾಳಜಿ ಮರೆತಿದೆ. ಕೆಲವೊಮ್ಮೆ ಸಚಿವರು ಮಂಡಿಸುವ ವಿಚಾರಗಳಿಗೆ ಕೇಶವ ಕೃಪದಲ್ಲಿ ಬ್ರೇಕ್ ಬೀಳುವುದೇ ಇದಕ್ಕೆಲ್ಲಾ ಕಾರಣ ಎಂದರು. ಶಾಸಕರು ತಾಲೂಕಿನ ರೈತರ ಸಂಕಷ್ಟದ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದರೆ ಅವರಿಗೆ ಒಳ್ಳೆಯ ಹೆಸರು ಬರುತ್ತಿತ್ತು ಎಂದು ವಾಗ್ದಾಳಿ ಮಾಡಿದರು.

    ರೈತ ಮುಖಂಡರಾದ ಎಸ್.ಯೋಗೀಶ್ವರ ಸ್ವಾಮಿ, ಮನೋಹರ್ ಪಟೇಲ್, ಜಯಚದ್ರ ಶರ್ಮ, ತಿಮ್ಲಾಪುರ ದೇವರಾಜು, ಬಸ್ತಿಹಳ್ಳಿ ರಾಜಣ್ಣ, ಎಸ್.ಸಿದ್ದಲಿಂಗಮೂರ್ತಿ ಇದ್ದರು.

    ತಿಪಟೂರಿನ ಎಸಿ ಕಚೇರಿ ಎದುರು ಗುರುವಾರ ಧರಣಿಯಲ್ಲಿ ಮಾಜಿ ಶಾಸಕ ಕೆ.ಷಡಕ್ಷರಿ ಪಾಲ್ಗೊಂಡಿದ್ದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಕಾತರಾಜು, ನಗರಾಧ್ಯಕ್ಷ ಟಿ.ಎನ್. ಪ್ರಕಾಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್.ಎಂ.ಸುರೇಶ್, ಕೆ.ವಿ.ಎಸ್ ಕಾರ್ಯದರ್ಶಿ ಎಚ್. ಜಿ.ಸುಧಾಕರ್, ಹೊಸಳ್ಳಿ ಬಸವರಾಜು ಮೊದಲಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts