More

    ಕೊರೊನಾ ವೈರಸ್​ ಎಫೆಕ್ಟ್​: ಗ್ಲೋಬಲ್​ ಮಾರ್ಕೆಟಿಂಗ್​ ಶೃಂಗಸಭೆಯನ್ನು ರದ್ದು ಮಾಡಿದ ಫೇಸ್​ಬುಕ್​

    ಸ್ಯಾನ್ ಫ್ರಾನ್ಸಿಸ್ಕೋ​: ಚೀನಾದಲ್ಲಿ ಯಮರೂಪಿಯಾಗಿ ಕಾಡುತ್ತಿರುವ ಕೊರೊನಾ ವೈರಸ್​ (COVID-19) ಚೀನಾ ಮಾತ್ರವಲ್ಲದೆ ಅನೇಕ ದೇಶಗಳಲ್ಲಿ ಪತ್ತೆಯಾಗಿದೆ. ಕೊರೊನಾ ಭಯದಿಂದಾಗಿ ತನ್ನ ಗ್ಲೋಬಲ್​ ಮಾರ್ಕೆಟಿಂಗ್​ ಶೃಂಗಸಭೆಯನ್ನು ರದ್ದು ಮಾಡಿರುವುದಾಗಿ ಫೇಸ್​ಬುಕ್​ ಸಂಸ್ಥೆ ತಿಳಿಸಿದೆ.

    ವಾಟ್ಸ್​ಆ್ಯಪ್​, ಫೇಸ್​ಬುಕ್​, ಇನ್ಸ್ಟಾಗ್ರಾಂ ಆ್ಯಪ್​ಗಳನ್ನು ಹೊಂದಿರುವ ಫೇಸ್​ಬುಕ್​ ಸಂಸ್ಥೆಯು ಮಾರ್ಚ್​ ತಿಂಗಳ 9ರಿಂದ 12ನೇ ತಾರೀಖಿನವರೆಗೆ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಗ್ಲೋಬಲ್​ ಮಾರ್ಕೆಟಿಂಗ್​ ಶೃಂಗಸಭೆಯನ್ನು ನಡೆಸಲು ನಿರ್ಧರಿಸಿತ್ತು. ಪ್ರಪಂಚದ ಎಲ್ಲಾ ಭಾಗಗಳಿಂದ ಒಟ್ಟು 4000ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿತ್ತು. ಆದರೆ ದಿನದಿಂದ ದಿನಕ್ಕೆ ಕೊರೊನಾ ವೈರಸ್​ ವ್ಯಾಪ್ತಿ ಹೆಚ್ಚುತ್ತಿದ್ದು, ಇದರಿಂದಾಗಿ ಭಯಬಿದ್ದಿರುವ ಸಂಸ್ಥೆಯು ಸಭೆಯನ್ನು ರದ್ದು ಮಾಡಿರುವುದಾಗಿ ತಿಳಿಸಿದೆ.

    ಈ ಹಿಂದೆ ಕೊರೊನಾ ವೈರಸ್​ನಿಂದಾಗಿ ಮೊಬೈಲ್​ ವರ್ಲ್ಡ್​ ಕಾಂಗ್ರೆಸ್​ ಕಾರ್ಯಕ್ರಮವನ್ನು ರದ್ದು ಮಾಡಿತ್ತು. ಚೈನೀಸ್​ ಗ್ರ್ಯಾಂಡ್​ ಪ್ರಿಕ್ಸ್​, ಬ್ಲ್ಯಾಕ್​ ಹ್ಯಾಟ್​ ಮಾಹಿತಿ ಭದ್ರತಾ ಸಮ್ಮೇಳನ, ಲಂಡನ್​ ಮೆಟಲ್​ ಎಕ್ಸ್​ಚೇಂಜ್​ನ ವಾರ್ಷಿಕ ಸಭೆ, ಆರ್ಟ್​ ಬಾಸೆಲ್​ ಅವರ ವಾರ್ಷಿಕ ಕಲಾ ಮೇಳ ಮುಂತಾದ ಕಾರ್ಯಕ್ರಮಗಳು ಕೊರೊನಾ ಭಯದಿಂದಾಗಿ ರದ್ದಾಗಿರುವುದು ವರದಿಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts