More

    ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಿ

    ಲಿಂಗಸುಗೂರು: ರಾಷ್ಟ್ರೀಯ ಹೆದ್ದಾರಿ 748ಎ ಕಾಮಗಾರಿಗೆ ಭೂಮಿ ನೀಡುವ ರೈತರಿಗೆ ನ್ಯಾಯಯುತ ಪರಿಹಾರ ಕಲ್ಪಿಸಿದಾಗಲೇ ಜಮೀನು ನೀಡುವುದಾಗಿ ಹೆದ್ದಾರಿ 748ಎ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಎಸಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

    ಇದನ್ನೂ ಓದಿ: ರಾಜ್ಯ ಸರ್ಕಾರದ ಭೂಸುರಕ್ಷಾ’ನಿಮ್ಮ ದಾಖಲೆಗಳ ಇ-ಖಜಾನೆ ಡಿಜಟಲೀಕರಣದಿಂದ ರೈತರಿಗೆ ತ್ವರಿತ ದಾಖಲೆ ಸಿಗಲಿದೆ / ಬಿ.ಎಸ್.ಸುರೇಶ್

    ಭಾರತ ಮಾಲ ಯೋಜನೆಯಡಿ ಬೆಳಗಾವಿ-ಹೈದ್ರಾಬಾದ್ 748ಎ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಅಧಿಸೂಚನೆ ಹೊರಡಿಸಲಾಗಿದ್ದು, ಸದರಿ ಹೆದ್ದಾರಿಗೆ ಲಿಂಗಸುಗೂರು ಹಾಗೂ ಮಸ್ಕಿ ತಾಲೂಕುಗಳ ತೆರಬಾವಿ, ಕಡದರಾಳ, ಗುಡಿಹಾಳ, ಮಟ್ಟೂರು, ಕುಣಿಕೆಲ್ಲೂರು, ಮಿಟ್ಟಿಕೆಲ್ಲೂರು, ಸಂತೆಕೆಲ್ಲೂರು,

    ಮುಸ್ಲಿಕಾರಲಕುಂಟಿ, ಗೋನವಾರ, ಅಮರಾವತಿ, ಪಾಮನಕಲ್ಲೂರು, ಆನಂದಗಲ್, ಕೋಟೆಕಲ್, ಅಮೀನಗಢ, ವಟಗಲ್, ಯಕ್ಸಲಾಪುರ ಗ್ರಾಮಗಳ ರೈತರ ಜಮೀನುಗಳು ಭೂ ಸ್ವಾಧೀನಕ್ಕೆ ಒಳಪಡಲಿವೆ.

    ಕಾಯ್ದೆ 1956ರ ಪ್ರಕಾರ ಅತ್ಯಂತ ಕಡಿಮೆ ಬೆಲೆ ನಿಗದಿಪಡಿಸಲಾಗುವುದು. ಇದನ್ನು ಅಳವಡಿಸದೆ, 2013ರ ತಿದ್ದುಪಡಿ ಕಾಯ್ದೆ ಭೂ ಸ್ವಾಧೀನ ಪ್ರಕ್ರೀಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಯುತ ಪರಿಹಾರ ಹಕ್ಕು ಮತ್ತು ಪುನರ್ ವಸತಿ ಹಾಗೂ ವ್ಯವಸ್ಥೆ ಕಾಯ್ದೆಗಳನ್ನು ಅಳವಡಿಸಬೇಕು.

    ರೈತರಿಗೆ ಪರಿಹಾರದ ವಿವರ ನೀಡಬೇಕು. ನಂತರ ಆಕ್ಷೇಪಣೆ ಆಹ್ವಾನಿಸಬೇಕೆಂದು ಸ್ಪಷ್ಟವಾಗಿದ್ದರೂ ಪಾಲಿಸದೆ ಕಾಯ್ದೆ ಉಲ್ಲಂಘಸಿ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಪ್ರಸಕ್ತ ಮಾರುಕಟ್ಟೆ ಬೆಲೆ ಆಧರಿಸಿ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.

    ಹೆದ್ದಾರಿಗಾಗಿ ಜಮೀನು ಕಳೆದುಕೊಂಡ ಪ್ರತಿ ರೈತನಿಗೆ ಯೋಜನೆ ನಿರಾಶ್ರಿತ ಪ್ರಮಾಣಪತ್ರ ನೀಡಬೇಕು. ಜಂಟಿ ಸರ್ವೆ ನಡೆಸಿ ಜಮೀನಿನಲ್ಲಿ ಬಾವಿ, ಬೋರ್‌ವೆಲ್, ಮರ, ವಡ್ಡು ಇತ್ಯಾದಿ ದಾಖಲಿಸಿ ಪುನಃ ಬೆಲೆ ನಿಗದಿ ಮಾಡಿ. ಶೇ50ರಷ್ಟು ಹೋಗುವ ಜಮೀನಿಗೆ ಮತ್ತು ಮನೆ ಇತ್ಯಾದಿಗಳಿಗೆ ಸೆಕೆಂಡ್ ಶೆಡ್ಯೂಲ್ ಆಧಾರದಲ್ಲಿ ವಿಶೇಷ ಪರಿಹಾರ ನೀಡಬೇಕು.

    ಭೂ ಸ್ವಾಧೀನಕ್ಕೆ ಬೇಕಾಗುವ ಅಗತ್ಯ ದಾಖಲೆ ಮತ್ತು ಕಾಗದ ಪತ್ರಗಳನ್ನು ಹೆದ್ದಾರಿ ಪ್ರಾಧಿಕಾರ ವ್ಯವಸ್ಥೆ ಮಾಡಿಕೊಳ್ಳಬೇಕು. ರೈತರ ಜಮೀನುಗಳಿಗೆ ತೆರಳಲು ಉತ್ತಮ ಗುಣಮಟ್ಟದ ದಾರಿ ನಿರ್ಮಿಸಿ ಕೊಡಬೇಕೆಂದು ಒತ್ತಾಯಿಸಿದರು.

    ಹೋರಾಟ ಸಮಿತಿ ಪ್ರಮುಖರಾದ ಶರಣಪ್ಪ ಉದ್ಭಾಳ, ಬಸವರಾಜ ವಟಗಲ್, ಸಿದ್ಧಲಿಂಗಪ್ಪ ಸಾಹುಕಾರ, ಮಲ್ಲನಗೌಡ ಹಳ್ಳಿ, ಶಿವನಗೌಡ ವಟಗಲ್, ಈರಣ್ಣ ಗುಡಿಹಾಳ, ಶಿವರಾಜ ಗೋನವಾರ, ಹನಮರಡ್ಡೆಪ್ಪ ಅಮೀನಗಢ, ಲಿಂಗಪ್ಪ ಮಟ್ಟೂರು, ಅಮರೇಶ ಸಂತೆಕೆಲ್ಲೂರು, ಶರಣಬಸವ ತೆರೆಬಾವಿ, ಮರೆಯಣ್ಣ ಆನಂದಗಲ್, ದೊಡ್ಡಪ್ಪ ಪಾಮನಕಲ್ಲೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts