More

    ತಾಯಂದಿರ ಮರಣ ತಗ್ಗಿಸಲು ನೂತನ ಗರ್ಭನಿರೋಧಕಗಳ ಬಿಡುಗಡೆ

    ಬೆಂಗಳೂರು: ತಾಯಂದಿರ ಮರಣ ಪ್ರಮಾಣ ತಗ್ಗಿಸಲು ಹಾಗೂ ಆರೋಗ್ಯಕರ ಶಿಶುಗಳ ಜನನಕ್ಕೆ ಮಕ್ಕಳ ನಡುವೆ ಆಂತರ ಕಾಯ್ದುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ‘ಅಂತರಾ ಇಂಜೆಕ್ಷನ್ ’ ಮತ್ತು ‘ಸಬ್ ಡರ್ಮಲ್ ಸಿಂಗಲ್ ರಾಡ್ ಇಂಪ್ಲಾಂಟ್’ ಎಂಬ ಎರಡು ನೂತನ ಗರ್ಭನಿರೋಧಕಗಳನ್ನು ಪರಿಚಯಿಸಲಾಗಿದೆ.

    ನಗರದಲ್ಲಿ ಸೋಮವಾರ ನಡೆದ ‘‘ಹೊಸ ಆಯ್ಕೆಗಳು ಮತ್ತು ಹೊಸ ಯೋಜನೆಗಳು – ರಾಜ್ಯ ಕುಟುಂಬ ಯೋಜನೆಯ ಶೃಂಗಸಭೆ’ಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ನೂತನ ಗರ್ಭನಿರೋಧಕಗಳನ್ನು ಬಿಡುಗಡೆ ಮಾಡಿದರು.

    ಈ ಗರ್ಭನಿರೋಧಕಗಳನ್ನು ಬೆಂಗಳೂರು ಮತ್ತು ಬೀದರ್ ಜಿಲ್ಲೆಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ. ಈವರೆಗೂ 200 ಲಾನುಭವಿಗಳಿಗೆ ್ತ ‘ಸಬ್ ಡರ್ಮಲ್ ಸಿಂಗಲ್ ರಾಡ್ ಇಂಪ್ಲಾಂಟ್’ ಅಳವಡಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಸೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಂತರ ಚುಚ್ಚುಮದ್ದು ನೀಡುವ ಕಾರ್ಯ ಆರಂಭಗೊಂಡಿದೆ.

    ಸಿಂಗಲ್ ರಾಡ್ ಇಂಪ್ಲಾಂಟ್: ಸಬ್ ಡರ್ಮಲ್ ಸಿಂಗಲ್ ರಾಡ್ ಇಂಪ್ಲಾಂಟ್. ಈ ಕಿರು ಸಾಧನವನ್ನು ಮಹಿಳೆಯ ಕೈ ತೋಳಿನ ಒಳಭಾಗಕ್ಕೆ ಹಾಕಲಾಗುವುದು. (ಕೆಲಸಕ್ಕೆ ಹೆಚ್ಚು ಬಳಕೆ ಮಾಡದ ಕೈ) ಇದನ್ನು ಒಮ್ಮೆ ಹಾಕಿದರೆ ಮೂರು ವರ್ಷಗಳ ವರೆಗೆ ಗರ್ಭಧಾರಿಸಲು ಸಾಧ್ಯವಾಗುವುದಿಲ್ಲ. ಹಾಗೊಮ್ಮೆ ಮಗು ಪಡೆಯಲು ಬಯಸುವವರು ಈ ಇಂಪ್ಲಾಂಟ್ ಅನ್ನು ಮಧ್ಯದಲ್ಲೇ ತೆಗೆಸಬಹುದಾಗಿದೆ. ತೆಗೆಸಿದ ಬಳಿಕ ಗರ್ಭಧರಿಸಬಹುದಾಗಿದೆ.

    ಅಂತರಾ ಇಂಜೆಕ್ಷನ್: ಈಗಾಗಲೇ ಅಂತರಾ ಇಂಜೆಕ್ಷನ್ ಇಂಟ್ರಾ ಮಸ್ಕೂಲರ್ ಲಭ್ಯವಿದ್ದು, ಅದನ್ನು ಚರ್ಮಕ್ಕೆ (ಮಾಂಸ ಖಂಡಕ್ಕೆ) ನೀಡಲಾಗುತ್ತಿದೆ. ಹೊಸ ‘ಅಂತರಾ ಇಂಜೆಕ್ಷನ್’ ಅನ್ನು ಚರ್ಮದ ಕಳಕ್ಕೆ ಅಂದರೆ (್ಯಾಟ್‌ಗೆ ) ನೀಡಲಾಗುತ್ತದೆ. ಈ ಎರಡೂ ಇನ್‌ಜೆಕ್ಷನ್‌ಗಳೂ ಒಂದೇ ರೀತಿ ಕೆಲಸ ಮಾಡುತ್ತವೆ. ಆದರೆ ಹೊಸ ಇನ್‌ಜೆಕ್ಷನ್‌ನಲ್ಲಿ ಗರ್ಭಧರಿಸುವಿಕೆ ಪ್ರಕ್ರಿಯೆಯನ್ನು ಹೆಚ್ಚು ನಿಧಾನಗೊಳಿಸುತ್ತದೆ. ಕಡಿಮೆ ವಯಸ್ಸಿಗೆ ವಿವಾಹವಾದವರು ಇಲ್ಲವೆ ಒಂದು ಮಗು ಪಡೆದವರು ಮತ್ತೊಂದು ಮಗುವಿನ ಅಂತರ ಕಾಯ್ದುಕೊಳ್ಳಲು ಈ ಇಂಜೆಕ್ಷನ್ ಪಡೆಯಬಹುದಾಗಿದೆ. ಇದನ್ನು ಪ್ರತಿ ಮೂರು ತಿಂಗಳಿಗೆ ಒಮ್ಮೆ ತೆಗೆದು ಕೊಳ್ಳಬೇಕು. ಮಗು ಪಡೆಯಲು ಭಯಸಿದಾಗ ಇಂಜೆಕ್ಷನ್ ನಿಲ್ಲಿಸಿದ 6-7 ತಿಂಗಳ ನಂತರ ಗರ್ಭಧರಿಸಬಹುದಾಗಿದೆ.

    ಗರ್ಭನಿರೋಧಕಗಳ ಬಹು ಆಯ್ಕೆ: ಈ ನೂತನ ವಿಧಾನಗಳನ್ನು ಪರಿಚಯಿಸುವ ಮೂಲಕ ಮಹಿಳೆಯರಿಗೆ ಗರ್ಭನಿರೋಧಕಗಳ ಆಯ್ಕೆಗಳನ್ನು ಹೆಚ್ಚಿಸಲಾಗುತ್ತಿದೆ. ಮಗು ಪಡೆಯಲು ಬಯಸುವವರೆಗೂ ದಂಪತಿಗೆ ಇದು ತಾತ್ಕಾಲಿಕ ಆಯ್ಕೆ ವಿಧಾನವಾಗಲಿದೆ. ಜೊತೆಗೆ ಚಿಕ್ಕ ವಯಸ್ಸಿನಲ್ಲಿ ಗರ್ಭಧರಿಸುವುದನ್ನು ತಡೆಯಲು ಹಾಗೂ ಒಂದು ಮಗು ಜನಿಸಿದ ನಂತರ ಮತ್ತೊಂದು ಮಗುವಿನ ನಡುವೆ ಅಂತರ ಕಾಯ್ದುಕೊಳ್ಳಲು ಅನುಕೂಲ ಆಗಲಿದೆ. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ ಎನ್ನುತ್ತಾರೆ ವೈದ್ಯರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts