More

    ಓಟಿಟಿಯಲ್ಲಿ ಹೊಸ ‘ವರಾಹ ರೂಪಂ’ ಹಾಡು ಕೇಳಿ ಅಭಿಮಾನಿಗಳ ಬೇಸರ

    ಬೆಂಗಳೂರು: ‘ಕಾಂತಾರ’ ಚಿತ್ರದ ಯಶಸ್ಸಿಗೆ ದೊಡ್ಡ ಕಾರಣವೆಂದರೆ, ಅದು ಕ್ಲೈಮ್ಯಾಕ್ಸ್​ನಲ್ಲಿ ಬರುವ ‘ವರಾಹ ರೂಪಂ’ ಹಾಡು. ಆದರೆ, ಅನುಮತಿ ಇಲ್ಲದೆ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡನ್ನು ಎಲ್ಲೂ ಬಳಸುವಂತಿಲ್ಲ ಎಂದು ಕೇರಳದ ಕೋರ್ಟ್​ ಆದೇಶ ನೀಡಿದ ಹಿನ್ನೆಲೆಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್​ಲ್ಲಿದ್ದ ಹಾಡಿನ ಟ್ಯೂನ್​ ಬದಲಾಯಿಸಿರುವುದರಿಂದ, ಅಭಿಮಾನಿಗಳಿ ಭಾರೀ ಬೇಸರವಾಗಿದೆ. ಈ ಸಂಬಂಧ ಹಲವರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಬೇಸರವನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಹುಡುಗಿಯರಿಬ್ಬರ ಆಡಿಯೋ ವೈರಲ್​ ಆದ ಬೆನ್ನಲ್ಲೇ ಸಂಬಂಧಕ್ಕೆ ಅಂತ್ಯವಾಡಿದ ಸನ್ನಿಧಿ! ವೈಷ್ಣವಿ ಮಾಡಿದ ಮನವಿ ಹೀಗಿದೆ…

    ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರದಲ್ಲಿರುವ ‘ವರಾಹ ರೂಪಂ’ ಹಾಡನ್ನು ‘ನವರಸಂ’ ಎಂಬ ಮಲಯಾಳಂ ಹಾಡಿನಿಂದ ಯಥಾವತ್ತಾಗಿ ಎರವಲು ಪಡೆಯಲಾಗಿದೆ ಎಂದು ಸುದ್ದಿಯಾಗಿತ್ತು. ಈ ಹಾಡನ್ನು ಮಲಯಾಳಂನ ಜನಪ್ರಿಯ ಬ್ರಾಂಡ್​ ಥಾಯ್ಕುಡಂ ಬ್ರಿಡ್ಜ್​ ರೂಪಿಸಿದ್ದು, ಚಿತ್ರತಂಡದವರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿತ್ತು. ಹಾಡನ್ನು ಬಳಿಸಿದ್ದಕ್ಕೆ ಕ್ರೆಡಿಟ್​ ಕೊಡಬೇಕು, ಇಲ್ಲ ಹಾಡನ್ನು ಬಳಸವುದಕ್ಕೆ ಅನುಮತಿ ನೀಡಬಾರದು ಎಂದು ಥಾಯ್ಕುಡಂ ಬ್ರಿಡ್ಜ್​, ಕೋರ್ಟ್​ಗೆ ಮನವಿ ಮಾಡಿತ್ತು.

    ಅರ್ಜಿ ವಿಚಾರಣೆ ನಡೆಸಿದ ಕೇರಳದ ಕೋರ್ಟ್​ ‘ವರಾಹ ರೂಪಂ …’ ಹಾಡಿನ ಮೇಲೆ ನಿರ್ಬಂಧ ಹೇರಿತ್ತು. ‘ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್​ಫಾರ್ಮ್​ಗಳಲ್ಲಿ ‘ಕಾಂತಾರ’ ಚಿತ್ರದ ‘ವರಾಹ ರೂಪಂ …’ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಬಾರದು’ ಎಂದು ಆದೇಶ ಹೊರಡಿಸಿತ್ತು. ಇದಕ್ಕೆ ತಲೆ ಬಾಗಿರುವ ಚಿತ್ರತಂಡವು, ದೊಡ್ಡ ಸೆನ್ಸೇಷನ್​ ಹುಟ್ಟುಹಾಕಿದ್ದ ‘ವರಾಹ ರೂಪಂ’ ಹಾಡನ್ನು ಯೂಟ್ಯೂಬ್​ನ ಹೊಂಬಾಳೆ ಫಿಲಂಸ್​ನ ಚಾನಲ್​ ಸೇರಿದಂತೆ ಮ್ಯೂಸಿಕ್ ಆ್ಯಪ್​ಗಳಾದ ಸಾವನ್ ಮುಂತಾದ ಕಡೆಗಳಿಂದ ಹಾಡನ್ನು ಡಿಲೀಟ್​ ಮಾಡಿದೆ. ಅಷ್ಟೇ ಅಲ್ಲ, ಗುರುವಾರ ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾದ ‘ಕಾಂತಾರ’ ಚಿತ್ರದಲ್ಲಿ ಬೇರೆ ಟ್ಯೂನ್​ ಬಳಸಲಾಗಿದೆ.

    ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ.’ವರಾಹ ರೂಪಂ’ ಹಾಡನ್ನು ನೋಡುವುದಕ್ಕೆ ಬೇಸರವಾಗುತ್ತದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ, ಈ ಹಿಂದೆ ಹಲವು ಕೃತಿಚೌರ್ಯದ ಪ್ರಕರಣಗಳು ನಡೆದಾಗ ಈಗ ಬೊಬ್ಬೆ ಹಾಕಿದವರು ಏನು ಮಾಡುತ್ತಿದ್ದರು ಆಗ ಯಾಕೆ ಸಂಬಂಧಪಟ್ಟವರಿಗೆ ನ್ಯಾಯ ಸಿಗಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ‘ವರಾಹ ರೂಪಂ’ ಹಾಡು ಚಿತ್ರದ ಆತ್ಮವಾಗಿದ್ದರಿಂದ, ‘ಕಾಂತಾರ’ ಮೊದಲಿನಂತಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ‘ಬ್ರಿಂಗ್​ ಬ್ಯಾಕ್​ ವರಾಹ ರೂಪಂ’ ಎಂಬ ಅಭಿಯಾನ ಸಹ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ.

    ಇದನ್ನೂ ಓದಿ: ಸಪ್ತಪದಿ ತುಳಿಯೋ ಮುನ್ನವೇ ಸನ್ನಿಧಿಗೆ ಮೋಸ? ಈ ಸಂಗತಿ ಗೊತ್ತಾದ್ರೆ ವೈಷ್ಣವಿಗೆ ಉಗಿದು ಉಪ್ಪಿನಕಾಯಿ ಹಾಕ್ತಾರಂತೆ

    ಆದರೆ, ನ್ಯಾಯಾಲಯದ ಆದೇಶ ಇರುವುದರಿಂದ, ಹಳೆಯ ‘ವರಾಹ ರೂಪಂ’ ಹಾಡನ್ನು ಪುನಃ ಬಳಸುವುದಕ್ಕೆ ಸಾಧ್ಯವೇ ಇಲ್ಲ.

    ಆಡಿಯೋ ಕೇಳಿ ನನ್ನ ಮಗಳು ಶಾಕ್​ನಲ್ಲಿದ್ದು, ರೂಂ‌ಮಿಂದ ಹೊರ ಬಂದಿಲ್ಲ: ವೈಷ್ಣವಿ ತಂದೆಯ ನೋವಿನ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts