More

    21ರಿಂದ ಚಿನ್ನಾಭರಣಗಳ ಪ್ರದರ್ಶನ, ಮಾರಾಟ ಮೇಳ

    ಮದುವೆ ಹಾಗೂ ಶುಭಕಾರ್ಯಗಳಿಗೆ ಮೆರಗು ನೀಡಲು ಮೈಸೂರಿನಲ್ಲಿ ವಿನೂತನ ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ಮೇಳವನ್ನು ಆಯೋಜಿಸಲಾಗಿದೆ.

    ನಗರದ ರ್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಜು.21 ರಿಂದ 23ರವರೆಗೆ ಅಮೋಘವಾದ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ದೇಶದ 20 ಅಗ್ರ ಶ್ರೇಣಿಯ ಆಭರಣ ತಯಾರಕರು ಭಾಗವಹಿಸಲಿದ್ದಾರೆ. ಮೇಳವನ್ನು ಅಂದು ಮಧ್ಯಾಹ್ನ 12.30ಕ್ಕೆ ನಟಿ ನಿಶ್ವಿಕಾ ನಾಯ್ಡು ಉದ್ಘಾಟಿಸಲಿದ್ದಾರೆ. ಗೋಲ್ಡನ್ ಕ್ರೀಪರ್ ಸಂಸ್ಥೆಯ ಬಿ.ಎನ್.ಜಗದೀಶ್ ಮತ್ತು ಹೇಮಲತಾ ಜಗದೀಶ್ ಮೇಳವನ್ನು ಆಯೋಜಿಸುತ್ತಿದ್ದಾರೆ.

    ಆಭರಣ ಎಂದರೆ ಮಹಿಳೆಯರಿಗೆ ಅಚ್ಚುಮೆಚ್ಚಿನದಾಗಿದ್ದು, ನಂಬಿಕಸ್ಥರ ಹೂಡಿಕೆಯೂ ಆಗಿದೆ. ಈ ಮೇಳದಲ್ಲಿ ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ಸಂಸ್ಥೆಗಳು ಭಾಗವಹಿಸುತ್ತಿವೆ. ಮದುವೆ ಸಮಾರಂಭ ಹಾಗೂ ಹಬ್ಬದ ಶುಭ ಸಂದರ್ಭಕ್ಕಾಗಿ ಆಭರಣಗಳನ್ನು ಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ದೇಶದ ವಿವಿಧ ಕುಶಲಕರ್ಮಿಗಳು ತಯಾರಿಸಿದ ವಿಭಿನ್ನ ಶೈಲಿಯ ಆಭರಣಗಳು ಈ ಮೇಳದಲ್ಲಿ ದೊರೆಯಲಿವೆ.

    ಬೆಂಗಳೂರಿನ ಗಜರಾಜ್, ಕೀಯಾ, ಎಂ.ಪಿ. ಜ್ಯುವೆಲರ್ಸ್, ಪಂಚಕೇಸರಿ ಬಡೇರ, ಪಿಎಂಜೆ, ಸಿಂಹ ಜ್ಯುವೆಲರ್ಸ್, ಶ್ರೀ ಕುಮಾರನ್ ತಂಗಳಿಗೈ, ಶ್ರೀವಾರಿ, ಶ್ರೀ ಗಣೇಶ್ ಜೆಮ್ಸ್, ವಂಡರ್ ಡೈಮಂಡೈ, ರೂಪಂ ಸಿಲ್ವರ್, ಸ್ಯಾಂಚೀಸ್, ಮದನ್ ಜೆಮ್ಸ್, ರಾಜ್‌ಡೈಮಂಡ್ಸ್ (ಮೈಸೂರು), ಔರಾ(ನವದೆಹಲಿ), ಪನ್ನ ಜ್ಯುವೆಲರ್ಸ್ (ಹೈದರಾಬಾದ್), ಸುನೀಲ್ ಜ್ಯುವೆಲರ್ಸ್(ಜೈಪುರ್) ಮೇಳದಲ್ಲಿ ಭಾಗವಹಿಸುತ್ತಿರುವ ಪ್ರಮುಖ ಆಭರಣ ಮಳಿಗೆಗಳಾಗಿವೆ.ಗ್ರಾಹಕರ ಅಭಿರುಚಿ ಮತ್ತು ಆರ್ಥಿಕತೆಗೆ ಅಗನುಗುಣವಾಗಿ ಚಿನ್ನ ಮತ್ತು ವಜ್ರದ ಆಭರಣಗಳು ಮೈಸೂರಿನ ಜನತೆಗೆ ದೊರೆಯಲಿವೆ.

    ಎಲ್ಲ ಚಿನ್ನದ ಆಭರಣಗಳು ಬಿಐಎಸ್ ಹಾಲ್ ಮಾರ್ಕ್ ಹೊಂದಿರುತ್ತವೆ. ವಜ್ರಾಭರಣಗಳು ಅಂತಾರಾಷ್ಟ್ರೀಯ ಗುಣಮಟ್ಟದ ಜಿಐಎ/ಐಜಿಐ ಪ್ರಮಾಣಿತ ಹೊಂದಿರುತ್ತವೆ. ಆಭರಣ ಮಳಿಗೆಗಳ ಸದಸ್ಯರು, ಚಿನ್ನಾಭರಣ ಮತ್ತು ವಜ್ರಾಭರಣ ಬಗ್ಗೆ ಎಲ್ಲ ತರಹದ ಉಚಿತ ಮಾಹಿತಿಯನ್ನು ನೀಡುತ್ತಾರೆ. ಖರೀದಿದಾರರು ಹಳೆಯ ಚಿನ್ನವನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಗಿದೆ. ಮೇಳದ ನಂತರವೂ ಗ್ರಾಹಕರಿಗೆ ಆಭರಣಗಳಿಗೆ ಸಂಬಂಧಿಸಿದ ಸೇವೆಯನ್ನು ಒದಗಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts