More

    ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ವಿಫಲ

    ಚಿಕ್ಕೋಡಿ: ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗಾಗಿ ಸ್ಮಶಾನ ಭೂಮಿ, ಮೂಲಸೌಲಭ್ಯ ಒದಗಿಸುವಲ್ಲಿ ತಾಲೂಕಾಡಳಿತ ವಿಲವಾಗಿದೆ ಎಂದು ದಲಿತ ಮುಖಂಡ ಅಶೋಕ ಭಂಡಾರಕರ, ವಕೀಲ ಸುದರ್ಶನ ತಮ್ಮಣ್ಣವರ ಆಕ್ರೋಶ ವ್ಯಕ್ತಪಡಿಸಿದರು.

    ಪಟ್ಟಣದ ಐಎಂಎ ಸಭಾಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕುಮಟ್ಟದ ಪಜಾ,ಪಪಂ ಹಿತಕರ‌್ಷಣಾ ಹಾಗೂ ಸಂರಕ್ಷಣಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಮೂಲಸೌಲಭ್ಯ ಕಲ್ಪಿಸುವಲ್ಲಿ ವಿಲರಾಗಿದ್ದಾರೆ. ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹೆರಿಗೆ ಮಾಡಲು ವಿಳಂಬ ಧೋರಣೆ ತೋರುವುದಲ್ಲದೆ ತಮ್ಮ ಖಾಸಗಿ ಆಸ್ಪತ್ರೆಗೆ ಬರಲು ಹೇಳುತ್ತಾರೆ ಎಂದು ಆರೋಪಿಸಿದರು.

    ತಹಸೀಲ್ದಾರ್ ಚಿದಂಬರ ಕುಲಕರ್ಣಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸ್ಮಶಾನ ಭೂಮಿ ಇಲ್ಲದೆ ಇದ್ದರೆ ಮುಖಂಡರು ನಮ್ಮ ಗಮನಕ್ಕೆ ತರಬೇಕು. ಆಯಾ ಊರುಗಳಿಗೆ ಸ್ಮಶಾನ ಭೂಮಿ ಒದಗಿಸುವುದಲ್ಲದೆ ಸಮಾಜ ಕಲ್ಯಾಣ ಇಲಾಖೆಯಿಂದ ಸ್ಮಶಾನ ಭೂಮಿ ಅಭಿವೃದ್ಧಿಗಾಗಿ ಸರ್ಕಾರದ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

    ಅಶೋಕ ಭಂಡಾರಕರ, ಶೇಖರ ಪ್ರಭಾತ, ರಾವಸಾಹೇಬ ಕೀರೆ, ಸುದರ್ಶನ ತಮ್ಮಣ್ಣವರ, ನಿರಂಜನ ಕಾಂಬಳೆ ಸೇರಿ ದಲಿತ ಮುಖಂಡರು, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ.ಮೇಕನಮರಡಿ, ಸಿಪಿಐ ಶ್ರೀಧರ ಚೌಗಲಾ, ಎಸ್.ಎಸ್.ಕಾದ್ರೊಳ್ಳಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ ಸ್ವಾಗತಿಸಿದರು. ಸಂಜಯ ದೇಸಾಯಿ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts