More

    ಅಪರಾಧಿಗಳನ್ನು ಕ್ಷಣಾರ್ಧದಲ್ಲಿ ಪತ್ತೆ ಹಚ್ಚಬಲ್ಲ ಫೇಸ್ ರಿಕಗ್ನಿಷನ್ ಟೆಕ್ನಾಲಜಿ

    ನವದೆಹಲಿ: ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಇತ್ತೀಚೆಗೆ ಮುಖ ಗುರುತಿಸುವ ತಂತ್ರದ ಬಳಕೆ ಹೆಚ್ಚಾಗಿದೆ. ಕ್ಯಾಮೆರಾದಲ್ಲಿ ಮುಖ ಸೆರೆಹಿಡಿಯಲಾದ ವ್ಯಕ್ತಿಯ ದತ್ತಾಂಶ ಸಹಿತ ಮಾಹಿತಿ ಹೊಂದಲು ತಂತ್ರಜ್ಞಾನವು ಅವಕಾಶ ನೀಡುತ್ತದೆ.
    ಮುಖ ಗುರುತಿಸುವಿಕೆಯ ವ್ಯವಸ್ಥೆ ಬಳಸಿಕೊಂಡು ದೆಹಲಿ ಪೊಲೀಸರು ಮೂವರು ಅಪರಾಧಿಗಳನ್ನು ಗುರುತಿಸಿ ಪತ್ತೆ ಹಚ್ಚಿದ್ದಾರೆ.

    ಇದನ್ನೂ ಓದಿ: video/ ಮರಳು ಕಲಾವಿದನ ಕೈಯಲ್ಲಿ ಅರಳಿತು ಶ್ರೀರಾಮ ಮಂದಿರ

    ಭಾನುವಾರ ಪೊಲೀಸರಿಗೆ ಬೆದರಿಕೆಯೊಡ್ಡಿದ್ದ ಅಪರಾಧಿಗಳನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ಬಂಧಿಸಲಾಯಿತು.
    ಪಿತಾಂಪುರ ಪ್ರದೇಶದಲ್ಲಿ ಮೂವರು ಮಾಸ್ಕ್ / ಹೆಲ್ಮೆಟ್ ಇಲ್ಲದೆ ಮೋಟಾರ್ ವಾಹನದಲ್ಲಿ ಪ್ರಯಾಣಿಸುತ್ತಿರುವುದನ್ನು ಪೊಲೀಸ್ ತಂಡ ಗಮನಿಸಿತು. ಅವರನ್ನು ನಿಲ್ಲಿಸಿದಾಗ, ಅವರು ‘ನಾವು ರೋಗಿಗಳು ಮತ್ತು ಆಸ್ಪತ್ರೆಯಿಂದ ಹಿಂತಿರುಗುತ್ತಿದ್ದೇವೆ’ ಎಂದು ಹೇಳಿದರು. ಪೊಲೀಸರು ಗುರುತಿನ ಚೀಟಿಗಳನ್ನು ತೋರಿಸಲು ತಿಳಿಸಿದರು.ಆದರೆ ಆರೋಪಿಗಳು ಪಿಸ್ತೂಲ್ ಹೊರತೆಗೆದು ಪೊಲೀಸರ ಕಡೆಗೆ ತೋರಿಸಿದರು. ನಂತರ, ಮೂವರು ಪೊಲೀಸ್ ವಾಹನಗಳನ್ನು ಹಾನಿಗೊಳಿಸಿ ಪರಾರಿಯಾದರು.

    ಇದನ್ನೂ ಓದಿ:  ಈ ‘ಚೋರ’ನಿಗೆ ಕಳ್ಳಿ ಅಮ್ಮನೇ ಮೊದಲ ಗುರು, ಅಜ್ಜಿಯೇ ರಕ್ಷಕಿ!

    ಪೊಲೀಸರು ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಾವಳಿ ಸಂಗ್ರಹಿಸಿ ಮುಖ ಗುರುತಿಸುವಿಕೆ ಸಾಫ್ಟ್‌ವೇರ್ ಸಹಾಯದಿಂದ ಮೂವರು ಬೈಕ್‌ ಸವಾರರ ಗುರುತುಗಳನ್ನು ಕಂಡುಹಿಡಿಯಲು ಅಪರಾಧ ದಾಖಲೆಗಳ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ಬೈಕರ್‌ಗಳಲ್ಲಿ ಒಬ್ಬರು ಕುಖ್ಯಾತ ಸ್ನ್ಯಾಚರ್ ಆಗಿದ್ದು, ಆತನನ್ನು ಅಮಿತ್ ಎಂದು ಗುರುತಿಸಲಾಗಿದೆ. ಆತ ದರೋಡೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಪೊಲೀಸರು ಈ ಹಿಂದೆ ಆತನನ್ನು ಬಂಧಿಸಿದ್ದರು.
    ಶೋಧ ಕಾರ್ಯದ ನಂತರ, ಮೌರ್ಯ ಎನ್‌ಕ್ಲೇವ್ ಪೊಲೀಸ್ ಠಾಣೆಯ ಪೊಲೀಸ್ ತಂಡವೊಂದು ಅಮಿತ್ ಮತ್ತು ಅವನ ಇಬ್ಬರು ಸಹಚರರಾದ ತರುಣ್ ಮತ್ತು ಸುನಿಲ್​ನನ್ನು ಪಿತಂಪುರ ಬಳಿ ಬಂಧಿಸಿ ಅವರ ಬಳಿ ಇದ್ದ ಮೂರು ಮೊಬೈಲ್ ಫೋನ್ ಮತ್ತು ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದೆ.
    ಸ್ಮಾರ್ಟ್ ಸಿಟಿ ಉಪಕ್ರಮದ ಅಡಿ ದೆಹಲಿ ಪೊಲೀಸರು ಕಳೆದ ವರ್ಷ ಮುಖ ಗುರುತಿಸುವ ವ್ಯವಸ್ಥೆಯನ್ನು ಅಳವಡಿಸಿದ್ದರು. ಕ್ರಿಮಿನಲ್ ದಾಖಲೆಗಳಿರುವವರು ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾದರೆ ಅದು ಎಚ್ಚರಿಕೆ ನೀಡುತ್ತದೆ.

    ಆತ್ಮಹತ್ಯೆ ಮಾಡಿಕೊಳ್ಳುವ ಮನೋಭಾವ ತಗ್ಗಿಸುವ ನೇಸಲ್​ ಸ್ಪ್ರೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts