More

    ಚಪ್ಪಲಿ ಹೊಲಿಯೋ ಹುಡುಗ ಎಸ್ಸೆಸ್ಸೆಲ್ಸಿ ಟಾಪರ್: ಇದು ನಿಜವಲ್ಲ, ಆದ್ರೂ ಸುಳ್ಳು ಅನಿಸುವುದೂ ಇಲ್ಲ!

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸ್ಪೂರ್ತಿದಾಯಕ ಸ್ಟೋರಿಗಳು ಕಾಣ ಸಿಗುತ್ತವೆ. ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿರುವ ಸ್ಪೋರಿಯು ಸಹ ಇದೇ ಗುಂಪಿಗೆ ಸೇರುತ್ತದೆ. ತುಂಬಾ ಉತ್ತೇಜಕವಾಗಿದ್ದರೂ, ಸ್ಟೋರಿಯಲ್ಲಿ ಟ್ವಿಸ್ಟ್​ ಇನ್ನು ಹೆಚ್ಚಿನ ಸ್ಪೂರ್ತಿ ನೀಡುತ್ತದೆ.

    ಈಗಾಗಲೇ ವಿವಿಧ ಬೋರ್ಡ್​ ಎಕ್ಸಮ್​ ಫಲಿತಾಂಶ ಹೊರಬಿದ್ದಿದೆ. ಇದರ ನಡುವೆ ಚಪ್ಪಲಿ ಹೊಲಿಯುವ ಹುಡುಗ ಹಾಗೂ ಪಶ್ಚಿಮ ಬಂಗಾಳದ ಸಂಜಯ್​​ ರಾಬಿದಾಸ್​ ಹೆಸರಿನ ಅಂಕಪಟ್ಟಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸ್ಪೂರ್ತಿಯ ಸಂದೇಶದೊಂದಿಗೆ ಹರಿದಾಡುತ್ತಿದೆ.

    ಇದನ್ನೂ ಓದಿ: ಲಾಕ್​ಡೌನ್ ಸಮಯದಲ್ಲಿ ಹಿತ್ತಲಲ್ಲಿ ಬೆಳೆದ ತರಕಾರಿ ತಿಂದವಳಿಗೆ ಕಾದಿತ್ತು ಬಿಗ್​ ಶಾಕ್​!

    ಚಪ್ಪಲಿ ಹೊಲಿಯುವ ಕೆಲಸ ಮಾಡುತ್ತಿದ್ದರೂ ಆರ್​ಎಸ್​ಎಸ್​ ಸದಸ್ಯನಾಗಿರುವ ರಾಬಿದಾಸ್​ ಪಶ್ಚಿಮ ಬಂಗಾಳ ಪ್ರೌಢ ಶಿಕ್ಷಣ ಮಂಡಳಿಯಲ್ಲಿ ಶೇ. 93 ರಷ್ಟು ಅಂಕ ಗಳಿಸಿದ್ದಾನೆ. ರಾಬಿದಾಸ್​ ತನ್ನ ತಂದೆಯನ್ನು ಕಳೆದುಕೊಂಡಿದ್ದಾನೆ ಎಂದು ಫೋಟೋ ಕುರಿತು ಬರೆಯಲಾಗಿದೆ. ಇದನ್ನು ನಂಬಿದ ನೆಟ್ಟಿಗರು ರಾಬಿದಾಸ್​ಗೆ ಅಭಿನಂದನೆಗಳ ಮಹಾಪೂರ ಸಲ್ಲಿಸಿದ್ದು, ಫೋಟೋವನ್ನು ತಮ್ಮ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

    ಚಪ್ಪಲಿ ಹೊಲಿಯೋ ಹುಡುಗ ಎಸ್ಸೆಸ್ಸೆಲ್ಸಿ ಟಾಪರ್: ಇದು ನಿಜವಲ್ಲ, ಆದ್ರೂ ಸುಳ್ಳು ಅನಿಸುವುದೂ ಇಲ್ಲ!

    ಆದರೆ ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಅಸಲಿಯತ್ತು ಬಹಿರಂಗವಾಗಿದೆ. ಫೋಟೋವನ್ನು ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ನಲ್ಲಿ ನೋಡಿದಾಗ ಸಂಜಯ್​ ರಾಬಿದಾಸ್​ ಕುರಿತಾದ ಸ್ಪೂರ್ತಿದಾಯ ಕತೆಯೊಂದು ತೆರೆದುಕೊಳ್ಳುತ್ತದೆ. 2018ರಲ್ಲಿ ಲೇಖನವೊಂದು ಪ್ರಕಟವಾಗಿದ್ದು, ತುಂಬಾ ಬಡತನ ಕುಟುಂಬದಲ್ಲಿ ಹುಟ್ಟಿದರೂ ಅನೇಕ ಅಡೆತಡೆಗಳನ್ನು ಮೆಟ್ಟಿನಿಂತು ರಾಬಿದಾಸ್​ ಪಶ್ಚಿಮ ಬಂಗಾಳದ 10ನೇ ತರಗತಿಯಲ್ಲಿ 465 ಅಂಕ ಗಳಿಸಿದ್ದಾರೆ.

    ಸಂಜಯ್​ ಮೂಲತಃ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಚಂಚಲ್​ ಪಟ್ಟಣದ ನಿವಾಸಿ. ಈತ ಕನೌ ಹೈಸ್ಕೂಲ್​ನಲ್ಲಿ ಓದುತ್ತಿದ್ದ. ಈತನ ಸ್ಟೋರಿ 2018ರಲ್ಲಿ ಪ್ರಭಾತ್​ ಖಾಬರ್​ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಹರಿದಾಡುತ್ತಿರುವ ಮಾರ್ಕ್ಸ್​ ಕಾರ್ಡಿನಲ್ಲೂ 2018ನೇ ಇಸವಿ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

    ಇದನ್ನೂ ಓದಿ: ತಮ್ಮನಿಗೆ ಕರೊನಾ ಸೋಂಕು ದೃಢವಾದ ಬೆನ್ನಲ್ಲೇ ನೇಣಿಗೆ ಶರಣಾದ ಅಣ್ಣ

    ಈ ಬಗ್ಗೆ ಮತ್ತಷ್ಟು ತಿಳಿಯಲು ಇಂಡಿಯಾ ಟುಡೆ ತಂಡ ನೇರವಾಗಿ ಸಂಜಯ್​ನನ್ನೇ ಭೇಟಿ ಮಾಡಿದ್ದಾರೆ. ವೈರಲ್​ ಆಗಿರುವ ಫೋಟೋ ಹಾಗೂ ಮಾರ್ಕ್ಸ್​ ಕಾರ್ಡ್​ ತನ್ನದೇ ಎಂದು ಒಪ್ಪಿಕೊಂಡಿರುವ ಸಂಜಯ್​, ವೈರಲ್​ ಆಗಿರುವಂತೆ ನಾನು ಶೇ. 93 ಅಂಕ ಗಳಿಸಿಲ್ಲ. ಬದಲಾಗಿ 2018ರಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 700ಕ್ಕೆ 465 ಅಂಕ ಗಳಿಸುವ ಮೂಲಕ ಶೇ 66 ಫಲಿತಾಂಶವನ್ನು ಪಡೆದಿದ್ದೇನೆ ಎಂದು ಸಂಜಯ್​ ಹೇಳಿದ್ದಾನೆ. ಅಲ್ಲದೆ, ನನಗೆ ತಂದೆ ಇಲ್ಲ ಎಂಬುದನ್ನು ತಿಳಿಸಿದ್ದು, ನಾನು ಆರ್​ಆರ್​ಎಸ್​ ಸದಸ್ಯ ಎಂಬುದನ್ನು ನಿರಾಕರಿಸಿದರು.

    ಕತೆಯಲ್ಲಿ ಮತ್ತೊಂದು ಟ್ವಿಸ್ಟ್​
    ಜಾಲತಾಣದಲ್ಲಿ ಕಳೆದ 12 ದಿನಗಳಿಂದ ಸಂಜಯ್​ ಶೇ. 93 ಫಲಿತಾಂಶ ಗಳಿಸಿದ್ದಾರೆ ಎಂದು ಫೋಟೋ ವೈರಲ್​ ಆಗಿದೆ. ಕಾಕತಾಳೀಯವೆಂದರೆ ಸಂಜಯ್​ ಪಶ್ಚಿಮ ಬಂಗಾಳ ಪಿಯು ಪರೀಕ್ಷೆ ಬರೆದಿದ್ದು, ಜುಲೈ 17ರಂದು ಪ್ರಕಟವಾದ ಫಲಿತಾಂಶದ ಪ್ರಕಾರ ಶೇ. 95 ಫಲಿತಾಂಶ ಬಂದಿದೆ. ಆದರೂ ಕೂಡ ವೈರಲ್​ ಫೋಟೋ ತಪ್ಪು ಸಂದೇಶದೊಂದಿಗೆ ಈ ಕ್ಷಣದವರೆಗೂ ಜಾಲತಾಣದಲ್ಲಿ ಗಿರಕಿ ಹೊಡೆಯುತ್ತಿದೆ. (ಏಜೆನ್ಸೀಸ್​)

    ಅಪ್ಪನನ್ನು ಭೇಟಿಯಾಗಿದ್ದು ಒಮ್ಮೆ ಮಾತ್ರ, ಅವರ ಮಾತಿನಂತೆ ಸಮಾಜಸೇವೆ ಮಾಡುವ ತುಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts