More

    ಕೊರೊನಾ ವೈರಸ್​: ಮತ್ತಷ್ಟು ರೋಗ ಹರಡದಂತೆ ತಡೆಯಲು 20 ಸಾವಿರ ರೋಗಿಗಳನ್ನು ಕೊಲ್ಲಲು ಚೀನಾ ಮುಂದಾಗಿತ್ತಾ?

    ನವದೆಹಲಿ: ಚೀನಾದಲ್ಲಿ ಮೃತ್ಯುಕೂಪವಾಗಿರುವ ಕೊರೊನಾ ವೈರಸ್​ ಮತ್ತಷ್ಟು ಹರದಂತೆ ತಡೆಯಲು ಸೋಂಕು ತಗುಲಿರುವ 20 ಸಾವಿರ ರೋಗಿಗಳನ್ನು ಕೊಲ್ಲಲು ಚೀನಾ ಸರ್ಕಾರ ಅತ್ಯುನ್ನತ ನ್ಯಾಯಾಲಯ ಅನುಮತಿಯನ್ನು ಕೋರಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದು ಗಿರಕಿ ಹೊಡೆಯುತ್ತಿದ್ದು, ಇದು ಸತ್ಯಕ್ಕೆ ದೂರವಾದದ್ದು ಎಂದು ಇಂಡಿಯಾ ಟುಡೆ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಬಹಿರಂಗವಾಗಿದೆ.

    ವೈರಲ್​ ಪೋಸ್ಟ್​ ಬಗ್ಗೆ ತನಿಖೆಗೆ ಮುಂದಾದ ಇಂಡಿಯಾ ಟುಡೆ ಮೊದಲು ab-tc.com ಹೆಸರಿನ ವೆಬ್​ಸೈಟ್​ನಲ್ಲಿ ಲೇಖನವೊಂದ ಪ್ರಕಟವಾಗಿರುವುದನ್ನು ಗಮನಿಸಿದೆ. ಈ ಲೇಖನ ಹೇಳುವ ಪ್ರಕಾರ ಮತ್ತಷ್ಟು ರೋಗ ಹರಡದಂತೆ ತಡೆಯಲು 20 ಸಾವಿರ ರೋಗಿಗಳನ್ನು ಸಾಯಿಸಲು ಚೀನಾ ಸರ್ಕಾರ ಸುಪ್ರೀಂ ಕೋರ್ಟ್​ ಅನುಮತಿಯನ್ನು ಕೋರಿದೆ ಎಂದು ಹೇಳಿದೆ.

    ಚಂದ್ರಭಲ್​ ಸಿಂಗ್​ ಎಂಬ ಫೇಸ್​ಬುಕ್​ ಬಳಕೆದಾರ ab-tc.com ವೆಬ್​ಸೈಟ್​​ ಲೇಖನದ ಸ್ಕ್ರೀನ್​ ಶಾಟ್​ ತೆಗೆದುಕೊಂಡು ತನ್ನ ಖಾತೆಯಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ರೋಗ ಹರಡದಂತೆ ತಡೆಯಲು 20 ಸಾವಿರ ರೋಗಿಗಳನ್ನು ಚೀನಾ ಸರ್ಕಾರ ಕೋರ್ಟ್ ಅನುಮತಿ ಕೋರಿದೆ. ಈಗಾಗಲೇ ಕೆಲ ರೋಗಿಗಳನ್ನು ಕೊಂದಿದೆ ಎಂಬ ಊಹಾಪೋಹ ಹರಿದಾಡುತ್ತಿದೆ ಎಂದು ಬರೆದು ಫೋಸ್ಟ್​ ಮಾಡಿದ್ದಾರೆ. ಅಲ್ಲದೆ, ಈ ಪೋಸ್ಟ್​ ಅನ್ನು ಸಾಕಷ್ಟು ಮಂದಿ ಶೇರ್​ ಕೂಡ ಮಾಡಿಕೊಂಡಿದ್ದಾರೆ.

    ಕೊರೊನಾ ವೈರಸ್​: ಮತ್ತಷ್ಟು ರೋಗ ಹರಡದಂತೆ ತಡೆಯಲು 20 ಸಾವಿರ ರೋಗಿಗಳನ್ನು ಕೊಲ್ಲಲು ಚೀನಾ ಮುಂದಾಗಿತ್ತಾ?

    ಈ ಬಗ್ಗೆ ಫ್ಯಾಕ್ಟ್​ಚೆಕ್​ ನಡೆಸಿದ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್ ಇದು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದೆ.​ ab-tc.com ಅನುಮಾನಾಸ್ಪದ ವೆಬ್​​​ಸೈಟ್​ ಎಂದು ತಿಳಿದುಬಂದಿದೆ.

    ಈ ಬಗ್ಗೆ ಮತ್ತಷ್ಟು ಖಚಿತಪಡಿಸಿಕೊಳ್ಳಲು ಕೀವರ್ಡ್ಸ್​ ಮೂಲಕ ಗೂಗಲ್​ನಲ್ಲಿ ಹುಡುಕಾಡಿದಾಗ, ಈ ಸಂಬಂಧ ಯಾವುದೇ ವಿಶ್ವಾಸಾರ್ಹ ಮಾಹಿತಿ ಖಚಿತವಾಗಲಿಲ್ಲ. ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್​ ದೊಡ್ಡ ಸುದ್ದಿಯಾಗಿರುವುದರಿಂದ ಒಂದು ವೇಳೆ ಈ ದೊಡ್ಡ ಬೆಳವಣಿಗೆಯಾಗಿದ್ದರೆ, ಯಾವುದೇ ಮಾಧ್ಯಮಗಳು ಇದನ್ನು ವರದಿ ಮಾಡದೆ ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಡಲಾಗಿದೆ.

    ಚೀನಾದ ಸುಪ್ರೀಂಕೋರ್ಟ್​ಗೆ ಸಂಬಂಧಿಸಿದ ನ್ಯೂಸ್​ಗಳನ್ನು ಹುಡುಕಾಡಿದಾಗಲೂ ಈ ಸಂಬಂಧ ಯಾವುದೇ ಸುಳಿವು ಸಿಕ್ಕಿಲ್ಲ. ಕೊರೊನಾ ಸಂಬಂಧ ಈಗಾಗಲೇ ಸಾಕಷ್ಟು ನಕಲಿ ಸುದ್ದಿಗಳನ್ನು ಚೀನಾದಲ್ಲಿ ಪೋಸ್ಟ್​ ಮಾಡಿರುವುದನ್ನು ಪತ್ತೆ ಹಚ್ಚಲಾಗಿದೆ.

    ಇನ್ನು ab-tc.com ವೆಬ್​ಸೈಟ್​​ ಮಾಹಿತಿ ಬಗ್ಗೆ ಹುಡುಕಾಡಿದಾಗ ಇದೊಂದು ಅನುಮಾನಾಸ್ಪದ ವೆಬ್​ಸೈಟ್​ ಎಂದು ತಿಳಿದುಬಂದಿದೆ. ಪ್ರಾಂತ್ಯದ ಹೆಸರು ಹೊರತುಪಡಿಸಿದರೆ, ಕಚೇರಿ ವಿಳಾಸ, ನಗರದ ಹೆಸರು ಹಾಗೂ ಇಮೇಲ್​ ವಿಳಾಸವನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಹೀಗಾಗಿ ಇದೊಂದು ಅವಿಶ್ವಾಸಾರ್ಹ ನ್ಯೂಸ್​ ವೆಬ್​ಸೈಟ್​ ಎಂದು ತಿಳಿದುಬಂದಿದೆ. ಈ ಮೂಲಕ ಸ್ಪಷ್ಟವಾಗುವುದೇನೆಂದರೆ ರೋಗಿಗಳನ್ನು ಸಾಯಿಸುವಂತಹ ಯಾವುದೇ ಬೆಳವಣಿಗೆ ಚೀನಾದಲ್ಲಿ ನಡೆದಿಲ್ಲ. (ಏಜೆನ್ಸೀಸ್​)

    ಕೊರೊನಾ ವೈರಸ್​: ಮತ್ತಷ್ಟು ರೋಗ ಹರಡದಂತೆ ತಡೆಯಲು 20 ಸಾವಿರ ರೋಗಿಗಳನ್ನು ಕೊಲ್ಲಲು ಚೀನಾ ಮುಂದಾಗಿತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts