More

    ಟೀಮ್​ ಇಂಡಿಯಾ ಕೋಚ್ ರವಿಶಾಸ್ತ್ರಿ ವಜಾಗೊಳಿಸಲು ಕ್ರಿಕೆಟ್ ಪ್ರೇಮಿಗಳ ಆಗ್ರಹ

    ನವದೆಹಲಿ: ಭಾರತ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ತನ್ನ ಕನಿಷ್ಠ ಮೊತ್ತ ಪೇರಿಸಿ ಅಡಿಲೇಡ್‌ನಲ್ಲಿ ಹೀನಾಯ ಸೋಲು ಕಂಡಿರುವ ಬೆನ್ನಲ್ಲೇ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ತಲೆದಂಡಕ್ಕೆ ಕ್ರಿಕೆಟ್ ಪ್ರೇಮಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಕೇಳಿಬಂದಿದೆ.

    ಭಾರತ ತಂಡದ ಆಡುವ ಬಳಗದ ಆಯ್ಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕ್ರಿಕೆಟ್ ಪ್ರೇಮಿಗಳು ರವಿಶಾಸ್ತ್ರಿ ರಾಜೀನಾಮೆ ನೀಡಬೇಕು ಅಥವಾ ಬಿಸಿಸಿಐ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ದ್ರಾವಿಡ್ ಅವರನ್ನು ಕೂಡಲೆ ಆಸ್ಟ್ರೇಲಿಯಾಕ್ಕೆ ಕಳುಹಿಸಿ ಎಂದು ವೆಂಗ್ಸರ್ಕಾರ್ ಹೇಳಿದ್ದೇಕೆ?

    ನಾಯಕ ವಿರಾಟ್ ಕೊಹ್ಲಿ ಜತೆಗೆ ಕೋಚ್ ರವಿಶಾಸ್ತ್ರಿ ಅವರು ಕೂಡ ಭಾರತ ತಂಡದ ಈ ಶೋಚನೀಯ ನಿರ್ವಹಣೆಗೆ ಹೊಣೆಗಾರರಾಗುತ್ತಾರೆ. ಕೆಎಲ್ ರಾಹುಲ್ ಮತ್ತು ಶುಭಮಾನ್ ಗಿಲ್ ಅವರನ್ನು ಆಡುವ ಬಳಗದಿಂದ ಹೇಗೆ ಹೊರಗಿಡಲು ಸಾಧ್ಯ? ಮತ್ತು ಫಾರ್ಮ್‌ನಲ್ಲಿಲ್ಲದ ಪೃಥ್ವಿ ಷಾ ಅವರನ್ನು ಆಡಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

    ರವಿಶಾಸ್ತ್ರಿ ಅವರನ್ನು ಕೂಡಲೇ ತಂಡದಿಂದ ಹೊರಹಾಕಬೇಕು. ವಿರಾಟ್ ಕೊಹ್ಲಿ ಈಗಲೂ ಅವರಿಗೆ ಬೆಂಬಲವಾಗಿ ನಿಲ್ಲುವುದಾದರೆ ಅವರನ್ನೂ ನಾಯಕತ್ವದಿಂದ ಕೈಬಿಡಬೇಕೆಂದು ಇನ್ನು ಕೆಲವರು ಹೇಳಿದ್ದಾರೆ.

    ಇದನ್ನೂ ಓದಿ: ಖೇಲೋ ಇಂಡಿಯಾ ಗೇಮ್ಸ್‌ಗೆ ಮಲ್ಲಕಂಬ ಸ್ಪರ್ಧೆ ಸೇರ್ಪಡೆ

    2019ರಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ಮರುನೇಮಕಗೊಂಡಿದ್ದ ರವಿಶಾಸ್ತ್ರಿ, 2021ರ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ವರೆಗೆ ಅವಧಿ ಹೊಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts