More

    ಕಾರ್ಖಾನೆ ಸಾಧನೆ ಹಿಂದಿದೆ ಸಿಬ್ಬಂದಿ ಶ್ರಮ

    ಕಾಗವಾಡ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗವಾದ ಕಾಗವಾಡದಲ್ಲಿ ಪ್ರಾರಂಭಗೊಂಡ ಶಿರಗುಪ್ಪಿ ಶುಗರ್ ವರ್ಕ್ಸ್ ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ ಕಬ್ಬಿಗೆ 2,700 ರೂ. ಬಿಲ್ ನೀಡಿದೆ. ಈ ದರವು ಕೇಂದ್ರ ಸರ್ಕಾರ ನಿಗದಿಪಡಿಸಿ ಎಫ್‌ಆರ್‌ಪಿ ದರಕ್ಕಿಂತ ಹೆಚ್ಚಿದೆ ಎಂದು ಶಿರಗುಪ್ಪಿ ಶುಗರ್ ವರ್ಕ್ಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆಣ್ಣವರ ಹೇಳಿದ್ದಾರೆ.

    ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿನ ಮುಕ್ತಾಯ ಸಮಾರಂಭದಲ್ಲಿ ಗುರುವಾರ ಮಾತನಾಡಿದ ಅವರು, ಹಂಗಾಮು ಆರಂಭವಾಗುವ ಮುನ್ನ ಪ್ರತಿ ಟನ್ ಕಬ್ಬಿಗೆ 2,700 ರೂ. ನೀಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ನಂತರ, ಸಕ್ಕರೆ ಬೆಲೆ ಕುಸಿದರೂ ರೈತರಿಗೆ ಅನ್ಯಾಯವಾಗಬಾರದು ಎಂಬ ಕಾರಣದಿಂದ ರೈತರಿಗೆ ಹೆಚ್ಚಿನ ಬೆಲೆ ನೀಡಿದ್ದೇವೆ. ಪ್ರಸಕ್ತ ಹಂಗಾಮಿನಲ್ಲಿ ಒಟ್ಟು 153 ದಿನಗಳಲ್ಲಿ 7 ಲಕ್ಷ ಟನ್ ಕಬ್ಬು ನುರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದೇವೆ. ಇದಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ, ಕಾರ್ಮಿಕರ ಪ್ರಾಮಾಣಿಕತೆ ಹಾಗೂ ಸೂಕ್ತ ಸಹಕಾರ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಡಾ.ರಮೇಶ ದೊಡ್ಡಣ್ಣವರ ಮಾತನಾಡಿ, ಬರುವ ಹಂಗಾಮಿನಲ್ಲಿ ಕಾರ್ಖಾನೆ ಕಬ್ಬು ನುರಿಸುವ ಸಾಮರ್ಥ್ಯವನ್ನು 5 ರಿಂದ 9,500 ಟನ್‌ಗೆ ಹೆಚ್ಚಿಸುವುದು ಹಾಗೂ 40 ಮೆ. ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

    ಪೃಥ್ವಿ ದೊಡ್ಡಣ್ಣವರ, ರಾಜು ದೊಡ್ಡಣ್ಣವರ, ಮಹಾವೀರ ಸುಗಣ್ಣವರ, ಡಾ.ಅಣ್ಣಾಸಾಬ ಮಗದುಮ್ಮ, ಅರುಣ ಪರಾಂಡೆ, ಡಾ.ಸಾವಿತ್ರಿ ದೊಡ್ಡಣ್ಣವರ, ಎಚ್.ಡಿ.ಮುನವಳ್ಳಿ, ಕುಶಾಲ ಮಗೆಣ್ಣವರ, ಚಂದ್ರಕಾಂತ ಪಾಟೀಲ, ಎಸ್.ಬಿ.ಖೋತ, ಎಸ್.ಕೆ.ಮಂಗಸೂಳಿ, ಭೀಮಗೌಡ ಯಳಗೂಡ, ಎ.ಕೆ.ಪಾಟೀಲ, ವೀರೇಶ ಜೇಡರ, ಚಂದ್ರಕಾಂತ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts