More

    ‘ಪಂಜಾಬ್​ನಲ್ಲಿ ಹೊರರಾಜ್ಯದ ಕೃಷಿ ಕಾರ್ಮಿಕರ ಶೋಷಣೆಯಾಗುತ್ತಿದೆ’ : ಕೇಂದ್ರ ಸರ್ಕಾರ

    ನವದೆಹಲಿ/ಚಂಡೀಗಢ : ಪಂಜಾಬ್​ನ ಗಡಿ ಜಿಲ್ಲೆಗಳಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದಿಂದ ವಲಸೆ ಬಂದಿರುವ ಕೃಷಿ ಕಾರ್ಮಿಕರನ್ನು ಅಮಾನವೀಯ ಪರಿಸ್ಥಿತಿಗಳಲ್ಲಿ ಜೀತದ ಮೇಲೆ ದುಡಿಸಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರವು ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದಿದೆ. ಪಂಜಾಬ್​ನ ಗುರುದಾಸ್‌ಪುರ, ಅಮೃತಸರ, ಫಿರೋಜ್‌ಪುರ ಮತ್ತು ಅಬೋಹರ್ ಜಿಲ್ಲೆಗಳಿಂದ, ಗಡಿ ಭದ್ರತಾ ಪಡೆ(ಬಿಎಸ್​ಎಫ್)ಯು, 2019 ಮತ್ತು 2020 ರ ನಡುವೆ ಇಂತಹ 58 ಕಾರ್ಮಿಕರನ್ನು ರಕ್ಷಿಸಿದೆ ಎಂದಿದೆ.

    ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಮಾರ್ಚ್ 17 ರಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಈ ರೀತಿ ಪತ್ರ ಕಳುಹಿಸಿದೆ. ಹ್ಯೂಮನ್ ಟ್ರಾಫಿಕಿಂಗ್​ ನಡೆಸುವ ಸಿಂಡಿಕೇಟ್​ಗಳು ಹೆಚ್ಚು ಹಣ ಸಂಪಾದಿಸುವ ಆಸೆ ತೋರಿಸಿ ಬೇರೆ ರಾಜ್ಯಗಳ ಬಡಜನರನ್ನು ಪಂಜಾಬಿಗೆ ಕರೆದುಕೊಂಡು ಬರುತ್ತಾರೆ. ಆದರೆ ಇಲ್ಲಿಗೆ ಬಂದ ಮೇಲೆ ಅವರನ್ನು ಶೋಷಿಸಲಾಗುತ್ತಿದೆ. ಈ ಕಾರ್ಮಿಕರಿಂದ ಹೆಚ್ಚು ಹೊತ್ತು ಕೆಲಸ ತೆಗೆಯಲು ಡ್ರಗ್ಸ್​ ನೀಡುವುದೂ ಸೇರಿದಂತೆ ವಿವಿಧ ಅಮಾನವೀಯ ವ್ಯವಹಾರ ನಡೆಯುತ್ತಿದೆ ಎಂಬುದು ಬೆಳಕಿಗೆ ಬಂದಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

    ಇದನ್ನೂ ಓದಿ: 48 ಗಂಟೆ ಚುನಾವಣಾ ಪ್ರಚಾರ ನಿಷೇಧ : ಹೈಕೋರ್ಟ್ ಮೆಟ್ಟಿಲೇರಿದ ಬಿಜೆಪಿ ನಾಯಕ

    ಈ ಗಂಭೀರ ವಿಚಾರದ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಂಡು ವರದಿ ನೀಡಬೇಕೆಂದು ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಈ ಪತ್ರದ ಆಧಾರದ ಮೇಲೆ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ರೈತ ಮುಖಂಡರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    “2019-20 ರ ಸಮಯದಲ್ಲಿ ನಡೆದ ತನಿಖೆಯ ಬಗ್ಗೆ ಇಷ್ಟು ಕಾಲ ಏಕೆ ಕ್ರಮ ತೆಗೆದುಕೊಂಡಿರಲಿಲ್ಲ. ಪಂಜಾಬ್ ರೈತರು ಕೃಷಿ ಕಾಯ್ದೆಗಳ ವಿರುದ್ಧ ನಡೆಸುತ್ತಿರುವ ಹೋರಾಟ ತೀವ್ರವಾಗಿರುವ ಸಂದರ್ಭದಲ್ಲಿ ಈ ರೀತಿಯ ಪತ್ರ ಬರೆದಿದ್ದಾರೆ. ನಮ್ಮ ರೈತರು ಕಾರ್ಮಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದನ್ನು ಹಾಳುಗೆಡವಿ, ನಮ್ಮ ಹೆಸರನ್ನು ಕೆಡಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ” ಎಂದು ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಕೋಆರ್ಡಿನೇಷನ್ ಕಮಿಟಿ ಸದಸ್ಯರಾದ ಜಗಮೋಹನ್ ಸಿಂಗ್ ಆರೋಪಿಸಿದ್ದಾರೆ. (ಏಜೆನ್ಸೀಸ್)

    “ಅಯ್ಯಪ್ಪಸ್ವಾಮಿ ಭಕ್ತರನ್ನು ಲಾಠಿಗಳಿಂದ ಸ್ವಾಗತಿಸಲಾಗಿದೆ” – ಕೇರಳದಲ್ಲಿ ಮೋದಿ

    ಮೂರನೇ ಹಂತ ಆರಂಭ : ಈ ತಿಂಗಳು ರಜಾ ದಿನಗಳಲ್ಲೂ ಲಸಿಕೆ ಲಭ್ಯ

    VIDEO | ವೈರಲ್ ಆಗ್ತಿದೆ, ಶನಾಯಾ ಕಪೂರ್​ರ ಆಕರ್ಷಕ ಬೆಲ್ಲಿ ಡ್ಯಾನ್ಸ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts