More

    ಹುಲಿ ಯೋಜನೆ, ಪರಿಸರ ಸೂಕ್ಷ್ಮ ವಲಯ ಬೇಡ

    ತರೀಕೆರೆ/ಲಿಂಗದಹಳ್ಳಿ: ಭದ್ರಾ ಹುಲಿ ಯೋಜನೆ, ಪರಿಸರ ಸೂಕ್ಷ್ಮ ವಲಯ, ಕಸ್ತೂರಿ ರಂಗನ್ ವರದಿ, ತಿದ್ದುಪಡಿ ಕಾಯ್ದೆಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಲಿಂಗದಹಳ್ಳಿ ಹಾಗೂ ಲಕ್ಕವಳ್ಳಿ ಭಾಗದ ರೈತರು ಕಾಂಗ್ರೆಸ್ ನೇತೃತ್ವದಲ್ಲಿ ಬಳ್ಳಾವರ ಗ್ರಾಮದಿಂದ ತರೀಕೆರೆವರೆಗೆ ಬುಧವಾರ ಪಾದಯಾತ್ರೆ ನಡೆಸಿದರು.

    ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಯು.ರಾಮಚಂದ್ರಪ್ಪ ನೇತೃತ್ವದಲ್ಲಿ ಲಕ್ಕವಳ್ಳಿ ಮತ್ತು ಲಿಂಗದಹಳ್ಳಿ ಗ್ರಾಮದಿಂದ ಹೊರಟ ಪಕ್ಷದ ಪ್ರಮುಖರು, ರೈತರು, ಕೂಲಿ ಕಾರ್ವಿುಕರು ದಾರಿಯುದ್ದಕ್ಕೂ ಉಭಯ ಸರ್ಕಾರಗಳ ವಿರುದ್ಧ ಘೊಷಣೆ ಕೂಗುತ್ತ ಬಂದು ಪಟ್ಟಣದ ಮಿನಿ ವಿಧಾನಸೌಧದ ಬಳಿ ಜಮಾಯಿಸಿದರು.

    ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಸಂಸದೆ ಶೋಭಾ ಕರಂದ್ಲಾಜೆ ಭದ್ರಾ ಹುಲಿ ಯೋಜನೆ ಸಂಬಂಧಿಸಿದ ಸಭೆಗೆ ಗೈರಾಗಿ ಕ್ಷೇತ್ರದ ಜನತೆಗೆ ದ್ರೋಹವೆಸಗಿದ್ದಾರೆ. ಸರ್ಕಾರ ರೈತರ ಬದುಕಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ತಕ್ಷಣವೇ ಕೈಬಿಡಬೇಕು ಆಗ್ರಹಿಸಿದರು.

    ಕಸ್ತೂರಿ ರಂಗನ್ ವರದಿ, ಹುಲಿ ಯೋಜನೆ, ಪರಿಸರ ಸೂಕ್ಷ್ಮ ವಲಯ ಪ್ರಸ್ತಾಪವನ್ನು ಕೈಬಿಡಬೇಕು. ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನೂ ರದ್ದು ಮಾಡಬೇಕು. ರೈತರು ಜೀವನ ನಿರ್ವಹಣೆಗಾಗಿ ಒತ್ತುವರಿ ಮಾಡಿರುವ ಭೂಮಿಯನ್ನು ಸಕ್ರಮಗೊಳಿಸಬೇಕು. 1978ಕ್ಕೂ ಹಿಂದೆ ಅರ್ಜಿ ಸಲ್ಲಿಸಿದ ರೈತರಿಗೆ ತಕ್ಷಣವೇ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.

    ಲಿಂಗದಹಳ್ಳಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಅಬೂಬಕರ್ ಮಾತನಾಡಿ, 2006ರ ಅರಣ್ಯ ಕಾಯ್ದೆ ಪಾರಂಪರಿಕ ಕಾಲಮಿತಿ 75 ವರ್ಷದಿಂದ 25 ವರ್ಷಕ್ಕೆ ಇಳಿಸಿ ಅರಣ್ಯದೊಳಗೆ ವಾಸವಿರುವ ಮೂಲ ನಿವಾಸಿಗಳಿಗೆ ವಾಸಿಸಲು ಅವಕಾಶ ನೀಡಬೇಕು. ಸರ್ಕಾರದ ಭೂಮಿಯಲ್ಲಿ ರೈತರು, ಬಡವರು ಕಟ್ಟಿಕೊಂಡಿರುವ ವಾಸದ ಮನೆಗೆ ಹಕ್ಕುಪತ್ರ ಕೊಡಬೇಕು ಎಂದು ಆಗ್ರಹಿಸಿದರು.

    ರೈತ ಮುಖಂಡ ತಣಿಗೆಬೈಲು ರಮೇಶ್ ಮಾತನಾಡಿ, ಲಿಂಗದಹಳ್ಳಿ ಮತ್ತು ಲಕ್ಕವಳ್ಳಿ ಹೋಬಳಿಯ 27 ಗ್ರಾಮಗಳು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿವೆ. ಈ ಭಾಗದ ರೈತರು ತರೀಕೆರೆವರೆಗೆ ಪಾದಯಾತ್ರೆ ತೆರಳಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

    ಕೆಪಿಸಿಸಿ ಸದಸ್ಯರಾದ ಟಿ.ವಿ.ಶಿವಶಂಕರಪ್ಪ, ಡಿ.ಎಂ.ಪರಮೇಶ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಯು.ರಾಮಚಂದ್ರಪ್ಪ, ಜಿಪಂ ಮಾಜಿ ಅಧ್ಯಕ್ಷ ಕೆ.ಆರ್.ಧ್ರುವಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ತರೀಕೆರೆ ವಿಧಾನಸಭಾ ಕೇತ್ರದ ಕಾಂಗ್ರೆಸ್ ಉಸ್ತುವಾರಿ ಜಿ.ಬಿ.ಪವನ್, ಜಿಪಂ ಸದಸ್ಯ ಕೆ.ಪಿ.ಕುಮಾರ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಸಂತೋಷ್, ಪುರಸಭೆ ಮಾಜಿ ಅಧ್ಯಕ್ಷರಾದ ಟಿ.ಎಸ್.ಪ್ರಕಾಶ್​ವರ್ಮ, ಡಿ.ವಿ.ಪದ್ಮರಾಜ್, ಉಮ್ಮರ್ ಫಾರೂಕ್, ಎನ್​ಎಸ್​ಯುುಐ ಘಟಕದ ಅಧ್ಯಕ್ಷ ಟಿ.ಆರ್.ಧವನ್​ರಾಜ್, ಪ್ರಮುಖರಾದ ಕೆ.ರವಿಕಿಶೋರ್, ಎಚ್.ಎನ್.ಮಂಜುನಾಥ್, ಟಿ.ಎನ್.ಜಗದೀಶ್, ರೈತ ಮುಖಂಡರಾದ ಅಕ್ಬರ್, ಎನ್.ಜಿ.ರಮೇಶ್, ಆರ್.ರಾಮಯ್ಯ, ಕೆ.ಎನ್.ಶಶಿಧರನ್, ಶಂಕರ್ ಲಿಂಗೇಗೌಡ, ಆರ್.ಸತ್ಯಪ್ಪ, ನರಸಿಂಹಮೂರ್ತಿ, ಡಿ.ಅಬೂಬಕರ್ ಕುಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts