More

    ಸ್ಪೋಟದಲ್ಲಿ ಜಖಂ ಆದ ಮನೆಗಳಿಗೆ ಮರು ವಸತಿ ಕಲ್ಪಿಸಿ

    ಶಿವಮೊಗ್ಗ: ಹುಣಸೋಡು ಸ್ಪೋಟದಲ್ಲಿ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರದ ಜತೆಗೆ ಜಖಂ ಆಗಿರುವ ಮನೆಗಳಿಗೆ ಮರು ವಸತಿ ಕಲ್ಪಿಸುವಂತೆ ಆಗ್ರಹಿಸಿ ಗುರುವಾರ ಕನ್ನಡ ಕಾರ್ವಿುಕರ ರಕ್ಷಣಾ ವೇದಿಕೆ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಸ್ಪೋಟದಲ್ಲಿ 6 ಜನರು ಮೃತಪಟ್ಟಿದ್ದು ಪರಿಹಾರದ ಮೊತ್ತ ಹೆಚ್ಚಿಸಬೇಕು. ಗಣಿಗಾರಿಕೆಯಿಂದ ಹಲವು ಮನೆಗಳು ಜಖಂ ಆಗಿದ್ದು, ತಕ್ಷಣವೇ ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

    ಜಿಲ್ಲೆಯ ಅಕ್ರಮ ಗಣಿಗಾರಿಕೆ ಹಿಂದೆ ಕೆಲವು ರಾಜಕಾರಣಿಗಳು ಕೈಜೋಡಿಸುತ್ತಿದ್ದು ಅದನ್ನು ತಡೆಯಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕೂಡ ಗುತ್ತಿಗೆದಾರರ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ಎಲ್ಲ ಘಟನೆಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು.

    ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್, ನಿತೀನ್ ರೆಡ್ಡಿ, ಅನ್ವರ್, ರವಿ, ಸೋಮಶೇಖರ್, ಸಂದೀಪ್, ಪ್ರದೀಪ, ಲೋಕೇಶ್ ಸೇರಿ ಹಲವರು ಪ್ರತಿಭಟನೆಯಲ್ಲಿದ್ದರು.

    — 28 ಎಸ್​ಎಂಜಿ 3–

    ಹುಣಸೋಡು ಸ್ಫೋಟ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಕನ್ನಡ ಕಾರ್ವಿುಕರ ರಕ್ಷಣಾ ವೇದಿಕೆ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ವಾಟಾಳ್ ಮಂಜುನಾಥ್, ನಿತೀನ್ ರೆಡ್ಡಿ, ಅನ್ವರ್, ರವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts