More

    ಬೆಳೆಗಳಿಗೆ ದ್ರವ ರೂಪದ ಗೊಬ್ಬರ ಸಿಂಪಡಿಸಲಿ; ಜಿಲ್ಲಾ ಕ್ಷೇತ್ರಾಧಿಕಾರಿ ರಾಘವೇಂದ್ರ ಸಲಹೆ

    ಕುಕನೂರು: ರೈತರು ಬೆಳೆಗಳಿಗೆ ದ್ರವ ರೂಪದ ಗೊಬ್ಬರ ಸಿಂಪಡಿಸಬೇಕು. ಇದರಿಂದ ಉತ್ತಮ ಇಳುವರಿ ಬರುತ್ತದೆ ಎಂದು ಇಪ್ರೋ ಜಿಲ್ಲಾ ಕ್ಷೇತ್ರಾಧಿಕಾರಿ ಎನ್.ರಾಘವೇಂದ್ರ ಹೇಳಿದರು.

    ತಾಲೂಕಿನ ತೊಂಡಿಹಾಳ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇಪ್ರೋ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿ, ಆತ್ಮನಿರ್ಭರ್ ಭಾರತ್ ಯೋಜನೆಯಲ್ಲಿ ರೈತರು ಸದೃಢರಾಗಬೇಕು ಎಂದು ಕೃಷಿ ಉತ್ತೇಜನಕ್ಕೆ ಇಪ್ರೋ ಸಂಸ್ಥೆಯಿಂದ ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ಗೊಬ್ಬರಗಳನ್ನು ದ್ರವರೂಪದಲ್ಲಿ ಸಿಂಪಡಣೆಗೆ ನೀಡಲಾಗುತ್ತಿದೆ ಎಂದರು.

    ರೈತರು ದುಬಾರಿ ಬೆಲೆಯಲ್ಲಿ ಹರಳು ರೂಪದ ಗೊಬ್ಬರಗಳನ್ನು ಖರೀದಿಸಿ ಬಳಸುವ ಬದಲು ದ್ರವ ರೂಪದ ಗೊಬ್ಬರ ಸಿಂಪಡಿಸಿ. ದ್ರವ ರೂಪದ ಗೊಬ್ಬರ ಸಿಂಪರಣೆಯಿಂದ ಬೆಳೆಗಳಿಗೆ ಬಹುಬೇಗ ಪೋಷಕಾಂಶಗಳು ದೊರೆಯುತ್ತವೆ ಎಂದು ತಿಳಿಸಿದರು.

    ಸಂಘದ ಅಧ್ಯಕ್ಷ ಯಲ್ಲಪ್ಪ ಹಡಗಲಿ, ಕಾರ್ಯದರ್ಶಿ ವೀರೇಶ ಹೇಡಿಯಪ್ಪ ಗೌಡರ, ನಿರ್ದೇಶಕರಾದ ಬಸವರಾಜ ಬೀಸರಳ್ಳಿ, ದೊಡ್ಡನಗೌಡ ಹಿಮ್ಮಡಿಗೌಡ್ರು, ಬಸವನಗೌಡ ಕೆಂಚನಗೌಡ್ರು, ಶಶಿಯಲ್ಲಪ್ಪ ಅಂಗಡಿ, ಶರಣಪ್ಪ ನಾಗರೆಡ್ಡಿ, ಬಸವರಾಜ ಚೌಡಿ, ಇಪ್ರೋ ಎಂಸಿ ಸಂಸ್ಥೆ ಕ್ಷೇತ್ರಾಧಿಕಾರಿಗಳಾದ ರುದ್ರಮುನಿ, ಶಿವರಾಜಸ್ವಾಮಿ, ನೌಕರ ಸುಭಾಶ್ಚಂದ್ರ ಬೀಸರಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts