More

    FACT CHECK| ಶಾಲೆಯ ಕಿರುಕುಳದಿಂದ ಬೇಸತ್ತ 9 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವೇ?

    ನವದೆಹಲಿ: ಆಸ್ಟ್ರೇಲಿಯಾದ 9 ವರ್ಷದ ಬಾಲಕ ನಾನು ಸಾಯಲು ಬಯಸುತ್ತೇನೆ ಎಂದು ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಶಾಲೆಯಲ್ಲಿ ಆಗುತ್ತಿರುವ ಕಿರುಕುಳ ತಡೆಯಲು ಆಗುತ್ತಿಲ್ಲ. ಹೀಗಾಗಿ ನಾನು ಸಾಯಬೇಕು ಎಂದು ವಿದ್ಯಾರ್ಥಿ ಕ್ವಾಡೆನ್​ ಬೇಲ್ಸ್​ ಅಳುತ್ತಿರುವ ವಿಡಿಯೋ ಸಂಚಲನ ಸೃಷ್ಟಿಸಿತ್ತು. ವಿಶ್ವವ್ಯಾಪಿ ಹಂಚಿಕೆಯಾಗಿ ನೆಟ್ಟಿಗರು ಬಾಲಕನ ಬೆಂಬಲಕ್ಕೆ ನಿಂತಿದ್ದರು. ನಂತರ ಬಾಲಕ ಮೃತಪಟ್ಟ ಸುದ್ದಿಯನ್ನು ಬಿಬಿಸಿ ನ್ಯೂಸ್​ ಬಿತ್ತರಿಸಿದೆ ಎಂದು ಪೋಸ್ಟ್​ನಲ್ಲಿ ತಿಳಿಸಲಾಗಿತ್ತು.

    ಆದರೆ ಬಾಲಕ ಮೃತಪಟ್ಟ ಸುದ್ದಿ ಸುಳ್ಳು ಎಂದು ಫ್ಯಾಕ್ಟ್​ ಚೆಕ್​ನಿಂದ ಪತ್ತೆಯಾಗಿದೆ. ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಸಾಮಾಜಿಕ ಜಾಲ ತಾಣದಲ್ಲಿ ವೈರಲ್​ ಆದ ಪೋಸ್ಟ್​ ನಕಲಿ ಎಂದು ಪತ್ತೆ ಮಾಡಿದೆ. 9 ವರ್ಷದ ಬಾಲಕ ಶಾಲೆಯಲ್ಲಿ ಅನುಭವಿಸಿದ ಕಿರುಕುಳದಿಂದ ಮೃತಪಟ್ಟ ಸುದ್ದಿಯನ್ನು ಬಿಬಿಸಿ ನ್ಯೂಸ್​ ಪ್ರಕಟಿಸಿಲ್ಲ ಎಂಬುದನ್ನು ದೃಢಪಡಿಸಿದೆ.

    ವೈರಲ್ ಆದ ದೃಶ್ಯದ ಲಿಂಕ್​ ಕ್ಲಿಕ್​ ಮಾಡಿದಾಗ ನಿರೂಪಕ ಮಾತನಾಡುತ್ತಿರುತ್ತಾನೆ. 9 ವರ್ಷದ ಮಗುವಿನ ಶವವನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಹೇಳಿದ ನಂತರ ವಿಡಿಯೋ ಕ್ಲಿಪ್​ ಸ್ಥಗಿತಗೊಳ್ಳುತ್ತದೆ. ಹೀಗಾಗಿ ಇದು ಸುಳ್ಳು ಸುದ್ದಿ ಎಂದು ದೃಢಪಟ್ಟಿದೆ.

    ಬಿಬಿಸಿ ನ್ಯೂಸ್​ ವಿಶ್ವಾಸಾರ್ಹ ಸುದ್ದಿ ವಾಹಿನಿಯಾಗಿದ್ದು ಪುರಾವೆ ಇಲ್ಲದೆ ಯಾವುದೇ ಸುದ್ದಿಗಳನ್ನು ಬಿತ್ತರ ಮಾಡುವುದಿಲ್ಲ. ಬಾಲಕ ಮೃತಪಟ್ಟ ಬಗ್ಗೆ ಇತರೆ ಯಾವುದೇ ಸುದ್ದಿವಾಹಿನಿಗಳು ಬಿತ್ತರ ಮಾಡಿಲ್ಲ. ಹೀಗಾಗಿ ಇದು ಸುಳ್ಳು ಸುದ್ದಿ ಎಂಬ ನಿರ್ಧಾರಕ್ಕೆ ಬರಲಾಗಿದೆ. (ಏಜೆನ್ಸೀಸ್​)

    FACT CHECK| ಕ್ರೈಸ್ತ ಧರ್ಮಗುರು ಪೋಪ್​ ಫ್ರಾನ್ಸಿಸ್​ಗೆ ಕೊರೊನಾ ವೈರಸ್​ ಸೋಂಕು ಹರಡಿದೆಯೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts