More

    FACT CHECK | ದೆಹಲಿಯ ರೈತ ಪ್ರತಿಭಟನೆಯಲ್ಲಿ ನಿವೃತ್ತ ಯೋಧ ಗಾಯಗೊಂಡದ್ದು ನಿಜವೇ?

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಕಾವು ಹೆಚ್ಚುತ್ತಿರುವಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ನಾನಾ ರೀತಿಯ ಪ್ರಚೋದನಕಾರಿ ಸುದ್ದಿಗಳು ಹರಿದಾಡತೊಡಗಿವೆ. ಅವುಗಳ ಪೈಕಿ ಎರಡು ಚಿತ್ರಗಳನ್ನು ಒಳಗೊಂಡ ಈ ಸುದ್ದಿಯೂ ಒಂದು. ಒಂದು ಚಿತ್ರದಲ್ಲಿ ಸಿಖ್ ವಯೋವೃದ್ಧನೊಬ್ಬ ಎಡಗಣ್ಣಿಗೆ ಬ್ಯಾಂಡೇಜ್ ಹಾಕಿಕೊಂಡು ಅಸಹಾಯಕ ಸ್ಥಿತಿಯಲ್ಲಿದ್ದರೆ, ಇನ್ನೊಂದು ಚಿತ್ರದಲ್ಲಿ ಸೇನಾ ಸಮವಸ್ತ್ರದಲ್ಲಿರುವ ನಿವೃತ್ತ ಯೋಧ ಕೇಕ್ ಎದುರು ಕುಳಿತಿರುವ ದೃಶ್ಯವಿದೆ. ರೈತ ಪ್ರತಿಭಟನೆಯಲ್ಲಿ ಗಾಯಗೊಂಡ ಯೋಧ ಎಂಬ ಶೀರ್ಷಿಕೆಯೊಂದಿಗೆ ಇದು ಹರಿದಾಡುತ್ತಿದೆ. ಆದರೆ ನಿಜವಾಗಿಯೂ ಯೋಧ ಗಾಯಗೊಂಡಿದ್ದಾರೆಯೇ? ಫ್ಯಾಕ್ಟ್​ಚೆಕ್ ಹೇಳುವುದೇನು?

    ಫ್ಯಾಕ್ಟ್ ಚೆಕ್ ಪ್ರಕಾರ, ಸೇನಾ ಸಮವಸ್ತ್ರದಲ್ಲಿರುವ ವ್ಯಕ್ತಿ ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಪಿ.ಎಸ್​.ಧಿಲ್ಲೋನ್​. ಅವರು ಹುಟ್ಟುಹಬ್ಬ ಆಚರಿಸಿದ ಫೋಟೋವನ್ನು ಫೇಸ್​ಬುಕ್​ನ ಸಿಖ್ ಮಿಲಿಟರಿ ಹಿಸ್ಟರಿ ಫಾರಂ ಪೇಜ್​ನಲ್ಲಿ ಅಪ್ಲೋಡ್ ಮಾಡಿರುವುದು ಪತ್ತೆಯಾಗಿದೆ. ಅದೇ ರೀತಿ, ಸುಖ್ವಿಂದರ್ ಸಿಂಗ್ ಅವರ ಪೇಜ್​ನಲ್ಲೂ ಕಾಣಿಸಿದೆ. ನಿವೃತ್ತ ಯೋಧನ ಪುತ್ರ ಇವರು. ಇವರ ಪೋಸ್ಟ್​ಗಾಗಿ ಇಲ್ಲಿ ಕ್ಲಿಕ್ಕಿಸಿ..

    ಇದನ್ನೂ ಓದಿ: ಏಕದಿನ ಪಂದ್ಯಗಳಲ್ಲಿ ವೇಗದ 12,000 ರನ್ – ಸಚಿನ್ ದಾಖಲೆ ಮುರಿದ ಕೊಹ್ಲಿ

     

    ವಾಸ್ತವವಾಗಿ ನಿವೃತ್ತ ಯೋಧ ಧಿಲ್ಲೋನ್ ಅವರು ದೆಹಲಿಯಲ್ಲಿ ಸದ್ಯ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ. ಇನ್ಯಾರದೋ ಫೋಟೋಕ್ಕೆ ಇವರ ಫೋಟೋ ಸೇರಿಸಿ, ರೈತ ಪ್ರತಿಭಟನೆಯ ಕಾವನ್ನು ಹೆಚ್ಚಿಸುವ ಸಲುವಾಗಿ, ಪ್ರಚೋದನಕಾರಿ ಶೀರ್ಷಿಕೆಗಳ ಜತೆಗೆ ಬಳಸಲಾಗಿದೆ ಎಂಬ ಅಂಶ ಪತ್ತೆಯಾಗಿದೆ. ಫೇಕ್ ಪೋಸ್ಟ್​ ಇಲ್ಲಿದೆಇಲ್ಲಿದೆ.. (ಏಜೆನ್ಸೀಸ್)

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ 60ನೇ ಹುಟ್ಟುಹಬ್ಬದ ಸಂಭ್ರಮ- ಗಣ್ಯರಿಂದ ಶುಭಹಾರೈಕೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts