More

    ನಕಲಿ ಆಧಾರ ಕಾರ್ಡ್ ಸೃಷ್ಟಿ ಮಾಡುತ್ತಿದ್ದ ಭೂಪ ಅಂದರ್

    ಕುಮಟಾ:ನಕಲಿಬಾಧಾರ, ಪಾನ್ ಕಾರ್ಡ್ ತಯಾರಿಸುತ್ತಿದ್ದ ವ್ಯಕ್ತಿಯನ್ನು ಕುಮಟಾ ಠಾಣೆ‌ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
    ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ದಿಲೀಪ ಬಿ.ಆರ್.ರಾಜೆಗೌಡ ಬಂಧಿತ.
    ಕುಮಟಾ ಹೆಗಡೆಯ ಸುಬ್ರಾಯ ಕಡೆಕೋಡಿ‌ ಅವರ ಮೃತ ಪುತ್ರ ಶಮಂತ‌ ಕಡೆಕೋಡಿ ಅವರ ಹೆಸರಿನ ಆಧಾರ ಕಾರ್ಡ್ ನ ದಾಖಲೆಗಳನ್ನು ತಿದ್ದಿ, ದುರ್ಬಳಕೆ ಮಾಡಿರುವ ಬಗ್ಗೆ ದೂರು ನೀಡಿದ್ದರು.
    ಕುಮಟಾ ಇನ್ಸ್ ಪೆಕ್ಟರ್ ತಿಮ್ಮಪ್ಪ‌ ನಾಯ್ಕ, ಪಿಎಸ್ ಐ ನವೀನ ನಾಯ್ಕ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದೆ.
    ಬಂಧಿತ ಮೃತರ ಹೆಸರಿನ ಆಧಾರ ಕಾರ್ಡ್‌, ಪಾನ್ ಕಾರ್ಡ್ ಗಳನ್ನು ತನ್ನದೇ ಸಾಫ್ಟ್ ವೇರ್ ಬಳಸಿ ನಕಲಿಸುತ್ತಿದ್ದ ಎನ್ನಲಾಗಿದೆ.
    ಅದನ್ನು ಬಳಸಿ ಗೋವಾದಲ್ಲಿ ಐ ಫೋನ್ ಖರೀದಿಸಿ ಮೋಸ ಮಾಡಿದ್ದ.
    ಆತ ಇದೇ ಕೃತ್ಯ ಎಸಗುತ್ತಿದ್ದು, ರಾಜ್ಯದ ವಿವಿಧೆಡೆ, ಮಾತ್ರವಲ್ಲದೇ ಸಿಐಡಿಯಲ್ಲೂ ಪ್ರಕರಣ ದಾಖಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts