More

    ಕಾಡಾನೆಗಳ ಹಾವಳಿಗೆ ರೈತರ ಬೆಳೆ ನಾಶ

    ಹನಗೋಡು: ನಾಗರಹೊಳೆ ಉದ್ಯಾನವನದ ಅಂಚಿನ ಗ್ರಾಮಗಳಲ್ಲಿ ಮತ್ತೆ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಕಾಡಂಚಿನ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ರೈತರು ರಕ್ಷಿಸಿಕೊಳ್ಳಲಾಗದೆ ಕಂಗಾಲಾಗಿದ್ದಾರೆ.

    ಹುಣಸೂರು ವಲಯ ವ್ಯಾಪ್ತಿಗೆ ಸೇರಿದ ಉಡುವೇಪುರ ಗ್ರಾಮಕ್ಕೆ ಭಾನುವಾರ ರಾತ್ರಿ ಕಾಡಾನೆಗಳ ಹಿಂಡು ಮೇವನ್ನರಸಿ ಕಾಡಿನಿಂದ ಹೊರಬಂದು ರೈತರು ಬೆಳೆದಿರುವ ಬೆಳೆಗಳನ್ನು ತಿಂದು, ತುಳಿದು ನಾಶ ಮಾಡಿವೆ.

    ಗ್ರಾಮದ ಪೊನ್ನಪ್ಪ ಅವರಿಗೆ ಸೇರಿದ 20 ಅಡಕೆ ಮರ, ಸಪೋಟ ರಾಗಿ ಹಾಗೂ ಭತ್ತದ ಬೆಳೆಗಳನ್ನು ನಾಶ ಮಾಡಿವೆ. ಇದಲ್ಲದೆ ಸತೀಶ ಎಂಬುವರಿಗೆ ಸೇರಿದ ರಾಗಿ ಮತ್ತು ಭತ್ತದ ಬೆಳೆಯನ್ನು ತಿಂದಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಮಹಜರು ನಡೆಸಿದ್ದಾರೆ.

    ವಾರದಿಂದ ಕಾಟ: ಹಲವಾರು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಕಾಟವಿರಲಿಲ್ಲ. ಒಂದು ವಾರದಿಂದ ಅಯ್ಯನಕೆರೆ ಹಾಗೂ ಗಾಡಗಯ್ಯನಕಡ ಭಾಗದಿಂದ ಆನೆಗಳು ಅರಣ್ಯ ದಾಟಿ ಬಂದು ರೈತರ ಬೆಳೆ ನಾಶಪಡಿಸುತ್ತಿವೆ. ಕೂಡಲೇ ಆರಣ್ಯ ಇಲಾಖೆಯವರು ಈ ಭಾಗಕ್ಕೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ರೈತರ ಬೆಳೆ ರಕ್ಷಣೆಗೆ ಮುಂದಾಗಬೇಕೆಂದು ಗ್ರಾಮದ ಯುವ ಮುಖಂಡ ಕೊಂಬಾಲೆ ಸತೀಶ್ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts