More

    ತಪ್ಪು ಮಾಹಿತಿ ನೀಡಿದ ಜನಪ್ರತಿನಿಧಿಗಳು

    ಬೆಳಗಾವಿ: ಕರೊನಾ ಹರಡುವಿಕೆ ಮತ್ತು ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ಪ್ರಚಾರ ಮಾಡುವ ಮೂಲಕ ಪಾಲಿಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಜುಗರಕ್ಕೀಡಾಗಿದ್ದಾರೆ.

    ಈಗಾಗಲೇ ದಿನಪತ್ರಿಕೆಗಳಿಂದ ಕರೊನಾ ವೈರಸ್ ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದೆ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಸಹ ತುರ್ತು ಸೇವೆಗಳಲ್ಲಿ ದಿನಪತ್ರಿಕೆಯೂ ಒಂದು ಎಂದು ಹೇಳುವ ಮೂಲಕ ಪತ್ರಿಕೆಗಳಿಂದ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ. ಆದರೂ, ಬೆಳಗಾವಿ ನಗರದಲ್ಲಿ ಶಾಸಕ ಅನಿಲ ಬೆನಕೆ, ಮಾಜಿ ನಗರಸೇವಕಿ ದೇಶಪಾಂಡೆ ಮತ್ತು ಮಹಾನಗರ ಪಾಲಿಕೆಯಿಂದ ತ್ಯಾಜ್ಯ ಸಂಗ್ರಹಿಸುವ ಹೊರಗುತ್ತಿಗೆದಾರರು ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ಬಿತ್ತರಿಸುವ ಮೂಲಕ ದಡ್ಡತನ ಪ್ರದರ್ಶನ ಮಾಡಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚರವಾದ ಶಾಸಕರು ಮತ್ತು ಪಾಲಿಕೆ ಅಧಿಕಾರಿಗಳು ತಪ್ಪಿನ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಗಮನಕ್ಕೆ ತರದೆ ಕಾರ್ಯಕರ್ತರು ತಪ್ಪು ಮಾಹಿತಿ ಪ್ರಚಾರ ಮಾಡುವ ಪ್ರಯತ್ನ ಮಾಡಿದ್ದಾರೆ. ಆಗಿರುವ ತಪ್ಪು ಸರಿಪಡಿಸುವುದಾಗಿ ಬೆನಕೆ ಜಾರಿಕೊಂಡಿದ್ದಾರೆ.

    ತ್ಯಾಜ್ಯ ಸಂಗ್ರಹಿಸುವ ಉದ್ದೇಶದಿಂದ ನಿಯೋಜಿತ ವಾಹನದಲ್ಲೂ ಪತ್ರಿಕೆಗಳ ಕುರಿತು ತಪ್ಪು ಮಾಹಿತಿ ಪ್ರಚಾರ ಮಾಡಿರುವುದು ತಿಳಿದು ಬಂದಿದೆ. ಅವರ ವಿರುದ್ಧ ಕ್ರಮ ಜರುಗಿಸಲು ನೋಟಿಸ್ ಜಾರಿ ಮಾಡಲಾಗಿದೆ.
    | ಜಗದೀಶ ಕೆ.ಎಚ್. ಪಾಲಿಕೆ ಆಯುಕ್ತ

    ದಿನ ಪತ್ರಿಕೆಗಳಿಂದ ಯಾವುದೇ ಸೋಂಕು ತಗಲುವುದಿಲ್ಲ. ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ತಪ್ಪು ಮಾಹಿತಿ ಹರಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಆ ಸಂಬಂಧ ಪಾಲಿಕೆ ಆಯುಕ್ತರಿಂದ ವರದಿ ಕೇಳಲಾಗಿದೆ.
    | ಡಾ.ಎಸ್.ಬಿ.ಬೊಮ್ಮನಹಳ್ಳಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts