More

    ಅವಕಾಶ ಸಿಗದ್ದಕ್ಕೆ ವೇಶ್ಯಾವಾಟಿಕೆ ಮಾಡಿಕೊಂಡಿದ್ದ ಸ್ಟಾರ್ ಹೀರೋಯಿನ್ ಸತ್ತಿದ್ದು ಮಾತ್ರ ಹಸಿವಿನಿಂದ

    ಮುಂಬೈ: ಸಿನಿಮಾ ಇಂಡಸ್ಟ್ರಿ ಒಂದು ಬಣ್ಣದ ಲೋಕ. ಕೆಲವರು ಸೌಂದರ್ಯ, ನಟನೆಗೂ ಮೀರಿದ ಪ್ರತಿಭೆಯಿಂದ ಸ್ಟಾರ್ ಪಟ್ಟ ಗಳಿಸಿದ್ದಾರೆ. ಟಾಪ್ ಹೀರೋಯಿನ್ ಗಳಾಗಿ ಬೆಳ್ಳಿತೆರೆಯಲ್ಲಿ ಮೊಡಿ ಮಾಡಿದ ನಂತರ ಇಂಡಸ್ಟ್ರಿಯಿಂದ ಹೊರನಡೆದರು. ನಾವು ಇಂದು ನಿಮಗೆ ಹೇಳುತ್ತಿರುವ ಸ್ಟೋರಿ ಕೂಡಾ ಸ್ಟಾರ್​ ನಟಿಯಾಗಿ ಮಿಂಚಿದ್ದವರು ನಂತ್ರ ತಿನ್ನಲು ಊಟವಿಲ್ಲದೆ ಸಾವನ್ನಪ್ಪಿದ ನಿಶಾ ನೂರ್ ಕುರಿತಾಗಿ.

    ನಿಶಾ ನೂರ್ (1962-2007) ಒಬ್ಬ ಭಾರತೀಯ ನಟಿ . ಅವರು ಮುಖ್ಯವಾಗಿ ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಸಕ್ರಿಯರಾಗಿದ್ದರು. ಟಿಕ್ ಟಿಕ್ ಟಿಕ್, ಇನಿಮೈ ಇಟೊ ಇಟೊ, ಶ್ರೀ ರಾಘವೇಂದ್ರ ಸೇರಿದಂತೆ ಹಲವಾರು ತಮಿಳು ಚಿತ್ರಗಳಲ್ಲಿ ನಟಿ ನಿಶಾ ನೂರ್ ನಟಿಸಿದ್ದಾರೆ.

    ಒಂದು ಕಾಲದಲ್ಲಿ ನಿಶಾ ನೂರ್ ಜನಪ್ರಿಯತೆ ಇತರ ನಟಿಯರಿಗಿಂತ ಹೆಚ್ಚಾಗಿತ್ತು. ಅವರು ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ಹೀರೋಗಳು ಕೂಡ ಅವರ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದರು. ನಿರ್ದೇಶಕರು ನಿಶಾ ಅವರ ಚಿತ್ರಗಳಿಗಾಗಿ ಕಾಯುತ್ತಿದ್ದರು. ಅವಳಿಗೆ ಅತಿ ಹೆಚ್ಚು ಫಾಲೋವರ್ಸ್ ಸಿಕ್ಕಿತು.. ಆ ನಂತರ ನಿಧಾನವಾಗಿ ಅವಳ ಅವಕಾಶಗಳು ಕಡಿಮೆಯಾಗತೊಡಗಿದವು. ಪ್ರೇಕ್ಷಕರಲ್ಲಿ ನಿಶಾ ಕ್ರೇಜ್ ಕಡಿಮೆಯಾದಂತೆ ಅವರಿಗೆ ಚಿತ್ರಗಳು ಸಿಗಲಿಲ್ಲ. ನಿಶಾ ಅವರನ್ನು ನಾಯಕಿಯನ್ನಾಗಿ ಮಾಡಿ ರಿಸ್ಕ್ ತೆಗೆದುಕೊಳ್ಳಲು ಯಾವ ನಿರ್ದೇಶಕರೂ ತಯಾರು ಇಲ್ಲದೆ ಇರುವ ಸ್ಥಿತಿ ನಿರ್ಮಾಣವಾಗಿತ್ತು.

    ಸಿನಿಮಾ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ, ಜೀವನೋಪಾಯಕ್ಕಾಗಿ ವೇಶ್ಯಾವಾಟಿಕೆಗೆ ತಿರುಗಿದಳು. ನಿರ್ಮಾಪಕರೊಬ್ಬರ ಬಲವಂತದಿಂದ ಆಕೆ ಆ ವೃತ್ತಿಗೆ ಇಳಿದಿದ್ದಾಳೆ ಎಂಬ ಸುದ್ದಿ ಹಬ್ಬಿತ್ತು. ಇಲ್ಲಿಂದ ಅವಳ ಜೀವನದ ಕೆಟ್ಟ ಹಂತ ಪ್ರಾರಂಭವಾಯಿತು. ಎಲ್ಲೆಡೆ ನಟಿಯ ಬಗ್ಗೆ ಚರ್ಚೆ ಶುರುವಾಗಿತ್ತು. ಆಕೆ ಗಳಿಸಿದ್ದ ಕೀರ್ತಿ ಎಲ್ಲವೂ ಸರ್ವನಾಶವಾಗಿತ್ತು.

    ಹಲವು ವರ್ಷಗಳ ನಂತರ, ನಿಶಾ ನೂರ್ ದರ್ಗಾ ಒಂದರ ಹೊರಗೆ ಬೀದಿಯಲ್ಲಿ ಮಲಗಿದ್ದರು. ಅವಳನ್ನು ಗುರುತಿಸುವುದು ಕಷ್ಟವಾಗುವ  ಸ್ಥಿತಿಯಲ್ಲಿದ್ದಳು. ನಿಶಾ ನೂರ್ ಅವರನ್ನು ತಮಿಳು ಎನ್‌ಜಿಒ ಮುಸ್ಲಿಂ ಮುನ್ನೇತ್ರ ಕಳಗಂ ರಕ್ಷಿಸಿದರು.  ಆಸ್ಪತ್ರೆಯಲ್ಲಿ ದಾಖಲಿಸಿದಾಗ ನಿಶಾ ನೂರ್ ಏಡ್ಸ್ ನಿಂದ ಬಳಲುತ್ತಿರುವುದು ತಿಳಿಯಿತು. ನಿಶಾ ನೂರ್ 2007 ರಲ್ಲಿ ಆಸ್ಪತ್ರೆಯಲ್ಲಿ ಏಡ್ಸ್ ವಿರುದ್ಧದ ಹೋರಾಟದಲ್ಲಿ ವಿಫಲರಾದರು. 44 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

    ಕೆಲವು ಸೆಲೆಬ್ರಿಟಿಗಳು ತಮ್ಮ ಹಣಕಾಸಿಗಾಗಿ ತಪ್ಪು ದಾರಿಯನ್ನು ಆರಿಸಿಕೊಂಡಿದ್ದಾರೆ. ಇದರಿಂದ ಜೀವನ ನರಕವಾಯಿತು..ಕೊನೆಯ ದಿನಗಳಲ್ಲಿ ಅನಾಥರಾದರು. ಕೆಲವರ ಸಾವು ಇಂದಿಗೂ ಬಗೆಹರಿಯದ ನಿಗೂಢವಾಗಿದೆ. ನಿಶಾ ನೂರ್ ಆಕೆಯ ಕೊನೆಯ ದಿನಗಳು ಆಕೆ ಸಾವನ್ನು ಪ್ರೇಕ್ಷಕರು ಇನ್ನೂ ಮರೆತಿಲ್ಲ.

    ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ಇಂದು ಕಾಂಗ್ರೆಸ್ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts