More

    ಎಲ್ಲ ತಾಲೂಕಿನಲ್ಲೂ ರೈತ ಸಮಾವೇಶ ನಡೆಯಲಿ

    ಶೃಂಗೇರಿ: ಅಧಿಕಾರಿಗಳು ತಮ್ಮ ಇಲಾಖೆಯ ಕಾರ್ಯಯೋಜನೆ ರೂಪಿಸುವಾಗ ಸಾಧಕ-ಬಾಧಕಗಳನ್ನು ಚಿಂತಿಸಿದಾಗ ಮಾತ್ರ ಅಂತಹ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದು ಪ್ರಗತಿಪರ ಕೃಷಿಕ ತೋರಣಗದ್ದೆ ನಟರಾಜ್ ತಿಳಿಸಿದರು.

    ತಾಲೂಕು ಕೃಷಿಕ ಸಮಾಜ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸರ್ಕಾರವು ಕೃಷಿಕರಿಗೆ ಸರಿಯಾದ ಸಮಯದಲ್ಲಿ ಸಹಾಯಧನ ನೀಡಬೇಕು. ಪ್ರತಿ ವರ್ಷ ತಾಲೂಕಿನಲ್ಲಿ ರೈತ ಸಮಾವೇಶ ನಡೆಯಬೇಕು. ಆಗ ರೈತರಿಗೆ ಕೃಷಿ ಕುರಿತು ಸರಿಯಾದ ಮಾಹಿತಿ ದೊರೆಯಲು ಸಾಧ್ಯ. ಮಲೆನಾಡಿನಲ್ಲಿ ಮುಂದಿನ ಪೀಳಿಗೆಗೆ ಕೃಷಿ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿ ಮೂಡಿಸಲು ಸರ್ಕಾರ ವಿವಿಧ ಕಾರ್ಯಕ್ರಮ ರೂಪಿಸಬೇಕಿದೆ. ಪ್ರಕೃತಿ ವಿಕೋಪಕ್ಕೆ ಒಳಗಾಗುವ ಕೃಷಿಕರಿಗೆ ಸರ್ಕಾರ ಹಾಗೂ ಬ್ಯಾಂಕ್​ಗಳು ಸಹಕಾರ ನೀಡಬೇಕು. ಸಾವಯವ ಕೃಷಿಯತ್ತ ಕೃಷಿಕರು ಹೆಚ್ಚಿನ ಒಲವು ತೋರಿಸಬೇಕು ಎಂದರು.

    ಆರೋಗ್ಯ ವೃದ್ಧಿಯಲ್ಲಿ ಕೈತೋಟ ಪಾತ್ರ ಕುರಿತು ಮೂಡಿಗೆರೆ ತೋಟಗಾರಿಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಸತೀಶ್ ಮಾತನಾಡಿ, ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಸಿ ಅದನ್ನು ಉಪಯೋಗಿಸಿದರೆ ಆರೋಗ್ಯ ವೃದ್ಧಿಸುತ್ತದೆ. ತರಕಾರಿ ಹಾಗೂ ಹಣ್ಣುಗಳ ಸೇವನೆಗೆ ಜನರು ಹೆಚ್ಚು ಆದ್ಯತೆ ನೀಡಬೇಕು. ಮನೆ ಸುತ್ತಮುತ್ತಲಿನ ಜಾಗದಲ್ಲಿ ಕೈತೋಟ ನಿರ್ವಿುಸಿ ರಾಸಾಯನಿಕ ರಹಿತವಾಗಿ ತರಕಾರಿ ಬೆಳೆಸಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts