More

    ರೈತರಿಗೆ ರಸಗೊಬ್ಬರ ಸಮರ್ಪಕವಾಗಿ ಪೂರೈಸಲು ನವ ಕರ್ನಾಟಕ ಸೈನ್ಯದ ಪದಾಧಿಕಾರಿಗಳ ಒತ್ತಾಯ

    ಕುಷ್ಟಗಿ: ರೈತರಿಗೆ ರಸಗೊಬ್ಬರ(ಯೂರಿಯಾ) ಸಮರ್ಪಕ ಪೂರೈಸುವುದೂ ಸೇರಿ ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ವಿತರಿಸುವಂತೆ ಒತ್ತಾಯಿಸಿ ನವ ಕರ್ನಾಟಕ ಸೈನ್ಯ ಪದಾಧಿಕಾರಿಗಳು ಗ್ರೇಡ್ 2 ತಹಸೀಲ್ದಾರ್ ವಿಜಯಾಗೆ ಸೋಮವಾರ ಮನವಿ ಸಲ್ಲಿಸಿದರು.

    ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಸಂಪೂರ್ಣ ಮಳೆಯಾಗಿದ್ದು, ರೈತರು ವಿವಿಧ ಬೆಳೆಗಳ ಬಿತ್ತನೆ ಕೈಗೊಂಡಿದ್ದಾರೆ. ಸದ್ಯ ಬಿತ್ತನೆ ಕೈಗೊಂಡಿರುವ ಬೆಳೆಗೆ ರಸಗೊಬ್ಬರದ ಅವಶ್ಯಕತೆ ಇದೆ. ತಾಲೂಕಿನ ವಿವಿಧ ಹೋಬಳಿಗಳಲ್ಲಿ ರಸಗೊಬ್ಬರದ ಕೊರತೆ ಎದುರಾಗಿದೆ. ಸಂಪೂರ್ಣ ದಾಸ್ತಾನು ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಎಲ್ಲಿಯೂ ಸಮರ್ಪಕ ದಾದ್ತಾನು ಇಲ್ಲವಾಗಿದೆ. ಕೂಡಲೇ ದಾಸ್ತಾನು ಪೂರೈಸಬೇಕು. 2017ರಿಂದ ಈ ವರೆಗೆ ಬಹುತೇಕ ರೈತರಿಗೆ ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ವಿತರಣೆಯಾಗಿಲ್ಲ. ಸಚಿವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

    ಸಂಘಟನೆ ಜಿಲ್ಲಾಧ್ಯಕ್ಷ ಸಂಗಮೇಶ ಗುರಿಕಾರ, ಉಪಾಧ್ಯಕ್ಷ ಮಹಾಂತೇಶ ಬಾಗಲಿ, ತಾಲೂಕು ಅಧ್ಯಕ್ಷ ಶರಣಪ್ಪ ಮಾಲಗಿತ್ತಿ, ಉಪಾಧ್ಯಕ್ಷ ಹನುಮಪ್ಪ, ಕುಷ್ಟಗಿ ಹೋಬಳಿ ಘಟಕದ ಅಧ್ಯಕ್ಷ ಸಂಗಮೇಶ ಸೊಪ್ಪಿಮಠ, ಪದಾಧಿಕಾರಿಗಳಾದ ಮಹಾಂತೇಶ ಮಾಲಿಪಾಟೀಲ್, ರವಿ ಬೇನಾಳ, ಶಿವಕುಮಾರ ಕಟ್ಟಿಮನಿ, ಸುರೇಶ ಹೊಸಮನಿ, ವೀರೇಶ, ಶರಣಪ್ಪ, ಸುರೇಶ, ಗ್ಯಾನಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts