More

    ತಂದೆ ಫೋಟೋ ಸ್ಪರ್ಶಿಸುತ್ತಿರುವ ಮಗುವಿನ ಫೋಟೋ ಪುಲ್ವಾಮ ಹುತಾತ್ಮ ಯೋಧನಿಗೆ ಸಂಬಂಧಿಸಿದ್ದಾ? ಇದರ ಅಸಲಿಯತ್ತೇನು?

    ನವದೆಹಲಿ: ಫೆ. 14 ಪ್ರೇಮಿಗಳ ದಿನಾಚರಣೆ ಮಾತ್ರವಲ್ಲದೆ, ವರ್ಷದ ಹಿಂದೆ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣೆಯ ದಿನವು ಹೌದು. ಭಾರತ ಇತಿಹಾಸ ಪುಟದಲ್ಲಿ ಪುಲ್ವಾಮ ದಾಳಿ ಕರಾಳ ಘಟನೆಯಾಗಿ ಉಳಿದಿದ್ದು, ಫೆ. 14ರಂದು ಇಡೀ ದೇಶವೇ ಹುತಾತ್ಮ ಯೋಧರ ಸ್ಮರಣೆಯನ್ನು ಮಾಡಿ ಗೌರವ ಸಲ್ಲಿಸಿತು.

    ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮನಕಲಕುವ ಫೋಟೋವೊಂದು ವೈರಲ್​ ಆಗಿದೆ. ಫೋಟೋದಲ್ಲಿ ಮಹಿಳೆಯ ತೋಳಿನಲ್ಲಿರುವ ಮಗುವೊಂದು ಎದುರಿಗಿರುವ ವ್ಯಕ್ತಿಯ ಫೋಟೋವನ್ನು ಮುಟ್ಟತ್ತಿರುವ ದೃಶ್ಯವಿದೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮನಾದ ತಂದೆಯ ಫೋಟೋವನ್ನು ಮಗು ನೋಡುತ್ತಿದೆ ಎಂದು ಭಾವನಾತ್ಮಕವಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

    ವುಮೆನ್​ ಹೆಸರಿನ ಫೇಸ್​ಬುಕ್​ ಪೇಜ್​ನಲ್ಲಿ ಫೋಟೋವನ್ನು ಫೆ. 11ರಂದು ಅಪ್​ಲೋಡ್​ ಮಾಡಲಾಗಿದ್ದು, ಈವರೆಗೂ 2000ಕ್ಕೂ ಹೆಚ್ಚು ಶೇರ್​ ಆಗಿದೆ. ಆದರೆ ಈ ಫೋಟೋ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್ ವಾರ್​ ರೂಮ್​​ ಗಮನಕ್ಕೆ ಬಂದಾಗ ಫೋಟೋದ ಅಸಲಿಯತ್ತು ಏನೆಂದು ಬಯಲಾಗಿದೆ. ಅಷ್ಟಕ್ಕೂ ಈ ಪೋಟೋಗೂ ಪುಲ್ವಾಮ ದಾಳಿಗೂ ಸಂಬಂಧವೇ ಇಲ್ಲ. 2018ರಲ್ಲಿ ತೆಲಂಗಾಣದಲ್ಲಿ ನಡೆದ ಮರ್ಯಾದಾ ಹತ್ಯೆಗೆ ಸಂಬಂಧಿಸಿದ ಫೋಟೋ ಎಂದು ಹೇಳಲಾಗಿದೆ. ಫೋಟೋದಲ್ಲಿರುವು ಮಗುವಿನ ತಂದೆ. ಮಗುವನ್ನು ಹಿಡಿದುಕೊಂಡಿರುವುದು ತಾಯಿ ಎಂಬುದು ತಿಳಿದುಬಂದಿದೆ.

    ತಂದೆ ಫೋಟೋ ಸ್ಪರ್ಶಿಸುತ್ತಿರುವ ಮಗುವಿನ ಫೋಟೋ ಪುಲ್ವಾಮ ಹುತಾತ್ಮ ಯೋಧನಿಗೆ ಸಂಬಂಧಿಸಿದ್ದಾ? ಇದರ ಅಸಲಿಯತ್ತೇನು?

    ಫೋಟೋ ಸಂಬಂಧ ವಿಡಿಯೋವೊಂದು ತೆಲುಗಿನ “ಗಪ್​ ಚುಪ್​ ಮಸ್ತಿ” ಹೆಸರಿನ ಯೂಟ್ಯೂಬ್​ ಚಾನಲ್​ನಲ್ಲೂ ಅಪ್​ಲೋಡ್​ ಆಗಿದ್ದು, ಪ್ರಣಯ್​ ಕುಮಾರ್​ ಮತ್ತು ಅಮೃತ ಅವರ ಮೊದಲ ಗಂಡು ಮಗುವಿನ ಮೊದಲ ಬರ್ತಡೇ ಆಚರಣೆಯ ಫೋಟೋ ಎಂದು ಹೇಳಲಾಗಿದೆ.

    ಅಂದಹಾಗೆ ಅಂತರ್ಜಾತಿ ವಿವಾಹ ಎಂಬ ಕಾರಣಕ್ಕೆ ಪ್ರಣಯ್​ರನ್ನು ಅಮೃತಾ ತಂದೆ ಕೊಲೆ ಮಾಡಿಸಿದ್ದಾರೆ ಎಂಬ ಆರೋಪವಿದೆ. ಸೆಪ್ಟೆಂಬರ್​ 14, 2018ರಂದು ಗರ್ಭಿಣಿ ಪತ್ನಿಯ ಮುಂದೆ ಪ್ರಣಯ್​ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಆಸ್ಪತ್ರೆಯನ್ನು ಬಿಟ್ಟು ಬರುವಾಗ ಕೊಲೆ ಮಾಡಲಾಗಿತ್ತು.

    ಜನವರಿ 30, 2019ರಂದು ಅಮೃತಾ ಮೊದಲ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ವೈರಲ್​ ಆಗಿರುವ ಫೋಟೋವನ್ನು ಮಗುವಿನ ಬರ್ತ್​ಡೇ ಆಚರಣೆ ವೇಳೆ ತೆಗೆದುಕೊಳ್ಳಲಾಗಿದೆ ಎಂದು ಕೆಲ ಯೂಟ್ಯೂಬ್​ ವಿಡಿಯೋಗಳು ಸಾಕ್ಷೀಕರಿಸಿವೆ. ಹೀಗಾಗಿ ಪುಲ್ವಾಮ ದಾಳಿಗೂ ವೈರಲ್​ ಫೋಟೋಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts