More

    ನೇತ್ರದಾನ ಕುರಿತು ಜಾಗೃತಿ ಜಾಥಾ

    ವಿಜಯವಾಣಿ ಸುದ್ದಿಜಾಲ ಗದಗ
    ಸಾವನ್ನಪ್ಪಿದ ಬಳಿಕ ಮುಚ್ಚಿದ ಕಣ್ಣುಗಳಿಂದ ಇನ್ನೋರ್ವ ವ್ಯಕ್ತಿ ಜಗತ್ತನ್ನು ನೋಡಲು ಕಣ್ಣು ದಾನ ಮಾಡಿ ಎಂದು ಡಾ. ವೀರೇಶ ಹಂಚಿನಾಳ ಹೇಳಿದರು.
    ಲೈಯನ್ಸ್​ ಕ್ಲಬ್​ ವತಿಯಿಂದ ನಗರದಲ್ಲಿ ಸಾರ್ವಜನಿಕರಿಗೆ ಏರ್ಪಡಿಸಿದ್ದ ನೇತ್ರದಾನ ಜಾಗೃತಿ, ತಿಳುವಳಿಕೆ ಜಾಥಾ ಕಾರ್ಯಕ್ರಮಕ್ಕೆ ತೋಂಟದಾರ್ಯ ಮಠದ ಮುಂಭಾಗದಲ್ಲಿ ಚಾಲನೆ ನೀಡಿ ಮಾತನಾಡಿ, ಮರಣಾನಂತರ ನೇತ್ರಗಳನ್ನು ದಾನವಾಗಿ ನೀಡಲು ಪ್ರತಿಜ್ಞೆಯನ್ನು ಮಾಡಿ ತಮ್ಮ ಹೆಸರನ್ನು ನೋಂದಾಯಿಸಬೇಕು. ನೇತ್ರದಾನವು ಪವಿತ್ರವಾದ ಮಾನವತಾ ಸೇವೆ. ಈ ಆಂದೋಲನದ ಜಾಗೃತಿಯನ್ನು ಸಾಮಾನ್ಯ ಜನರಲ್ಲಿ ಮೂಡಿಸುವುದೇ ಸಂಸ್ಥೆಯ ಮುಖ್ಯ ಉದ್ದೇಶ ಎಂದರು.
    ತೋಂಟದಾರ್ಯ ಮಠದಿಂದ ಆರಂಭಗೊಂಡ ಈ ಜಾಥಾ ಮಹೇಂದ್ರಕರ, ಹುಯಿಲಗೋಳ ನಾರಾಯಣರಾವ್​, ಬಸವೇಶ್ವರ, ಕೆ. ಎಚ್​. ಪಾಟೀಲ, ಮಾಳಶೆಟ್ಟಿ ಸರ್ಕಲ್​, ಕೃಷ್ಣಾ ಟಾಕೀಜ್​ ಮಾರ್ಗವಾಗಿ ಮರಳಿ ತೋಂಟದಾರ್ಯ ಮಠದ ಬಳಿ ಬಂದು ಜಾಥಾ ಕೊನೆಗೊಂಡಿತು. ಮಾರ್ಗದಲ್ಲಿ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ನೇತ್ರದಾನದ ಕುರಿತು ಜಾಗೃತಿ ಮೂಡಿಸಲಾಯಿತು.
    ಕ್ಲಬ್​ ಅಧ್ಯ ರಮೇಶ ಶಿಗ್ಲಿ, ಕಾರ್ಯದಶಿರ್ ಪ್ರವಿಣ ವಾರಕರ, ರಾಜು ಮಲ್ಲಾಡದ, ದತ್ತು ಬೇವಿನಕಟ್ಟಿ, ಡಾ. ಜೆ. ಸಿ. ಶಿರೋಳ, ಎಂ. ಬಿ. ಸಿಕ್ಕೇದೇಸಾಯಿ,ಅರವಿಂದ ಪಟೇಲ್​, ಅನಂತ ಅಮೀಚಂದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts