More

    ಪುನೀತ್​ ನಿರ್ಮಾಣದ “ಫ್ಯಾಮಿಲ್​ ಪ್ಯಾಕ್​” ಮೋಷನ್​ ಪೋಸ್ಟರ್​ಗೆ ಭರ್ಜರಿ ರೆಸ್ಪಾನ್ಸ್​: ಮತ್ತೆ ಬಂದ್ರು ಲಿಖಿತ್​ ಶೆಟ್ಟಿ!

    ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ನಿರ್ಮಾಣದ ಮುಂದಿನ ಚಿತ್ರ ಹಾಗೂ ಸಂಕಷ್ಟಕರ ಗಣಪತಿ ಚಿತ್ರಖ್ಯಾತಿಯ ಲಿಖಿತ್​ ಶೆಟ್ಟಿ ಅಭಿನಯದ “ಫ್ಯಾಮಿಲಿ ಪ್ಯಾಕ್​” ಚಿತ್ರದ ಮೋಷನ್​ ಪೋಸ್ಟರ್​ ನಿನ್ನೆಯಷ್ಟೇ​ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ರೆಸ್ಪಾನ್ಸ್​​ ಪಡೆದುಕೊಳ್ಳುತ್ತಿದೆ.

    ಮೋಷನ್​ ಪೋಸ್ಟರ್​ ಬಿಡುಗಡೆ ಕುರಿತು ಬಾಲಿವುಡ್​ ಸಿನಿಮಾ ವಿಮರ್ಶಕ ತರುಣ್​ ಆದರ್ಶ್​ ಅವರು ಟ್ವೀಟ್​ ಮಾಡಿದ್ದು, ನೆಟ್ಟಿಗರು ಪ್ರತಿಕ್ರಿಯಿಸಿ ಪುನೀತ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಸ್ವಜನಪಕ್ಷಪಾತವಿಲ್ಲ. ಪುನೀತ್​ ಅವರು ತಮ್ಮ ಬ್ಯಾನರ್​ ಅಡಿಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಬೆಳೆಸುತ್ತಿದ್ದಾರೆ ಎಂದು ಹೊಗಳಿಕೆಯ ಕಾಮೆಂಟ್​ಗಳು ಹರಿದುಬಂದಿದ್ದು, ಫ್ಯಾಮಿಲಿ ಪ್ಯಾಕ್​ ಚಿತ್ರಕ್ಕೆ ಶುಭಕೋರಿದ್ದಾರೆ.

    ಚಿತ್ರದಲ್ಲಿ ನಾಯಕನಾಗಿ ಲಿಖಿತ್​ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ವಿಭಿನ್ನ ಕತೆಯನ್ನು ಹೊಂದಿದ್ದ ಸಂಕಷ್ಟಕರ ಗಣಪತಿ ಚಿತ್ರವನ್ನು ನಿರ್ದೇಶಿಸಿದ್ದ ಅರ್ಜುನ್​ ಕುಮಾರ್​ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮೊದಲ ಚಿತ್ರದಲ್ಲೇ ಸ್ಯಾಂಡಲ್​​ವುಡ್​ ಗಮನ ಸೆಳೆದಿದ್ದ ಅರ್ಜುನ್​ ಮತ್ತು ಲಿಖಿತ್​ ಮತ್ತೊಮ್ಮೆ ತಮ್ಮ ಜುಗಲ್​ಬಂಧಿ ಮುಂದುವರಿಸಲಿದ್ದು, ಈ ಬಾರಿ ಅವರ ಬೆನ್ನಿಗೆ ಪುನೀತ್​ ನಿಂತಿರುವುದು ದೊಡ್ಡ ಪವರ್​ ಬಂದಂತಾಗಿದೆ.

    ಚಿತ್ರಕ್ಕೆ ನಾಯಕಿಯಾಗಿ ಲವ್​ ಮಾಕ್ಟೇಲ್​ ಖ್ಯಾತಿಯ ಅಮೃತಾ ಅಯ್ಯಂಗರ್ ಬಣ್ಣ ಹಚ್ಚಿದ್ದಾರೆ. ಗುರುಕಿರಣ್​ ಅವರ ಸಂಗೀತವಿದ್ದು, ರಂಗಾಯಣ ರಘು, ಅಚ್ಯುತ್​ ಕುಮಾರ್​ ಸೇರಿದಂತೆ ಪ್ರಮುಖ ತಾರಾಗಣವೇ ಈ ಸಿನಿಮಾದಲ್ಲಿರಲಿದೆ. ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts