More

    ಶಾಲಾ ಕಟ್ಟಡ ದುರಸ್ತಿಗಾಗಿ ಫೇಸ್​ಬುಕ್ ಅಭಿಯಾನ, ಗ್ರಾಮಕ್ಕೆ ಶಿಕ್ಷಣ ಸಚಿವರ ಭೇಟಿ

    ಹಾಸನ: ನೂರು ವರ್ಷದ ಐತಿಹಾಸಿಕವುಳ್ಳ ಶಾಲಾ ಕಟ್ಟಡ ದುರಸ್ತಿಗೆ ಆಗ್ರಹಿಸಿ ಸಕಲೇಶಪುರ ತಾಲೂಕಿನ ದೇವಲಕೆರೆ ಗ್ರಾಮಸ್ಥರು ಮತ್ತು ಹಳೇ ವಿದ್ಯಾರ್ಥಿಗಳು ನಡೆಸಿದ ಫೇಸ್​ಬುಕ್​ ಅಭಿಯಾನ ಕಂಡ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಖುದ್ದು ಸ್ಥಳ ಪರಿಶೀಲಿಸಿದರು.

    ಶಾಲಾ ಕಟ್ಟಡ ದುರಸ್ತಿಗಾಗಿ ಫೇಸ್​ಬುಕ್ ಅಭಿಯಾನ, ಗ್ರಾಮಕ್ಕೆ ಶಿಕ್ಷಣ ಸಚಿವರ ಭೇಟಿ
    ಸಕಲೇಶಪುರ ತಾಲೂಕಿನ ದೇವಲಕೆರೆ ಗ್ರಾಮದ ಹಳೇ ಶಾಲಾ ಕಟ್ಟಡ.

    1911ರಲ್ಲಿ ದೇವಲಕೆರೆ ಗ್ರಾಮದ ಶಿವೇಗೌಡರು ದಾನಕೊಟ್ಟಿದ್ದ ಜಾಗದಲ್ಲಿರುವ ಈ ಶಾಲೆಯ ಕಟ್ಟಡ ಹಳೇಯದಾಗಿದ್ದು, ದುರಸ್ತಿ ಆಗಬೇಕಿದೆ. ಇದಕ್ಕೆ ಬದಲಿಯಾಗಿ 2008ರಲ್ಲಿ ನಿರ್ಮಾಣವಾದ ಹೊಸ ಕಟ್ಟಡಕ್ಕೆ ಶಾಲೆ ಸ್ಥಳಾಂತರಿಸಲಾಗಿದೆ. ಆದರೆ, ಹಳೇ ಶಾಲೆಯನ್ನು ಉಳಿಸಿಕೊಳ್ಳುವ ತುಡಿತ ಇಲ್ಲಿನ ಹಳೇ ವಿದ್ಯಾರ್ಥಿಗಳದ್ದು. ಹಾಗಾಗಿ  ಶಾಲೆಯ ವಿಡಿಯೋ ಹಾಕಿ ಫೇಸ್​ಬುಕ್​ ಅಭಿಯಾನ ನಡೆಸುತ್ತಿದ್ದಾರೆ.

    ಇದನ್ನೂ ಓದಿರಿ ಮೊಬೈಲ್​ ನೆಟ್​ವರ್ಕ್ ಸಿಗ್ತಿಲ್ಲ ಎಂದು ಗುಡ್ಡ ಏರಿದ್ದ ಯುವಕನಿಗೆ ಗುಂಡೇಟು!

    ಫೇಸ್‌ಬುಕ್‌ ಅಭಿಯಾನದ ವಿಡಿಯೋ ನೋಡಿ ಶನಿವಾರ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ಮಾಹಿತಿ ಸಂಗ್ರಹಿಸಿದರು. ಹೊಸ ಕಟ್ಟಡಕ್ಕೆ ಇಲ್ಲಿನ ಶಾಲೆ ಸ್ಥಳಾಂತರ ಬಳಿಕ ಹಳೇ ಕಟ್ಟಡ ಪಾಳುಬಿದ್ದಿದೆ. ಕಟ್ಟಡ ದುರಸ್ತಿ ಮಾಡಲು ಹಳೇ ವಿದ್ಯಾರ್ಥಿಗಳು ಛಾವಣಿ ಬಿಚ್ಚಿದ ಬಳಿಕ ಜಾಗ ದಾನ ಕೊಟ್ಟಿದ್ದ ಶಿವೇಗೌಡರ‌ ಕುಟುಂಬಸ್ಥರು ದುರಸ್ತಿ ಕಾರ್ಯಕ್ಕೆ ಅಡ್ಡಿ ಪಡಿಸಿರುವ ಆರೋಪ ಇದೆ. ಶಾಲಾ ಕಟ್ಟಡ ದುರಸ್ತಿಗೆ ಅವಕಾಶ ನೀಡಬೇಕು ಎಂದು ಗ್ರಾಮಸ್ಥರು ಸಚಿವರನ್ನು ಆಗ್ರಹಿಸಿದ್ದಾರೆ.

    ಇದನ್ನೂ ಓದಿರಿ ಎಲ್​ಕೆಜಿ, ಯುಕೆಜಿ ಮಕ್ಕಳ ಆನ್​ಲೈನ್​ ಶಿಕ್ಷಣಕ್ಕೆ ಬ್ರೇಕ್​ ಹಾಕಲಿದೆಯೇ ನಿಮ್ಹಾನ್ಸ್​ ವರದಿ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts