More

    ಡಾ. ವಿಷ್ಣುವರ್ಧನ್ ಅವ್ರು ‘ಕರ್ನಾಟಕ ರತ್ನ’ ಅಲ್ಲವೇ? ಸಿಎಂಗೆ ಅಭಿಮಾನಿಗಳ ಪ್ರಶ್ನೆ …

    ಮೈಸೂರು: ಡಾ. ವಿಷ್ಣುವರ್ಧನ್​ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಅವರ ಅಭಿಮಾನಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

    ಮೈಸೂರು ಮತ್ತು ನಂಜನಗೂಡು ಮಾರ್ಗ ಮಧ್ಯೆ ಇರುವ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣವಾಗಿದೆ. 13 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಭವ್ಯ ಸ್ಮಾರಕ ಉದ್ಘಾಟನೆಗೆ ಅಸಂಖ್ಯಾತ ವಿಷ್ಣು ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.

    ಇದನ್ನೂ ಓದಿ: ಮೈಸೂರಿನಲ್ಲಿ ವಿಷ್ಣು ಸ್ಮಾರಕ ಉದ್ಘಾಟನೆ: ಸರ್ಕಾರ, ಚಲನಚಿತ್ರ ಮಂಡಳಿ ವಿರುದ್ಧ ಅಭಿಮಾನಿಗಳ ಆಕ್ರೋಶ

    ‘ಸಾಹಸ ಸ್ಮಾರಕ’ ಲೋಕಾರ್ಪಣೆ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಜಿಟಿ ದೇವೆಗೌಡ, ಮಾಜಿ ಸಚಿವ ರಾಮದಾಸ್, ವಿಷ್ಣು ಕುಟುಂಬಸ್ಥರು ಸೇರಿದಂತೆ ಹಲವರು ಹಾಜರಿದ್ದರು.

    ಈ ಸಂದರ್ಭದಲ್ಲಿ ಆಗಮಿಸಿದ್ದ ಅಭಿಮಾನಿಗಳು, ‘ಮಾನ್ಯ ಮುಖ್ಯಮಂತ್ರಿಗಳೇ ಡಾ. ವಿಷ್ಣುವರ್ಧನ್ ಅವ್ರು ಕರ್ನಾಟಕ ರತ್ನ ಅಲ್ಲವೇ?’ ಎಂದು ಪೋಸ್ಟರ್​ ಹಿಡಿದು ಪ್ರಶ್ನಿಸಿದ್ದಾರೆ. ಬಿತ್ತಿ ಪತ್ರ ಹಿಡಿದು ಪ್ರತಿಭಟಿಸುವ ಮೂಲಕ ವಿಷ್ಣುವರ್ಧನ್​ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿಸಿ ಗೌರವಿಸಬೇಕು ಎಂದು ಮುಖ್ಯಮಂತ್ರಿಗಳು ಸಿಎಂಗೆ ಬೇಡಿಕೆ ಇಟ್ಟ ಸಾಹಸ ಸಿಂಹ ಅವರ ವಿಷ್ಣುವರ್ಧನ್ ಅಭಿಮಾನಿಗಳು.

    ಇದನ್ನೂ ಓದಿ: ಹೃದಯಾಘಾತದಿಂದ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಮಂದೀಪ್​ ರಾಯ್ ವಿಧಿವಶ

    ನಾನು ಮಾತನಾಡಲೋ, ಬೇಡವೋ ಹೇಳಿ ಎನ್ನುತ್ತಲೇ ಮಾತು ಶುರು ಮಾಡಿದ ಮುಖ್ಯಂತ್ರಿಗಳು, ‘ನಾನು ದಾದಾ ಅಭಿಮಾನಿಯಾಗಿ ಇಲ್ಲಿ ಬಂದಿದ್ದೇನೆ. 70ರ ದಶಕದಲ್ಲಿ ‘ಪ್ರಜಾಮತ’ದ ಮುಖಪುಟದಲ್ಲಿ ವಿಷ್ಣುವರ್ಧನ್ ಫೋಟೋ ಬಂದಿತ್ತು. ‘ನಾಗರಹಾವು’ ಸಿನಿಮಾದ ಅವರ ಲುಕ್ಕು ನೋಡಿದರೆ ಎಂತಹವರು ಬೇಕಾದರೂ ಫ್ಯಾನ್ ಆಗ್ತಾರೆ. ಅವರು. ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ನಾಯಕನಟರಾಗಿ ಮೆರೆದಿದ್ದಾರೆ. ಎಂತಹ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಮಾಡುತ್ತಿದ್ದರು. ವಿಷ್ಣು ಭಾವುಕಜೀವಿ, ಮಾನವತಾವಾದಿ. ಆಧ್ಯಾತ್ಮಿಕವಾಗಿ ಹತ್ತು ಹಲವು ವಿಚಾರಗಳನ್ನ ಹೇಳಿಹೋದರು. ಇವತ್ತು ಮೈಸೂರಿನಲ್ಲಿ ಸ್ಮಾರಕ ಆಗೋದಕ್ಕೆ ಅವರ ಕುಟುಂಬಸ್ಥರ ದಿಟ್ಟ ನಿರ್ಧಾರವೇ ಕಾರಣ. ಈ ಸ್ಮಾರಕ ಆಗೋದಕ್ಕೆ ಯಡಿಯೂರಪ್ಪ ಸಾಹೇಬ್ರು ಹಾಗೂ ಬಿಜೆಪಿ ಪಕ್ಷದವರು ಕಾರಣ ಅವರಿಗೆ ಧನ್ಯವಾದ ಅರ್ಪಿಸ್ತೇನೆ’ ಎಂದು ಹೇಳಿದರು.

    ಇನ್ನು, ಡಾ. ವಿಷ್ಣುವರ್ಧನ್​ ಅವರಿಗೆ ‘ಕರ್ನಾಟಕ ರತ್ನ’ ನೀಡುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ ಅವರು, ‘ನಿಮ್ಮ ಭಾವನೆಗಳಿಗೆ ಸಕರಾತ್ಮನವಾಗಿ ಸ್ಪಂದಿಸುತ್ತೇವೆ’ ಎಂದು ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿದ್ದಾರೆ.

    ಅಭಿಮಾನ್ ಸ್ಟುಡಿಯೋದಲ್ಲಿರುವ ಡಾ. ವಿಷ್ಣುವರ್ಧನ್​ ಪುಣ್ಯಭೂಮಿ ತೆರವು ಮಾಡೋದಕ್ಕೆ ಬಿಡುವುದಿಲ್ಲ ಎಂದು ಅನಿರುದ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts