More

    ಕಾಂಗ್ರೆಸ್ ಸರ್ಕಾರ ಪತನ: ಬಿ.ವೈ.ರಾಘವೇಂದ್ರ

    ಭದ್ರಾವತಿ: ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುವುದು ನಿಶ್ಚಿತ. ಅದನ್ನು ಅವರ ಪಕ್ಷದ ಶಾಸಕರೇ ಮಾಡಲಿದ್ದು ಉಚಿತ ಭಾಗ್ಯಗಳ ಗ್ಯಾರಂಟಿಗಳೇ ಸರ್ಕಾರ ಪತನದ ಭಾಗ್ಯವನ್ನು ತಂದುಕೊಡಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
    ಗುರುವಾರ ಸಂಜೆ ನಗರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪಕ್ಷದ ನೂತನ ಪದಾಽಕಾರಿಗಳ ಜವಾಬ್ದಾರಿ ಘೋಷಣೆ ಹಾಗೂ ಜವಾಬ್ದಾರಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಅಽಕಾರಕ್ಕಾಗಿ ರಾಹುಲ್ ಗಾಂಽ ಇಂದು ದೇಶದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅಚ್ಚರಿಯ ಸಂಗತಿ ಎಂದರೆ ಅವರು ಯಾವ ರಾಜ್ಯಗಳಲ್ಲಿ ಪಾದಯಾತ್ರೆ ಮಾಡಿದ್ದಾರೆಯೋ ಆ ರಾಜ್ಯದಲ್ಲೆಲ್ಲ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಇದನ್ನು ಅವರ ಪಕ್ಷದ ನಾಯಕರು, ಮುಖಂಡರು, ಒಕ್ಕೂಟದ ರಾಷ್ಟಿçÃಯ ನಾಯಕರುಗಳೇ ಬಹಿರಂಗವಾಗಿ ಹೇಳುತ್ತಿದ್ದಾರೆ ಎಂದರು.
    ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಬಿ.ವೈ.ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾದ ಮೇಲೆ ರಾಜ್ಯ ರಾಜಕಾರಣದಲ್ಲಿ ಮಿಂಚಿನ ಸಂಚಲ ಉಂಟು ಮಾಡಿದೆ. ಅದೇ ರೀತಿ ಕಾರ್ಯಕರ್ತರಲ್ಲಿ ಹೊಸ ಹುರುಪು ಹುಮ್ಮಸ್ಸು ಮೂಡಿದೆ. ರಾಜ್ಯದಿಂದ ಮಂಡಲದವರೆಗೆ ಹೊಸ ಪದಾಽಕಾರಿಗಳ ನೇಮಕಾತಿ ನಡೆದಿದೆ. ಪಕ್ಷದ ಜವಾಬ್ದಾರಿ ಸ್ವೀಕರಿಸಿದವರು ಪಕ್ಷದ ಆದರ್ಶಗಳನ್ನು ಸಾರ್ವಜನಿಕರಲ್ಲಿ ಭಿತ್ತಿ ರಾಷ್ಟಿçಯ ವಿಚಾರದೆಡೆಗೆ ಕೊಂಡೊಯ್ಯಬೇಕಿದೆ ಎಂದರು.
    ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಸಿ.ಮಂಜುಳಾ ಮಾತನಾಡಿ, ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಅದರ ಫಲವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವAತೆ ಮಾಡಿದ್ದಾರೆ. ಇಂತಹ ಮಹಿಳೆಯರ ಸಂಖ್ಯೆ ಹೆಚ್ಚಾಗಿ ಮತಗಳಿಕೆ ಪ್ರಮಾಣ ಹೆಚ್ಚಾಗಬೇಕು ಎಂದು ಕರೆ ನೀಡಿದರು.
    ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಂಗೋಟೆ ರುದ್ರೇಶ್, ಜಿ.ಆನಂದಕುಮಾರ್, ಎಸ್.ದತ್ತಾತ್ರಿ, ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಸಿಮೆಂಟ್ ಮಂಜುನಾಥ್, ಎಸ್.ಎನ್.ಬಾಲಕೃಷ್ಣ, ಹರಿಕೃಷ್ಣ, ನಗರಸಭಾ ಸದಸ್ಯರಾದ ವಿ.ಕದಿರೇಶ್, ಅನುಪಮಾ, ಶಶಿಕಲಾ, ಅನಿತಾ, ಅಣ್ಣಪ್ಪ, ಚನ್ನೆಶ್ ಇತರರಿದ್ದರು.

    ರಾಮ ಮಂದಿರ ಪ್ರತಿಷ್ಠಾಪನೆ ಸೇರಿ ನಮ್ಮ ಪಕ್ಷದ ಹಿರಿಯರು ಕಂಡ ಕನಸುಗಳು ಇಂದು ನನಸಾಗಿದೆ. ಇಂದು ಬಿಜೆಪಿ ಕಾರ್ಯಕರ್ತರನ್ನು ಮನೆಗೆ ಕರೆದು ಊಟ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ವಾತಾವರಣ ಮುಂದಿನ ತಲೆಮಾರಿನವರೂ ಅನುಭವಿಸಬೇಕು. ಕಾರ್ಯಕರ್ತರೆಲ್ಲರೂ ಒಗ್ಗೂಡಿ ಪಕ್ಷದ ಏಳಿಗೆಗೆ ಶ್ರಮಿಸಬೇಕು.
    | ಬಿ.ವೈ.ರಾಘವೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts