More

    ಮುಂದಿನ ದಿನಗಳಲ್ಲಿ ದೇಶದ ಸರ್ಕಾರಿ ಶಾಲೆಗಳು ಖಾಸಗಿ ಪಾಲಾಗಲಿದೆಯೇ?: ಇಲ್ಲಿದೆ ಸತ್ಯಾಂಶ!

    ನವದೆಹಲಿ: ದೇಶದ ಎಲ್ಲಾ ಸರ್ಕಾರಿ ಶಾಲೆಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂಬ ವಿಚಾರ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.​

    ಈ ವಿಚಾರ ಹಿಂದಿ ಪತ್ರಿಕೆಯೊಂದರಲ್ಲಿ ವರದಿಯೂ ಆಗಿತ್ತು. ಅಲ್ಲದೆ ವರದಿಯ ಸ್ಕ್ರೀನ್​ ಶಾಟ್ ಸಹ​ ಜಾಲತಾಣದಲ್ಲಿ ಸದ್ದು ಮಾಡಿತ್ತು. ಸರ್ಕಾರಿ ಶಾಲೆಗಳು ಖಾಸಗಿ ಪಾಲಾಗಲಿದೆ ಎಂದು ತಿಳಿದ ಅನೇಕರು ಆಘಾತಕ್ಕೂ ಒಳಗಾಗಿದ್ದರು.

    ಇದನ್ನೂ ಓದಿ: VIDEO| ಮಾನಸಿ ಸುಧೀರ್​ ಅಭಿನಯದಲ್ಲಿ ಅರಳಿದ ಅಕ್ಷರ ಗಣಪ: ಮತ್ತೆ ಮತ್ತೆ ನೋಡ್ಬೇಕೆನಿಸುವ ವಿಡಿಯೋ!

    ಸುದ್ದಿ ವೈರಲ್ ಆಗಿ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಈ ರೀತಿಯಾದ ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ. ಇದೊಂದು ನಕಲಿ ಸುದ್ದಿ ಎಂದು ಸರ್ಕಾರದ ಪ್ರೆಸ್​ ಇನ್ಫರ್ಮೇಶನ್​ ಬ್ಯೂರೋ (ಪಿಐಬಿ) ಫ್ಯಾಕ್ಟ್​ಚೆಕ್​ ನೀಡಿದೆ.

    ದೇಶದ ಸರ್ಕಾರಿ ಶಾಲೆಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲಿದೆ ಎಂದು ಕೆಲವು ಮಾಧ್ಯಮಗಳ ವರದಿ ಮಾಡಿವೆ. ಯಾವುದೇ ಕಾರಣಕ್ಕೂ ಇದನ್ನು ನಂಬಬೇಡಿ. ಇದು ಸತ್ಯಕ್ಕೆ ದೂರವಾದದ್ದು, ಸರ್ಕಾರಿ ಈ ರೀತಿಯ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪಿಐಬಿ ಟ್ವೀಟ್​ ಮಾಡಿದೆ.

    ಇಂತಹ ಮಾಹಿತಿಗಳನ್ನು ನಂಬದಿರಿ. ನಂಬಿಕಾರ್ಹ ಮೂಲಗಳ ಮಾಹಿತಿಯನ್ನು ಮಾತ್ರ ನಂಬಿ ಎಂದು ಪಿಐಬಿ ಎಚ್ಚರಿಸಿದೆ.

    ಇದನ್ನೂ ಓದಿ: ಸುಶಾಂತ್​ ಸಿಂಗ್​ ರಜಪೂತ್​ ಮಾದಕ ದ್ರವ್ಯ ವ್ಯಸನಿಯೇ? ತನಿಖೆಯಲ್ಲಿ ಹೊರಬಿತ್ತು ಭಯಾನಕ ಸತ್ಯ…!

    ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳು ಹರಿದಾಡುವುದು ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಕುರಿತಾದ ನಕಲಿ ಸುದ್ದಿಗಳಿಗೆ ಸ್ಪಷ್ಟನೆ ನೀಡಲು ಪಿಐಬಿ 2019ರ ಡಿಸೆಂಬರ್​ನಲ್ಲಿ ಫ್ಯಾಕ್ಟ್​ಚೆಕ್​ ಕಾರ್ಯವನ್ನು ಆರಂಭಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts