More

    ರಾಜ್ಯ ವಿಸ್ತರಣೆಯ ಯುಗಾಂತ್ಯವಾಗಿದೆ, ಇನ್ನೇನಿದ್ದರೂ ಅಭಿವೃದ್ಧಿ ಪರ್ವ

    ನವದೆಹಲಿ: ವಿಶ್ವದಲ್ಲಿ ಈಗ ರಾಜ್ಯ ವಿಸ್ತರಣೆಯ ಯುಗಾಂತ್ಯವಾಗಿದೆ. ಇನ್ನೇನಿದ್ದರೂ ಅಭಿವೃದ್ಧಿಯ ಪರ್ವ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಲೇಹ್​ನಲ್ಲಿನ ಮುಂಚೂಣಿ ಸೇನಾ ನೆಲೆಗೆ ಶುಕ್ರವಾರ ಭೇಟಿ ಕೊಟ್ಟಿದ್ದ ಅವರು ಅಲ್ಲಿ ನಿಯೋಜನೆಗೊಂಡಿರುವ ಸೇನಾಪಡೆ, ವಾಯುಪಡೆ ಹಾಗೂ ಐಟಿಬಿಪಿ ಯೋಧರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ವಿಸ್ತರಣೆಯ ಹಪಾಹಪಿ ಹೊಂದಿದ್ದ ಶಕ್ತಿಗಳೆಲ್ಲವೂ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದನ್ನು ಇತಿಹಾಸದಲ್ಲಿ ಕಾಣಬಹುದಾಗಿದೆ ಎಂದು ಹೇಳುವ ಮೂಲಕ ತಮ್ಮ ದೇಶದ ಸರಹದ್ದನ್ನು ವಿಸ್ತರಿಸಿಕೊಳ್ಳಲು ಕಾಲು ಕೆರೆದುಕೊಂಡು ಭಾರತದೊಂದಿಗೆ ಜಗಳಕ್ಕಿಳಿದಿರುವ ಚೀನಾಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

    ಭಾರತ ಮಾತೆಯ ಶತ್ರುಗಳಿಗೆ ನಮ್ಮ ಯೋಧರ ಧೈರ್ಯ ಮತ್ತು ಸಾಹಸದ ಪರಿಚಯವಾಗಿದೆ. ಅದು ವಿಶ್ವಯುದ್ಧಗಳೇ ಆಗಿರಲಿ ಅಥವಾ ಶಾಂತಿಯ ವಾತಾವರಣವೇ ಇರಲಿ. ನಮ್ಮ ಯೋಧರು ಪರಿಸ್ಥಿತಿಗೆ ತಕ್ಕಂತೆ ಸ್ಪಂದಿಸಲು ಸಮರ್ಥರಾಗಿದ್ದಾರೆ. ಯುದ್ಧದ ಸಂದರ್ಭದಲ್ಲಿ ಶಾಂತಿಯ ಮರುಸ್ಥಾಪನೆಗಾಗಿ ದಿಟ್ಟವಾಗಿ ಹೋರಾಡುವ ಅವರು, ಶಾಂತಿಯ ಕಾಲದಲ್ಲಿ ಜನರ ಒಳಿತಿಗಾಗಿ ಶ್ರಮಿಸುವ ಮಾನವೀಯ ಗುಣಗಳನ್ನೂ ಹೊಂದಿದ್ದಾರೆ ಎಂದರು.

    ಸಂತಸವಾಗಿದ್ದಾಗ ಕೊಳಲನು ನುಡಿಸಿ ಎಲ್ಲರೂ ತಲೆದೂಗುವಂತೆ ಮಾಡುತ್ತಿದ್ದ, ಸಂಕಷ್ಟ ಎದುರಾದಾಗ ಸುದರ್ಶನ ಚಕ್ರವನ್ನು ಬಿಟ್ಟು ರಕ್ಕಸರನ್ನು ಸದೆಬಡಿಯುತ್ತಿದ್ದ ಕೃಷ್ಣನ ಆರಾಧಾಕರು ನಾವು ಎಂದು ಪರೋಕ್ಷವಾಗಿ ಚೀನಾಕ್ಕೆ ಎಚ್ಚರಿಕೆ ನೀಡಿದರು.

    ಇದನ್ನೂ ಓದಿ: ಪ್ರಧಾನಿ ಮೋದಿ ಲಡಾಖ್​ ಭೇಟಿಗೆ ಚೀನಾ ಆಕ್ಷೇಪ, ನಮ್ಮನ್ನು ಕೆರಳಿಸಬೇಡಿ ಎಂದ ಡ್ರ್ಯಾಗನ್​

    ಚೀನಾ ಯೋಧರ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ 14 ಕೋರ್​ನ ಯೋಧರಾದ ನಿಮ್ಮೆಲ್ಲರ ಸಾಹಸ, ಪರಾಕ್ರಮ ಮನೆಮಾತಾಗಿದೆ. ನಿಮ್ಮ ಧೈರ್ಯ ಮತ್ತು ಸಾಹಸ ಇಲ್ಲಿರುವ ಪರ್ವತಶ್ರೇಣಿಗಳಿಗಿಂತಲೂ ಉನ್ನತವಾಗಿವೆ ಎಂದು ಹೇಳಿ ಯೋಧರ ಮನೋಬಲ ಹೆಚ್ಚಿಸಿದರು.

    ರಣಾಂಗಣದಲ್ಲಿ ವೀರಾಗ್ರಣಿಯರು: ವಿಶ್ವದ ಅತಿಎತ್ತರದ ರಣಾಂಗಣ ಎನಿಸಿಕೊಂಡಿರುವ ಲಡಾಖ್​ ಪ್ರದೇಶದಲ್ಲಿ ಮಹಿಳಾ ಯೋಧರು ಕೂಡ ಕಾರ್ಯನಿರ್ವಹಿಸುತ್ತಿರುವುದನ್ನು ಕಂಡು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದರು.

    ಗಡಿಭಾಗದ ರಣಾಂಗಣದಲ್ಲಿ ಮಹಿಳಾ ಯೋಧರನ್ನು ಕಂಡು ತುಂಬಾ ಸಂತೋಷವಾಗುತ್ತಿದೆ. ಈ ದೃಶ್ಯ ಸ್ಫೂರ್ತಿಯನ್ನು ಉಕ್ಕಿಸುತ್ತದೆ ಎಂದು ಹೇಳಿದರು.

    ಅತ್ಯಾಚಾರ ಯತ್ನದಲ್ಲಿ ವಿಫಲನಾದ ಕಾಮುಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಬೆಂಕಿ ಹಚ್ಚಿ ಕೊಲೆಗೈದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts