More

    ಸೇನೆಗೆ ನಕಲಿ ಅಂಕಪಟ್ಟಿ ಸಲ್ಲಿಸಿದ್ದವ ಸೆರೆ ವೈದ್ಯಕೀಯ ತಪಾಸಣೆ ವೇಳೆ ಪತ್ತೆ

    ಬೆಂಗಳೂರು: ಸೇನೆಯಲ್ಲಿ ನೌಕರಿ ಗಿಟ್ಟಿಸಿಕೊಳ್ಳಲು ನಕಲಿ ಅಂಕಪಟ್ಟಿ ಸಲ್ಲಿಸಿದ್ದ ಯುವಕನನ್ನು ಬಿಎಸ್​ಎಫ್ ಸಿಬ್ಬಂದಿ ಬಂಧಿಸಿದ್ದಾರೆ.

    ಉತ್ತರ ಪ್ರದೇಶದ ಔರಂಗಾಬಾದ್​ನ ವಿಪಿನ್ ಶರ್ಮಾ (24) ಬಂಧಿತ. ಬಿಎಸ್​ಎಫ್ ಅಧಿಕಾರಿ ಅರುಣ್ ಶರ್ಮಾ ದೂರು ಕೊಟ್ಟಿದ್ದಾರೆ. ಉತ್ತರಪ್ರದೇಶದ ಮನೋಜ್​ಕುಮಾರ್ ಮತ್ತು ಗಿರಿ ನಕಲಿ ಅಂಕಪಟ್ಟಿ ತಯಾರಿಸಿಕೊಟ್ಟಿರುವ ಶಂಕೆ ವ್ಯಕ್ತವಾಗಿದೆ. ಅವರಿಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿರುವುದಾಗಿ ಯಲಹಂಕ ಪೊಲೀಸರು ತಿಳಿಸಿದ್ದಾರೆ.

    ಬಿಎಸ್​ಎಫ್ ಸಿ.ಟಿ. ಹುದ್ದೆಯ ನೇಮಕಾತಿಗೆ ನಡೆದ ದೇಹದಾರ್ಢ್ಯ ಪರೀಕ್ಷೆಯಲ್ಲಿ ವಿಪಿನ್ ಆಯ್ಕೆಯಾಗಿದ್ದ. ಜ.22ರಂದು ನಡೆದ ವೈದ್ಯಕೀಯ ತಪಾಸಣೆ ವೇಳೆ ತನ್ನ ಹೆಸರನ್ನು ಮರೆಮಾಚಿ ಬಲಜಿತ್ ಸಿಂಗ್ ಟೇಕಾ ಸಿಂಗ್ ಹೆಸರಿನ ದಾಖಲಾತಿ ಸಲ್ಲಿಸಿದ್ದ. ಪರಿಶೀಲನೆ ವೇಳೆ ಅವು ನಕಲಿ ಎಂಬುದು ಸ್ಪಷ್ಟವಾಗಿತ್ತು. ವಾಸಸ್ಥಳ, ಜಾತಿ ಮತ್ತು ಆದಾಯ ಪ್ರಮಾಣಪತ್ರ ದಾಖಲಾತಿಗಳು ಯಲಹಂಕ ಕಂದಾಯ ಕಚೇರಿಯಿಂದ ಪಡೆದಿದ್ದು, ತಹಸೀಲ್ದಾರ್ ವೆಂಕಟೇಶ್ ಸಹಿ ಮಾಡಿದ್ದು ಗೊತ್ತಾಗಿತ್ತು.

    ಆರ್​ಡಿ ಸಂಖ್ಯೆ ಆಧರಿಸಿ ಕಂದಾಯ ಇಲಾಖೆ ಅಧಿಕೃತ ವೆಬ್​ಸೈಟ್​ನಲ್ಲಿ ಪರಿಶೀಲಿಸಿದಾಗ ಬಲಜಿತ್ ಸಿಂಗ್ ಹೆಸರಿನ ದಾಖಲೆಗಳು ನಂದಿನಿ ಲೇಔಟ್​ನ ಮಾನಸಾ ಚಿಟ್ಟಯ್ಯ ಎಂಬ ಯುವತಿ ಹೆಸರಿನಲ್ಲಿರುವುದು ದೃಢಪಟ್ಟಿದೆ. ಇದನ್ನು ಖಚಿತಪಡಿಸಿಕೊಳ್ಳಲು ಆರೋಪಿ ತಂದೆಗೆ ಕರೆ ಮಾಡಿದಾಗ ಉತ್ತರ ಭಾರತದ ವಿಪಿನ್ ಶರ್ಮಾ ಎಂಬುದು ಗೊತ್ತಾಗಿದೆ.

    ಕೂಡಲೇ ವಿಪಿನ್​ನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ತನ್ನ ಊರಿನ ಮನೋಜ್ ಮತ್ತು ಗಿರಿ ಎಂಬುವರು 50 ಸಾವಿರ ರೂ. ಪಡೆದು ಅಂಕಪಟ್ಟಿ ಹಾಗೂ ದಾಖಲಾತಿ ಕೊಟ್ಟಿದ್ದಾಗಿ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts