More

    FACT CHCK | ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಗಂಟಲು ತೇವವಾಗಿರಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವಾಲಯ ಸಲಹೆ ನೀಡಿದೆಯಾ?

    ನವದೆಹಲಿ: ಚೀನಾದಲ್ಲಿ ಕೊರೊನಾ ವೈರಸ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ಅದನ್ನು ತಡೆಗಟ್ಟಲು ಕೇಂದ್ರ ಆರೋಗ್ಯ ಸಚಿವಾಲಯ ಕೆಲವು ಸಲಹೆಗಳನ್ನು ನೀಡಿರುವ ಪಟ್ಟಿ ಸಾಮಾಜಿ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಈ ಪಟ್ಟಿಯಲ್ಲಿ ವೈರಸ್​ ಹರಡುವುದನ್ನು ತಡೆಗಟ್ಟಲು ಗಂಟಲನ್ನು ತೇವವಾಗಿರಿಸಿಕೊಳ್ಳಬೇಕು ಹಾಗೂ ಮಸಾಲೆ ಪದಾರ್ಥಗಳನ್ನು ತ್ಯಜಿಸಬೇಕು ಎನ್ನುವ ಸಲಹೆಗಳು ಹರಿದಾಡುತ್ತಿವೆ.

    ಆದರೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿರುವ ಕ್ರಮಗಳಲ್ಲಿ ಗಂಟಲು ತೇವವಾಗಿರಿಸಿಕೊಳ್ಳಬೇಕು. ಮಸಾಲೆ ಪದಾರ್ಥ ತ್ಯಜಿಸಬೇಕು ಎನ್ನುವ ಸಲಹೆ ಇಲ್ಲ ಎಂಬುದು ಪತ್ತೆಯಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್​ ನಕಲಿ ಎಂಬುದು ಪತ್ತೆಯಾಗಿದೆ.

    ಪೋಸ್ಟ್​ ಬಗ್ಗೆ ಎಎಫ್‌ಡಬ್ಲ್ಯೂಎ ತನಿಖೆ ನಡೆಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕೃತ ವೆಬ್​ಸೈಟ್​ನ್ನು ಕೂಡ ಪರಿಶೀಲನೆ ನಡೆಸಲಾಗಿದ್ದು, ವೈರಸ್​ ತಡೆಗಟ್ಟಲು ಪ್ರಯಾಣ ಮಾಡದಂತೆ ಸಲಹೆ ಮಾತ್ರ ನೀಡಿದೆ. ಅಲ್ಲದೆ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆಗಾಗ್ಗೆ ಕೈ ತೊಳೆಯುವುದು. ಮಾಸ್ಕ್​ ಧರಿಸಬೇಕು. ಜೀವಂತ ಪ್ರಾಣಿಗಳ ಸಂಪರ್ಕ ತಪ್ಪಿಸಬೇಕು. ಬೇಯಿಸದ ಮಾಂಸ ಸೇವಿಸಬಾರದು ಎಂದು ಎಚ್ಚರಿಕೆ ನೀಡಿದೆ.

    ಗಂಟಲನ್ನು ತೇವವಾಗಿರಿಸಿಕೊಳ್ಳಬೇಕು ಹಾಗೂ ಮಸಾಲೆ ಪದಾರ್ಥ ಸೇವನೆ ನಿಲ್ಲಿಸಬೇಕು ಎಂದು ಹೇಳಿಲ್ಲ. ಹೀಗಾಗಿ ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಕ್ರಮಗಳು ಸುಳ್ಳು ಎಂದು ಪತ್ತೆಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts